ಇಂದಿನಿಂದ ಸಿಂಗಾಪುರ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಪ್ರಶಸ್ತಿ ಮೇಲೆ ಪಿ.ವಿ.ಸಿಂಧು ಕಣ್ಣು

| Published : May 28 2024, 01:02 AM IST / Updated: May 28 2024, 04:08 AM IST

ಇಂದಿನಿಂದ ಸಿಂಗಾಪುರ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಪ್ರಶಸ್ತಿ ಮೇಲೆ ಪಿ.ವಿ.ಸಿಂಧು ಕಣ್ಣು
Share this Article
  • FB
  • TW
  • Linkdin
  • Email

ಸಾರಾಂಶ

ಸಿಂಗಾಪುರದಲ್ಲಾದರೂ ಈಡೇರುತ್ತಾ ಪಿ.ವಿ.ಸಿಂಧು ಪ್ರಶಸ್ತಿ ಕನಸು. 2 ವರ್ಷಗಳಿಂದ ಒಂದೂ ಪ್ರಶಸ್ತಿ ಗೆಲ್ಲದ ಭಾರತದ ತಾರಾ ಶಟ್ಲರ್‌. ಪ್ಯಾರಿಸ್‌ ಒಲಿಂಪಿಕ್ಸ್‌ ಸಿದ್ಧತೆಗಾಗಿ ಈ ಟೂರ್ನಿಯನ್ನು ಬಳಸಿಕೊಳ್ಳಲಿರುವ ಭಾರತೀಯ ಆಟಗಾರರು.

ಸಿಂಗಾಪುರ: ಭಾರತದ ಅಗ್ರ ಶಟ್ಲರ್‌ಗಳಾದ ಪಿ.ವಿ.ಸಿಂಧು, ಎಚ್‌.ಎಸ್‌.ಪ್ರಣಯ್‌, ಲಕ್ಷ್ಯ ಸೇನ್‌, ಸಾತ್ವಿಕ್‌ ಸಾಯಿರಾಜ್‌-ಚಿರಾಗ್‌ ಶೆಟ್ಟಿ ಮಂಗಳವಾರದಿಂದ ಇಲ್ಲಿ ಆರಂಭಗೊಳ್ಳಲಿರುವ ಸಿಂಗಾಪುರ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರುವ ನಿರೀಕ್ಷೆಯೊಂದಿಗೆ ಕಣಕ್ಕಿಳಿಯಲಿದ್ದಾರೆ. 

ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಇನ್ನು ಕೇವಲ 2 ತಿಂಗಳು ಬಾಕಿ ಉಳಿದಿದ್ದು ಈ ಟೂರ್ನಿ ಬಳಿಕ ಭಾರತೀಯ ಶಟ್ಲರ್‌ಗಳ ಸಿದ್ಧತೆಗೆ ಇನ್ನು ಕೇವಲ 3 ಟೂರ್ನಿಗಳಷ್ಟೇ ಸಿಗಲಿದೆ.

 ಮಲೇಷ್ಯಾ ಮಾಸ್ಟರ್ಸ್‌ ಫೈನಲ್‌ನಲ್ಲಿ ಸೋತ ಸಿಂಧು, 2 ವರ್ಷಗಳಲ್ಲಿ ಮೊದಲ ಪ್ರಶಸ್ತಿ ಗೆಲ್ಲಲು ಎದುರು ನೋಡುತ್ತಿದ್ದರೆ, ಇತ್ತೀಚೆಗೆ ಥಾಯ್ಲೆಂಡ್‌ ಓಪನ್‌ ಪ್ರಶಸ್ತಿ ಜಯಿಸಿ ವಿಶ್ವ ಡಬಲ್ಸ್‌ ರ್‍ಯಾಂಕಿಂಗ್‌ನಲ್ಲಿ ಮತ್ತೆ ಅಗ್ರ ಸ್ಥಾನ ಪಡೆದ ಸಾತ್ವಿಕ್‌-ಚಿರಾಗ್‌ ಮತ್ತೊಂದು ಟ್ರೋಫಿ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.