ಐಪಿಎಲ್‌ ಇಂಪ್ಯಾಕ್ಟ್‌ ಆಟಗಾರ ನಿಯಮದ ಬಗ್ಗೆ ವಿರಾಟ್‌ ಕೊಹ್ಲಿ ಆಕ್ಷೇಪ!

| Published : May 19 2024, 01:47 AM IST / Updated: May 19 2024, 04:22 AM IST

ಐಪಿಎಲ್‌ ಇಂಪ್ಯಾಕ್ಟ್‌ ಆಟಗಾರ ನಿಯಮದ ಬಗ್ಗೆ ವಿರಾಟ್‌ ಕೊಹ್ಲಿ ಆಕ್ಷೇಪ!
Share this Article
  • FB
  • TW
  • Linkdin
  • Email

ಸಾರಾಂಶ

ಇಂಪ್ಯಾಕ್ಟ್‌ ಆಟಗಾರ ನಿಯಮದ ಬಗ್ಗೆ ರೋಹಿತ್‌ ಶರ್ಮಾ ಬಳಿಕ ಇದೀಗ ವಿರಾಟ್‌ ಕೊಹ್ಲಿಯಿಂದಲೂ ಆಕ್ಷೇಪ. ಈ ನಿಯಮದಿಂದಾಗಿ ಆಟದಲ್ಲಿ ಸಮತೋಲನವೇ ಇಲ್ಲದಂತಾಗಿದೆ ಎಂದ ದಿಗ್ಗಜ ಕ್ರಿಕೆಟಿಗ.

ಬೆಂಗಳೂರು: ಐಪಿಎಲ್‌ನಲ್ಲಿ ಜಾರಿಯಲ್ಲಿರುವ ಇಂಪ್ಯಾಕ್ಟ್‌ ಆಟಗಾರ ನಿಯಮಕ್ಕೆ ತಾರಾ ಆಟಗಾರ ವಿರಾಟ್‌ ಕೊಹ್ಲಿ ಆಕ್ಷೇಪ ವ್ಯಕ್ತಡಿಸಿದ್ದು, ಈ ನಿಯಮದಿಂದಾಗಿ ಕ್ರಿಕೆಟ್‌ ಆಟ ಸಮತೋಲನವನ್ನೇ ಕಳೆದುಕೊಂಡಿದೆ ಎಂದಿದ್ದಾರೆ. 

ಇತ್ತೀಚೆಗೆ ರೋಹಿತ್‌ ಶರ್ಮಾ ಇಂಪ್ಯಾಕ್ಟ್‌ ಆಟಗಾರ ನಿಯಮಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಇದಕ್ಕೆ ಸಂದರ್ಶನವೊಂದರಲ್ಲಿ 

 ದನಿಗೂಡಿಸಿರುವ ಕೊಹ್ಲಿ, ‘ರೋಹಿತ್‌ ಹೇಳಿಕೆಗೆ ನನ್ನ ಬೆಂಬಲವಿದೆ. ಇಂಪ್ಯಾಕ್ಟ್‌ ನಿಯಮದಿಂದ ಮನರಂಜನೆ ಲಭಿಸುತ್ತಿದ್ದರೂ, ಪಂದ್ಯದಲ್ಲಿ ಸಮತೋಲನ ಇಲ್ಲವಾಗುತ್ತಿದೆ. ಕ್ರಿಕೆಟ್‌ನಲ್ಲಿ ಬ್ಯಾಟ್ ಮತ್ತು ಬಾಲ್ ನಡುವೆ ಸಮತೋಲನ ಇರಬೇಕು ಎಂದಿದ್ದಾರೆ. 

ತಂಡದಲ್ಲಿ ಓರ್ವ ಬ್ಯಾಟರ್‌ ಹೆಚ್ಚಾಗಿದ್ದಕ್ಕೇ ನಾನು ಪವರ್‌-ಪ್ಲೇನಲ್ಲಿ 200ರ ಸ್ಟ್ರೈಕ್‌ರೇಟ್‌ನಲ್ಲಿ ಆಡುತ್ತಿದ್ದೇನೆ. 8ನೇ ಕ್ರಮಾಂಕದಲ್ಲೂ ಬ್ಯಾಟರ್‌ಗಳು ಕಾಯುತ್ತಿರುತ್ತಾರೆ. ಹೀಗಾಗಿ ಈ ನಿಯಮದ ಬಗ್ಗೆ ನನಗೆ ಮಾತ್ರವಲ್ಲ, ಬಹುತೇಕ ಆಟಗಾರರಿಗೂ ಆಕ್ಷೇಪವಿದೆ. ಇದರ ಬಗ್ಗೆ ಜಯ್ ಶಾ ಪರಿಶೀಲನೆ ನಡೆಸಿ, ಸೂಕ್ತ ನಿರ್ಧಾರ ಕೈಗೊಳ್ಳುವ ಭರವಸೆ ಇದೆ’ ಎಂದು ಕೊಹ್ಲಿ ತಿಳಿಸಿದ್ದಾರೆ.