ಸಾರಾಂಶ
ನವಿ ಮುಂಬೈ: ದೀಪ್ತಿ ಶರ್ಮಾ ಅವರ ಆಲ್ರೌಂಡ್ ಪ್ರದರ್ಶನದ ನೆರವಿನಿಂದ ಭಾರತ ಮಹಿಳಾ ತಂಡ, ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ಚೊಚ್ಚಲ ಟೆಸ್ಟ್ ಗೆಲುವಿನತ್ತ ದಾಪುಗಾಲಿರಿಸಿದೆ.ಇಲ್ಲಿ ನಡೆಯುತ್ತಿರುವ ಏಕೈಕ ಟೆಸ್ಟ್‌ನಲ್ಲಿ ಭಾರತ 2ನೇ ಇನ್ನಿಂಗ್ಸಲ್ಲಿ 478 ರನ್‌ಗಳ ಬೃಹತ್ ಮುನ್ನಡೆ ಪಡೆದಿದ್ದು, ಇಂಗ್ಲೆಂಡ್‌ಗೆ ಕೈಗೆಟುಕದಂತಹ ಗುರಿ ನೀಡುವಷ್ಟು ಸುಸ್ಥಿತಿಯಲ್ಲಿದೆ.ಮೊದಲ ಇನ್ನಿಂಗ್ಸಲ್ಲಿ 67 ರನ್ ಗಳಿಸಿ, ಭಾರತ 428 ರನ್ ಕಲೆಹಾಕಲು ನೆರವಾದ ದೀಪ್ತಿ, ಬಳಿಕ 5.3 ಓವರಲ್ಲಿ 4 ಮೇಡನ್ ಸಹಿತ ಕೇವಲ 7 ರನ್ ನೀಡಿ 5 ವಿಕೆಟ್ ಕಬಳಿಸಿ ಇಂಗ್ಲೆಂಡ್ 136 ರನ್‌ಗೆ ಆಲೌಟ್ ಆಗಲು ಕಾರಣರಾದರು. ಇದರಿಂದಾಗಿ ಭಾರತ ಮೊದಲ ಇನ್ನಿಂಗ್ಸಲ್ಲಿ 292 ರನ್‌ಗಳ ದೊಡ್ಡ ಮುನ್ನಡೆ ಪಡೆಯಿತು.ಫಾಲೋ ಆನ್ ಹೇರದ ಭಾರತ, 2ನೇ ಇನ್ನಿಂಗ್ಸ್ ಆರಂಭಿಸಿ 2ನೇ ದಿನದಂತ್ಯಕ್ಕೆ 6 ವಿಕೆಟ್‌ಗೆ 186 ರನ್ ಕಲೆಹಾಕಿತು. 2ನೇ ದಿನ ಬರೋಬ್ಬರಿ 19 ವಿಕೆಟ್ ಪತನಗೊಂಡವು. ಇದರಲ್ಲಿ 15 ವಿಕೆಟ್‌ಗಳು ಸ್ಪಿನ್ನರ್‌ಗಳ ಪಾಲಾದವು.ಪಂದ್ಯದಲ್ಲಿ ಇನ್ನೂ 2 ದಿನ ಬಾಕಿ ಇದ್ದು, ಭಾರತ ದೊಡ್ಡ ಗೆಲುವಿನ ಮೇಲೆ ಕಣ್ಣಿಟ್ಟಿದೆ. 3ನೇ ದಿನವಾದ ಶನಿವಾರವೇ ಪಂದ್ಯ ಮುಕ್ತಾಯಗೊಂಡರೂ ಅಚ್ಚರಿಯಿಲ್ಲ.ಸ್ಕೋರ್: ಭಾರತ 428 ಹಾಗೂ 186/6 (ಹರ್ಮನ್‌ಪ್ರೀತ್ 44*, ಶಫಾಲಿ 33, ಡೀನ್ 4-68), ಇಂಗ್ಲೆಂಡ್ 136/10 (ಸ್ಕೀವರ್ 59, ದೀಪ್ತಿ 5-7, ಸ್ನೇಹ 2-25)