ಐಪಿಎಲ್‌: ಕೆಕೆಆರ್‌ಗೆ ತವರಲ್ಲಿಂದು ಲಖನೌ ಜೈಂಟ್ಸ್‌ ಸವಾಲು

| Published : Apr 14 2024, 01:48 AM IST / Updated: Apr 14 2024, 05:14 AM IST

ಐಪಿಎಲ್‌: ಕೆಕೆಆರ್‌ಗೆ ತವರಲ್ಲಿಂದು ಲಖನೌ ಜೈಂಟ್ಸ್‌ ಸವಾಲು
Share this Article
  • FB
  • TW
  • Linkdin
  • Email

ಸಾರಾಂಶ

ಈಡನ್‌ ಗಾರ್ಡನ್ಸ್‌ನಲ್ಲಿ ಇಂದು ರೋಚಕ ಹಣಾಹಣಿ. ಕೋಲ್ಕತಾ ನೈಟ್‌ರೈಡರ್ಸ್‌ಗೆ ಎದುರಾಗಲಿದೆ ಲಖನೌ ಸೂಪರ್‌ಜೈಂಟ್ಸ್‌. ತವರಿನಲ್ಲಿ ಸತತ 5 ಪಂದ್ಯ ಆಡಲಿರುವ ಕೆಕೆಆರ್‌. ತವರಿನ ಲಾಭವೆತ್ತುವ ನಿರೀಕ್ಷೆಯಲ್ಲಿ ಶ್ರೇಯಸ್‌ ಅಯ್ಯರ್‌ ಪಡೆ. ಐಪಿಎಲ್‌ನಲ್ಲಿ ಲಖನೌ ವಿರುದ್ಧ ಮೊದಲ ಜಯಕ್ಕೆ ಕೆಕೆಆರ್‌ ಕಾತರ.

ಕೋಲ್ಕತಾ: ಉತ್ತಮ ಲಯ ಪ್ರದರ್ಶಿಸಿ ಸತತ 3 ಗೆಲುವುಗಳನ್ನು ದಾಖಲಿಸಿದ್ದ ಕೋಲ್ಕತಾ ನೈಟ್‌ರೈಡರ್ಸ್‌ ಹಾಗೂ ಲಖನೌ ಸೂಪರ್‌ಜೈಂಟ್ಸ್‌, ಕಳೆದ ಪಂದ್ಯದಲ್ಲಿ ಸೋಲುಂಡಿದ್ದವು. ಭಾನುವಾರ ಈ ಎರಡು ತಂಡಗಳು ಪರಸ್ಪರ ಎದುರಾಗಲಿದ್ದು, ಒಂದು ತಂಡ ಗೆಲುವಿನ ಲಯಕ್ಕೆ ಮರಳಲಿದೆ.ತವರಿನಲ್ಲಿ ಸತತ 5 ಪಂದ್ಯಗಳನ್ನು ಆಡಲಿರುವ ಕೆಕೆಆರ್‌, ತವರಿನ ಲಾಭವೆತ್ತಲು ಕಾಯುತ್ತಿದೆ. ಈ ಪಂದ್ಯದಿಂದಲೇ ಜಯದ ಓಟ ಆರಂಭಿಸಿ, ಲಖನೌ ವಿರುದ್ಧ ಐಪಿಎಲ್‌ನಲ್ಲಿ ಮೊದಲ ಜಯ ಸಾಧಿಸಲು ಕಾತರಿಸುತ್ತಿದೆ.

ಕೆಕೆಆರ್‌ ತನ್ನ ತಂಡದಲ್ಲಿರುವ ವಿಂಡೀಸ್‌ ಆಲ್ರೌಂಡರ್‌ಗಳಾದ ನರೈನ್‌ ಹಾಗೂ ರಸೆಲ್‌ ಮೇಲೆ ಅತಿಯಾಗಿ ಅವಲಂಬಿತಗೊಂಡಿದ್ದು, ಈ ಇಬ್ಬರ ಪ್ರದರ್ಶನದ ಮೇಲೆ ಫಲಿತಾಂಶ ನಿರ್ಧಾರವಾಗಬಹುದು.ಮತ್ತೊಂದೆಡೆ ಲಖನೌ, ಕಳೆದ ಪಂದ್ಯದಲ್ಲಿ ಡೆಲ್ಲಿ ವಿರುದ್ಧ 94ಕ್ಕೆ 7 ವಿಕೆಟ್‌ ಕಳೆದುಕೊಂಡರೂ, ಬದೋನಿ ಅವರ ಹೋರಾಟದ ನೆರವಿನಿಂದ 160 ರನ್‌ ಗಡಿ ದಾಟಿತ್ತು. ಯುವ ಆಟಗಾರನ ಹೋರಾಟ ತಂಡದ ಆತ್ಮವಿಶ್ವಾಸ ಹೆಚ್ಚಿಸಿರುವುದರಲ್ಲಿ ಅನುಮಾನವಿಲ್ಲ.

ಒಟ್ಟು ಮುಖಾಮುಖಿ: 03

ಕೆಕೆಆರ್‌: 00ಲಖನೌ: 03

ಸಂಭವನೀಯ ಆಟಗಾರರ ಪಟ್ಟಿ

ಕೆಕೆಆರ್‌: ಸಾಲ್ಟ್‌, ನರೈನ್‌, ರಘುವಂಶಿ, ವೆಂಕಿ ಅಯ್ಯರ್‌, ಶ್ರೇಯಸ್‌ (ನಾಯಕ), ರಮಣ್‌/ರಾಣಾ, ರಸೆಲ್‌, ರಿಂಕು, ಸ್ಟಾರ್ಕ್‌, ವೈಭವ್‌/ಹರ್ಷಿತ್‌, ವರುಣ್‌, ಸುಯಶ್‌.ಲಖನೌ: ಡಿ ಕಾಕ್‌, ರಾಹುಲ್‌ (ನಾಯಕ), ಪಡಿಕ್ಕಲ್‌/ಪ್ರೇರಕ್‌, ಸ್ಟೋಯ್ನಿಸ್‌, ಪೂರನ್‌, ಬದೋನಿ, ಕೃನಾಲ್‌, ಬಿಷ್ಣೋಯ್‌, ಅರ್ಷದ್‌, ನವೀನ್‌, ಯಶ್‌, ಎಂ.ಸಿದ್ಧಾರ್ಥ್‌

ಪಂದ್ಯ ಆರಂಭ: ಮಧ್ಯಾಹ್ನ 3.30ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಜಿಯೋ ಸಿನಿಮಾ