2025-2027ರ ಟೆಸ್ಟ್‌ ವಿಶ್ವ ಚಾಂಪಿಯನ್‌ಶಿಪ್‌ನ ಭಾಗವಾಗಿ ಭಾರತ vs ಇಂಗ್ಲೆಂಡ್‌ ನಡುವೆ 2025ರಲ್ಲಿ ಐದು ಪಂದ್ಯಗಳ ಟೆಸ್ಟ್‌ ಸರಣಿ

| Published : Aug 23 2024, 01:08 AM IST / Updated: Aug 23 2024, 04:04 AM IST

2025-2027ರ ಟೆಸ್ಟ್‌ ವಿಶ್ವ ಚಾಂಪಿಯನ್‌ಶಿಪ್‌ನ ಭಾಗವಾಗಿ ಭಾರತ vs ಇಂಗ್ಲೆಂಡ್‌ ನಡುವೆ 2025ರಲ್ಲಿ ಐದು ಪಂದ್ಯಗಳ ಟೆಸ್ಟ್‌ ಸರಣಿ
Share this Article
  • FB
  • TW
  • Linkdin
  • Email

ಸಾರಾಂಶ

ಮ್ಯಾಂಚೆಸ್ಟರ್‌ನಲ್ಲಿ ಜು.23ರಿಂದ 27ರ ವರೆಗೆ 4ನೇ ಟೆಸ್ಟ್‌ ಹಾಗೂ ಓವಲ್‌ನಲ್ಲಿ ಜು.31ರಿಂದ ಆ.4ರ ವರೆಗೆ ಕೊನೆ ಟೆಸ್ಟ್ ಪಂದ್ಯ ಆಯೋಜನೆಗೊಳ್ಳಲಿದೆ.

ಲಂಡನ್‌: ಭಾರತ ಹಾಗೂ ಇಂಗ್ಲೆಂಡ್‌ ನಡುವೆ 2025ರಲ್ಲಿ 5 ಪಂದ್ಯಗಳ ಟೆಸ್ಟ್‌ ಸರಣಿ ನಡೆಯಲಿದೆ. ಸರಣಿಯ ವೇಳಾಪಟ್ಟಿ ಗುರುವಾರ ಪ್ರಕಟಗೊಂಡಿದೆ. ಈ ಸರಣಿ 2025-2027ರ ಟೆಸ್ಟ್‌ ವಿಶ್ವ ಚಾಂಪಿಯನ್‌ಶಿಪ್‌ನ ಭಾಗವಾಗಿರಲಿದೆ. ಮೊದಲ ಪಂದ್ಯ ಲೀಡ್ಸ್‌ನಲ್ಲಿ ಜೂ.20ಕ್ಕೆ ಆರಂಭಗೊಳ್ಳಲಿದೆ. ಬಳಿಕ ಬರ್ಮಿಂಗ್‌ಹ್ಯಾಮ್‌ನಲ್ಲಿ ಜು.2ರಿಂದ 6ರ ವರೆಗೆ 2ನೇ ಟೆಸ್ಟ್‌, ಲಾರ್ಡ್ಸ್‌ನಲ್ಲಿ ಜು.10-14ಕ್ಕೆ 3ನೇ ಟೆಸ್ಟ್‌ ನಿಗದಿಯಾಗಿದೆ. ಮ್ಯಾಂಚೆಸ್ಟರ್‌ನಲ್ಲಿ ಜು.23ರಿಂದ 27ರ ವರೆಗೆ 4ನೇ ಟೆಸ್ಟ್‌, ಓವಲ್‌ನಲ್ಲಿ ಜು.31ರಿಂದ ಆ.4ರ ವರೆಗೆ ಕೊನೆ ಟೆಸ್ಟ್ ಪಂದ್ಯ ಆಯೋಜನೆಗೊಳ್ಳಲಿದೆ.

ಮೊದಲ ಟೆಸ್ಟ್‌: ಲಂಕಾ ವಿರುದ್ಧ ಇಂಗ್ಲೆಂಡ್‌ಗೆ ಇನ್ನಿಂಗ್ಸ್‌ ಮುನ್ನಡೆ

ಮ್ಯಾಂಚೆಸ್ಟರ್‌: ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್‌ ಮೊದಲ ಇನ್ನಿಂಗ್ಸ್‌ ಮುನ್ನಡೆ ಸಾಧಿಸಿದೆ. ಲಂಕಾ ಮೊದಲ ದಿನ 236 ರನ್‌ಗೆ ಆಲೌಟಾಗಿತ್ತು. ಇದಕ್ಕುತ್ತರವಾಗಿ ಬ್ಯಾಟ್‌ ಮಾಡುತ್ತಿರುವ ಇಂಗ್ಲೆಂಡ್‌ ತಂಡ ಗುರುವಾರವೇ ಮುನ್ನಡೆ ಸಾಧಿಸಿತು. 67 ರನ್‌ ಗಳಿಸುವಷ್ಟರಲ್ಲಿ ಬೆನ್‌ ಡಕೆಟ್‌(18), ಓಲಿ ಪೋಪ್‌(06) ಹಾಗೂ ಡೇನಿಲ್‌ ಲಾರೆನ್ಸ್‌(30) ವಿಕೆಟ್‌ ಕಳೆದುಕೊಂಡ ತಂಡಕ್ಕೆ ಜೋ ರೂಟ್‌(42) ಹಾಗೂ ಹ್ಯಾರಿ ಬ್ರೂಕ್‌(56) ಆಸರೆಯಾದರು. ಜೆಮೀ ಸ್ಮಿತ್‌ ಅರ್ಧಶತಕ ಗಳಿಸಿ ಕ್ರೀಸ್‌ ಕಾಯ್ದುಕೊಂಡಿದ್ದಾರೆ.