ಐಪಿಎಲ್‌: ಇಂದು ಸಿಎಸ್‌ಕೆ vs ಪಂಜಾಬ್‌

| Published : May 01 2024, 01:18 AM IST

ಸಾರಾಂಶ

ತನ್ನ ಭದ್ರಕೋಟೆ ಚೆಪಾಕ್‌ ಕ್ರೀಡಾಂಗಣದಲ್ಲಿ ಇಂದು ಪಂಜಾಬ್‌ ಕಿಂಗ್ಸ್‌ ತಂಡದ ಸವಾಲು ಎದುರಿಸಲಿರುವ ಚೆನ್ನೈ ಸೂಪರ್‌ ಕಿಂಗ್ಸ್‌. ಅಸ್ಥಿರ ಆಟವಾಡುತ್ತಿರುವ ಚೆನ್ನೈಗೆ ಸ್ಥಿರತೆ ಕಂಡುಕೊಳ್ಳುವ ಗುರಿ. ಪಂಜಾಬ್‌ಗೆ ಡು ಆರ್‌ ಡೈ ಪಂದ್ಯ.

ಚೆನ್ನೈ: ಅಸ್ಥಿರ ಆಟದ ಮೂಲಕ ಅಚ್ಚರಿ ಮೂಡಿಸಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ಬುಧವಾರ, ಅಸ್ಥಿರ ಆಟಕ್ಕೆ ಹೆಸರುವಾಸಿಯಾಗಿರುವ ಮತ್ತೊಂದು ತಂಡ ಪಂಜಾಬ್‌ ಕಿಂಗ್ಸ್‌ ವಿರುದ್ಧ ಸೆಣಸಲಿದೆ. ಚೆನ್ನೈ 9 ಪಂದ್ಯಗಳಿಂದ 10 ಅಂಕ ಗಳಿಸಿದ್ದು, ಪ್ಲೇ-ಆಫ್‌ ದೃಷ್ಟಿಯಿಂದ ಈ ಪಂದ್ಯ ಬಹಳ ಮಹತ್ವದೆನಿಸಿದೆ. ಹಾಲಿ ಚಾಂಪಿಯನ್‌ ತಂಡಕ್ಕೆ ಪಂಜಾಬ್‌ನ ಸ್ಫೋಟಕ ಆಟಗಾರರ ಭಯವಿದ್ದು, ತನ್ನ ಭದ್ರಕೋಟೆ ಚೆಪಾಕ್‌ ಕ್ರೀಡಾಂಗಣದಲ್ಲಿ ಮೇಲುಗೈ ಸಾಧಿಸಲು ಎದುರು ನೋಡುತ್ತಿದೆ. ಪಂಜಾಬ್‌ 9 ಪಂದ್ಯಗಳಲ್ಲಿ ಕೇವಲ 3ರಲ್ಲಿ ಗೆದ್ದಿದ್ದು, ಈ ಪಂದ್ಯದಲ್ಲಿ ಸೋತರೆ, ಪ್ಲೇ-ಆಫ್‌ ಹಾದಿ ಮತ್ತಷ್ಟು ಕಠಿಣಗೊಳ್ಳಲಿದೆ. ಪಂದ್ಯ ಆರಂಭ: ಸಂಜೆ 7.30ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಜಿಯೋ ಸಿನಿಮಾಕೆಕೆಆರ್ ವೇಗಿ ರಾಣಾಗೆ ದಂಡ, ೧ ಪಂದ್ಯಕ್ಕೆ ಬ್ಯಾನ್!

ನವದೆಹಲಿ: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಅನುಚಿತ ವರ್ತನೆ ತೋರಿದ ಕೋಲ್ಕತಾ ನೈಟ್‌ರೈಡರ್ಸ್‌ ತಂಡದ ವೇಗದ ಬೌಲರ್ ಹರ್ಷಿತ್ ರಾಣಾಗೆ ಪಂದ್ಯದ ಸಂಭಾವನೆಯ ಶೇ.೧೦೦ರಷ್ಟು ದಂಡ ವಿಧಿಸಲಾಗಿದ್ದು, ೧ ಪಂದ್ಯಕ್ಕೆ ಬ್ಯಾನ್ ಸಹ ಮಾಡಲಾಗಿದೆ. ಡೆಲ್ಲಿಯ ಪೊರೆಲ್‌ರನ್ನು ಔಟ್ ಮಾಡಿದಾಗ ಹರ್ಷಿತ್ ಅನುಚಿತ ವಾಗಿ ವರ್ತಿಸಿದ್ದರು. ಸನ್‌ರೈಸರ್ಸ್‌ ವಿರುದ್ಧದ ಪಂದ್ಯದಲ್ಲೂ ಅನುಚಿತ ವರ್ತನೆ ತೋರಿ ದಂಡ ಹಾಕಿಸಿಕೊಂಡಿದ್ದರು.ಐಪಿಎಲ್‌ ಪ್ಲೇ-ಆಫ್ ಹಂತಕ್ಕೆ ಇಂಗ್ಲೆಂಡ್ ಪ್ಲೇಯರ್ಸ್‌ ಅಲಭ್ಯ

ಲಂಡನ್: ಟಿ೨೦ ವಿಶ್ವಕಪ್‌ಗೆ ಸಿದ್ಧತೆ ನಡೆಸುವ ಸಲುವಾಗಿ ಇಂಗ್ಲೆಂಡ್ ತಂಡ ಮೇ ೨೨ರಿಂದ ಪಾಕಿಸ್ತಾನ ವಿರುದ್ಧ ಟಿ೨೦ ಸರಣಿಯನ್ನು ಆಡಲಿದೆ. ಈ ಕಾರಣದಿಂದಾಗಿ ಇಂಗ್ಲೆಂಡ್‌ನ ಆಟಗಾರರು ಐಪಿಎಲ್ ಪ್ಲೇ-ಆಫ್‌ಗೆ ಲಭ್ಯರಿರುವುದಿಲ್ಲ ಎಂದು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಸ್ಪಷ್ಟಪಡಿಸಿದೆ. ಸದ್ಯ ಐಪಿಎಲ್‌ನಲ್ಲಿ ಆಡುತ್ತಿರುವ ಬಟ್ಲರ್, ಸಾಲ್ಟ್, ಅಲಿ, ಕರ‌್ರನ್, ಜ್ಯಾಕ್ಸ್, ಬೇರ್‌ಸ್ಟೋವ್, ಲಿವಿಂಗ್‌ಸ್ಟೋನ್, ಟಾಪ್ಲಿ ವಿಶ್ವಕಪ್‌ಗೆ ಆಯ್ಕೆಯಾಗಿದ್ದಾರೆ.