ಐಪಿಎಲ್‌: ಕೋಲ್ಕತಾ ವಿರುದ್ಧ ಇಂದು ಬೃಹತ್‌ ಗೆಲುವಿಗೆ ಟೈಟಾನ್ಸ್‌ ಕಾತರ

| Published : May 13 2024, 12:02 AM IST / Updated: May 13 2024, 04:19 AM IST

ಐಪಿಎಲ್‌: ಕೋಲ್ಕತಾ ವಿರುದ್ಧ ಇಂದು ಬೃಹತ್‌ ಗೆಲುವಿಗೆ ಟೈಟಾನ್ಸ್‌ ಕಾತರ
Share this Article
  • FB
  • TW
  • Linkdin
  • Email

ಸಾರಾಂಶ

ಇಂದು ಗುಜರಾತ್‌ ಟೈಟಾನ್ಸ್‌ಗೆ ಎದುರಾಗಲಿದೆ ಕೋಲ್ಕತಾ ನೈಟ್‌ರೈಡರ್ಸ್‌ ಸವಾಲು. ಪ್ಲೇ-ಆಫ್‌ ಆಸೆಯನ್ನು ಇನ್ನೂ ಜೀವಂತವಾಗಿರಿಸಿಕೊಂಡಿರುವ ಟೈಟಾನ್ಸ್‌ಗೆ ಬೇಕು ಬೃಹತ್‌ ಗೆಲುವು. ಕೆಕೆಆರ್‌ ಗೆದ್ದರೆ ಪ್ಲೇ-ಆಫ್‌ನ ಕ್ವಾಲಿಫೈಯರ್‌-1 ಪಂದ್ಯಕ್ಕೆ ಅರ್ಹತೆ.

ಅಹಮದಾಬಾದ್‌: ಚೆನ್ನೈ ವಿರುದ್ಧ ಅಭೂತಪೂರ್ವ ಗೆಲುವಿನೊಂದಿಗೆ ತಾನೂ ಪ್ಲೇ-ಆಫ್‌ ರೇಸ್‌ನಲ್ಲಿ ಇರುವುದಾಗಿ ಸಂದೇಶ ರವಾನಿಸಿರುವ ಮಾಜಿ ಚಾಂಪಿಯನ್‌ ಗುಜರಾತ್‌ ಟೈಟಾನ್ಸ್‌ ಸೋಮವಾರ ಕೋಲ್ಕತಾ ವಿರುದ್ಧ ಸೆಣಸಾಡಲಿದೆ. ತಂಡಕ್ಕಿದು ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು, ಬೃಹತ್‌ ಗೆಲುವೊಂದೇ ತಂಡದ ಮುಂದಿರುವ ಗುರಿ. 

ಗುಜರಾತ್‌ 12 ಪಂದ್ಯಗಳನ್ನಾಡಿದ್ದು, 5ರಲ್ಲಿ ಗೆದ್ದು ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ತಂಡದ ನೆಟ್‌ ರನ್‌ರೇಟ್‌(-1.063) ಕಳಪೆಯಾಗಿರುವುದರಿಂದ ಪ್ಲೇ-ಆಫ್‌ಗೇರುವುದು ಕಷ್ಟ. ಆದರೂ ಕೊನೆ 2 ಪಂದ್ಯಗಳಲ್ಲಿ ಬೃಹತ್‌ ಅಂತರದಲ್ಲಿ ಗೆದ್ದು, ಇತರ ತಂಡಗಳ ಫಲಿತಾಂಶ ತನ್ನ ಪರವಾಗಿ ಬಂದರೆ ತಂಡಕ್ಕೆ ಪ್ಲೇ-ಆಫ್‌ ಅದೃಷ್ಟ ಸಿಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಒಂದು ವೇಳೆ ಸೋತರೆ ತಂಡ ಪ್ಲೇ-ಆಫ್‌ ರೇಸ್‌ನಿಂದ ಅಧಿಕೃತವಾಗಿ ಹೊರಬೀಳಲಿದೆ.

ಮತ್ತೊಂದೆಡೆ ಕೆಕೆಆರ್‌ 12ರಲ್ಲಿ 9 ಪಂದ್ಯಗಳನ್ನು ಗೆದ್ದು ಪ್ಲೇ-ಆಫ್‌ಗೆ ಅಧಿಕೃತ ಪ್ರವೇಶ ಪಡೆದಿದೆ. ಸದ್ಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ತಂಡ ಗುಜರಾತ್‌ ವಿರುದ್ಧ ಗೆದ್ದು ಅಗ್ರ-2ರಲ್ಲೇ ಉಳಿದುಕೊಳ್ಳುವ ಕಾತರಲ್ಲಿದೆ. ಕೆಕೆಆರ್‌ ಈ ಪಂದ್ಯ ಜಯಿಸಿದರೆ, ಪ್ಲೇ-ಆಫ್‌ನ ಕ್ವಾಲಿಫೈಯರ್‌-1 ಪಂದ್ಯಕ್ಕೆ ಅರ್ಹತೆ ಪಡೆಯಲಿದೆ.ಒಟ್ಟು ಮುಖಾಮುಖಿ: 03ಕೆಕೆಆರ್‌: 01

ಟೈಟಾನ್ಸ್‌: 02ಸಂಭವನೀಯ ಆಟಗಾರರ ಪಟ್ಟಿ:ಕೆಕೆಆರ್‌: ಸಾಲ್ಟ್‌, ನರೈನ್‌, ವೆಂಕಟೇಶ್‌, ಶ್ರೇಯಸ್‌(ನಾಯಕ), ರಿಂಕು, ನಿತೀಶ್‌, ರಸೆಲ್‌, ರಮಣ್‌ದೀಪ್‌, ಸ್ಟಾರ್ಕ್‌, ಹರ್ಷಿತ್‌, ವರುಣ್‌.

ಟೈಟಾನ್ಸ್: ಗಿಲ್‌(ನಾಯಕ), ಸುದರ್ಶನ್‌, ಶಾರುಖ್‌, ಮಿಲ್ಲರ್‌, ವೇಡ್‌, ತೆವಾಟಿಯಾ, ರಶೀದ್‌, ನೂರ್‌, ಉಮೇಶ್‌, ಮೋಹಿತ್‌, ಕಾರ್ತಿಕ್‌ ತ್ಯಾಗಿ.ಪಂದ್ಯ: ಸಂಜೆ 7.30ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಜಿಯೋ ಸಿನಿಮಾ