ಇತ್ತೀಚೆಗೆ ಮುಂಬೈ- ಆರ್‌ಸಿಬಿ ಪಂದ್ಯದಲ್ಲಿ ರೆಫ್ರಿ ಜಾವಗಲ್ ಶ್ರೀನಾಥ್ ಟಾಸ್‌ ನ ಫಲಿತಾಂಶವನ್ನು ಬದಲಾಯಿಸಿದ್ದಾಗಿ ಸಾಮಾಜಿಕ ತಾಣಗಳಲ್ಲಿ ಆರೋಪಗಳು ಕೇಳಿಬಂದಿದ್ದವು.

ಚಂಡೀಗಢ: ಇತ್ತೀಚೆಗೆ ಆರ್‌ಸಿಬಿ-ಮುಂಬೈ ನಡುವಿನ ಪಂದ್ಯದ ಟಾಸ್‌ಗೆ ಸಂಬಂಧಿಸಿದಂತೆ ಸಾಮಾಜಿಕ ತಾಣಗಳಲ್ಲಿ ಚರ್ಚೆಗಳು ನಡೆದಿತ್ತು. ಟಾಸ್‌ನಲ್ಲಿ ಕಳ್ಳಾಟ ನಡೆಯುತ್ತಿದೆ ಎಂದು ಹಲವರು ಆರೋಪಿಸಿದ್ದರು. 

ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಆಯೋಜಕರು ಹೊಸ ಕ್ರಮ ಕೈಗೊಂಡಿದ್ದಾರೆ. ಗುರುವಾರದ ಮುಂಬೈ-ಪಂಜಾಬ್‌ ಪಂದ್ಯಕ್ಕೂ ಮುನ್ನ ಟಾಸ್‌ ವೇಳೆ ನಾಣ್ಯವನ್ನು ಕ್ಯಾಮರಾ ಮೂಲಕ ಝೂಮ್‌ ಮಾಡಿ ತೋರಿಸಲಾಯಿತು. ಆ ಬಳಿಕವೇ ರೆಫ್ರಿಗಳು ನಾಣ್ಯವನ್ನು ಎತ್ತಿಕೊಂಡರು. ಮುಂಬೈ- ಆರ್‌ಸಿಬಿ ಪಂದ್ಯದಲ್ಲಿ ರೆಫ್ರಿ ಜಾವಗಲ್ ಶ್ರೀನಾಥ್ ಟಾಸ್‌ ನ ಫಲಿತಾಂಶವನ್ನು ಬದಲಾಯಿಸಿದ್ದಾಗಿ ಸಾಮಾಜಿಕ ತಾಣಗಳಲ್ಲಿ ಆರೋಪಗಳು ಕೇಳಿಬಂದಿದ್ದವು.

ಸಿಎಸ್‌ಕೆಗೆ ಕಾನ್‌ವೇ ಬದಲು ಗ್ಲೀಸನ್‌ ಸೇರ್ಪಡೆ

ಚೆನ್ನೈ: ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ಇಂಗ್ಲೆಂಡ್‌ ವೇಗಿ ರಿಚರ್ಡ್‌ ಗ್ಲೀಸನ್‌ರನ್ನು ತಂಡಕ್ಕೆ ಸೇರ್ಪಡೆಗೊಳಿಸಿಕೊಂಡಿದೆ. ಇಂಗ್ಲೆಂಡ್‌ ಪರ 6 ಟಿ20 ಪಂದ್ಯಗಳನ್ನು ಆಡಿರುವ ಗ್ಲೀಸನ್‌, ನ್ಯೂಜಿಲೆಂಡ್‌ನ ಡೆವೊನ್‌ ಕಾನ್‌ವೇ ಬದಲು ತಂಡ ಕೂಡಿಕೊಳ್ಳಲಿದ್ದಾರೆ. 

ಐಪಿಎಲ್‌ ಆರಂಭಕ್ಕೂ ಮುನ್ನ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ ವೇಳೆ ಕಾನ್‌ವೇ ಕೈಬೆರಳಿನ ಗಾಯಕ್ಕೆ ತುತ್ತಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಒಟ್ಟಾರೆ 90 ಟಿ20 ಪಂದ್ಯಗಳಲ್ಲಿ 101 ವಿಕೆಟ್‌ ಕಿತ್ತಿರುವ ಗ್ಲೀಸನ್‌ಗೆ ಸಿಎಸ್‌ಕೆ 50 ಲಕ್ಷ ರು. ಸಂಭಾವನೆ ನೀಡಲಿದೆ.