ಇಂದು ಭಾರತ vs ಆಫ್ರಿಕಾ ವನಿತೆಯರ 2ನೇ ಟಿ 20

| Published : Jul 07 2024, 01:24 AM IST / Updated: Jul 07 2024, 04:54 AM IST

ಸಾರಾಂಶ

ಮೊದಲ ಪಂದ್ಯದಲ್ಲಿ ಸೋತಿರುವ ಭಾರತಕ್ಕೆ ಸರಣಿ ಸಮಬಲಗೊಳಿಸುವ ಗುರಿ. ಅತ್ತ ದಕ್ಷಿಣ ಆಫ್ರಿಕಾ ಟಿ20 ಸರಣಿ ಮೇಲೆ ಕಣ್ಣಿಟ್ಟಿದ್ದು, ಈ ಮೂಲಕ ಏಕದಿನ ಸರಣಿ ಸೋಲಿಗೆ ಸೇಡು ತೀರಿಸಿಕೊಳ್ಳುವ ಕಾತರದಲ್ಲಿದೆ.

ಚೆನ್ನೈ: ಆರಂಭಿಕ ಪಂದ್ಯದಲ್ಲಿ 12 ರನ್‌ ಸೋಲು ಕಂಡಿರುವ ಭಾರತ ಮಹಿಳಾ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಭಾನುವಾರ 2ನೇ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದು, 3 ಪಂದ್ಯಗಳ ಸರಣಿಯಲ್ಲಿ ಸಮಬಲಗೊಳಿಸಲು ಕಾಯುತ್ತಿದೆ. 

ಭಾರತ ಪ್ರವಾಸದಲ್ಲಿ ಮೊದಲ ಬಾರಿ ಗೆಲುವಿನ ಸಿಹಿ ಅನುಭವಿಸಿರುವ ದ.ಆಫ್ರಿಕಾ ಸರಣಿ ಗೆಲುವಿನ ನಿರೀಕ್ಷೆಯಲ್ಲಿದೆ.ಏಕದಿನ ಸರಣಿ ಹಾಗೂ ಏಕೈಕ ಟೆಸ್ಟ್‌ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿತ್ತು. ಆದರೆ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಹಲವು ಕ್ಯಾಚ್‌ ಕೈಚೆಲ್ಲಿದ ಪರಿಣಾಮ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ಸಾಧಾರಣ ಆಟದಿಂದಾಗಿ ಸೋಲನುಭಿಸಿತ್ತು.

ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರೆ ಮಾತ್ರ ಭಾರತಕ್ಕೆ ಗೆಲುವು ಸುಲಭವಾಗಲಿದೆ. ಸ್ಮೃತಿ ಮಂಧನಾಗೆ ಇತರ ಬ್ಯಾಟರ್‌ಗಳಿಂದ ಉತ್ತಮ ಬೆಂಬಲ ಸಿಗಬೇಕಿದೆ. ಈ ಪಂದ್ಯದಲ್ಲೂ ರನ್‌ ಮಳೆ ಹರಿಯುವ ನಿರೀಕ್ಷೆಯಿದ್ದು, ಬೌಲರ್‌ಗಳಿಗೆ ಅಗ್ನಿಪರೀಕ್ಷೆ ಎದುರಾಗಲಿದೆ.ಅತ್ತ ದಕ್ಷಿಣ ಆಫ್ರಿಕಾ ಟಿ20 ಸರಣಿ ಮೇಲೆ ಕಣ್ಣಿಟ್ಟಿದ್ದು, ಈ ಮೂಲಕ ಏಕದಿನ ಸರಣಿ ಸೋಲಿಗೆ ಸೇಡು ತೀರಿಸಿಕೊಳ್ಳುವ ಕಾತರದಲ್ಲಿದೆ.ಪಂದ್ಯ: ಸಂಜೆ 7ಕ್ಕೆ, ನೇರಪ್ರಸಾರ: ಸೋನಿ ಸ್ಪೋರ್ಟ್ಸ್‌ ನೆಟ್ವರ್ಕ್‌, ಸೋನಿ ಲೈವ್‌