ಇಂಡೋ-ಗಲ್ಫ್‌ ಥ್ರೋಬಾಲ್‌: ಭಾರತ ವನಿತೆಯರಿಗೆ ಬೆಳ್ಳಿ

| Published : Feb 26 2024, 01:33 AM IST

ಸಾರಾಂಶ

ಇಂಡೋ-ಗಲ್ಫ್ ಅಂತಾರಾಷ್ಟ್ರೀಯ ಥ್ರೋಬಾಲ್ ಟೂರ್ನಿಯಲ್ಲಿ ಭಾರತ ಮಹಿಳಾ ತಂಡ ಬೆಳ್ಳಿ ಪದಕ ಗೆದ್ದುಕೊಂಡಿದೆ.

ಮನಾಮ(ಬಹರೈನ್‌): ಇಂಡೋ-ಗಲ್ಫ್ ಅಂತಾರಾಷ್ಟ್ರೀಯ ಥ್ರೋಬಾಲ್ ಟೂರ್ನಿಯಲ್ಲಿ ಭಾರತ ಮಹಿಳಾ ತಂಡ ಬೆಳ್ಳಿ ಪದಕ ಗೆದ್ದುಕೊಂಡಿದೆ. ಸಂಪೂರ್ಣ ಹೆಗಡೆ ನಾಯಕತ್ವದ ಭಾರತ ತಂಡ ಫೈನಲ್‌ನಲ್ಲಿ ಅಮೆರಿಕ ವಿರುದ್ಧ ಸೋತು ರಜತ ಪದಕಕ್ಕೆ ತೃಪ್ತಿಪಟ್ಟುಕೊಂಡಿತು. ಪಂದ್ಯಾವಳಿಯಲ್ಲಿ ಒಟ್ಟು 7 ತಂಡಗಳು ಭಾಗವಹಿಸಿದ್ದವು. ಭಾರತ, ಯುಎಸ್ಎ, ಸೌದಿ ಅರೇಬಿಯಾ ಮತ್ತು ಬಹರೈನ್‌ 4 ತಂಡಗಳಿದ್ದವು. ಭಾರತ ಲೀಗ್‌ ಹಂತದಲ್ಲಿ ಎಲ್ಲಾ 6 ಪಂದ್ಯಗಳಲ್ಲಿ ಗೆದ್ದು ಅಜೇಯವಾಗಿಯೇ ಸೆಮಿಫೈನಲ್‌ ಪ್ರವೇಶಿಸಿತ್ತು.

ಏಷ್ಯಾ ಆರ್ಚರಿ ಕೂಟದಲ್ಲಿ ಭಾರತಕ್ಕೆ10 ಸ್ವರ್ಣ ಪದಕ

ಬಗ್ದಾದ್‌: ಏಷ್ಯಾ ಕಪ್‌ ಆರ್ಚರಿ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ದೀಪಿಕಾ ಕುಮಾರಿ 2 ಚಿನ್ನದ ಪದಕ ಗೆದ್ದಿದ್ದಾರೆ. ಭಾರತಕ್ಕೆ ಒಟ್ಟಾರೆ 14 ಪದಕಗಳು ಲಭಿಸಿವೆ. ಕೊನೆ ದಿನ ಭಾರತೀಯರು ಪ್ರಾಬಲ್ಯ ಸಾಧಿಸಿದ್ದು, ಎಲ್ಲಾ 7 ಫೈನಲ್‌ಗಲ್ಲಿ ಜಯಗಳಿಸಿದರು. ಒಟ್ಟಾರೆ 10 ಚಿನ್ನ, 3 ಬೆಳ್ಳಿ, 1 ಕಂಚಿನೊಂದಿಗೆ ಭಾರತ ಅಭಿಯಾನ ಕೊನೆಗೊಳಿಸಿತು. ದೀಪಿಕಾ ರೀಕರ್ವ್‌ ವೈಯಕ್ತಿಕ, ತಂಡ ವಿಭಾಗದಲ್ಲಿ ಚಿನ್ನ ಗೆದ್ದರು. ಪುರುಷ, ಮಿಶ್ರ ತಂಡಗಳಿಗೂ ಬಂಗಾರ ಲಭಿಸಿತು.