ಮುಂಬೈನ ಸೋಲಿಸಿ ಅಧಿಕೃತವಾಗಿ ಪ್ಲೇ-ಆಫ್‌ಗೇರಲು ಕೋಲ್ಕತಾ ಕಾತರ!

| Published : May 10 2024, 11:45 PM IST / Updated: May 10 2024, 11:46 PM IST

ಸಾರಾಂಶ

ಕೋಲ್ಕತಾ ಗೆದ್ದರೆ ಪ್ಲೇ-ಆಫ್‌ಗೆ ಅಧಿಕೃತವಾಗಿ ಪ್ರವೇಶಿಸಲಿದ್ದು, ಅಗ್ರ-2ರಲ್ಲೇ ಉಳಿದುಕೊಳ್ಳಲಿದೆ. ಮುಂಬೈಗೆ ಸೇಡು ತೀರಿಸಿಕೊಳ್ಳುವ ತವಕ

ಕೋಲ್ಕತಾ:17ನೇ ಆವೃತ್ತಿ ಐಪಿಎಲ್‌ನಲ್ಲಿ ಪ್ಲೇ-ಆಫ್‌ ಸ್ಥಾನ ಬಹುತೇಕ ಖಚಿತಪಡಿಸಿಕೊಂಡಿರುವ 2 ಬಾರಿ ಚಾಂಪಿಯನ್‌ ಪ್ಲೇ-ಆಫ್ ಕೋಲ್ಕತಾ ನೈಟ್‌ ರೈಡರ್ಸ್‌ ಶನಿವಾರ ಮುಂಬೈ ಇಂಡಿಯನ್ಸ್‌ ವಿರುದ್ಧ ಸೆಣಸಾಡಲಿದೆ. ಕೋಲ್ಕತಾ ಗೆದ್ದರೆ ಪ್ಲೇ-ಆಫ್‌ಗೆ ಅಧಿಕೃತವಾಗಿ ಪ್ರವೇಶಿಸಲಿದ್ದು, ಅಗ್ರ-2ರಲ್ಲೇ ಉಳಿದುಕೊಳ್ಳಲಿದೆ.ಕೋಲ್ಕತಾ ಈ ವರೆಗೆ 11 ಪಂದ್ಯಗಳನ್ನಾಡಿದ್ದು, 8ರಲ್ಲಿ ಗೆಲುವು ಸಾಧಿಸಿದೆ. 16 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿರುವ ತಂಡ ಉತ್ತಮ ನೆಟ್‌ರನ್‌ ರೇಟ್‌ ಕೂಡಾ ಹೊಂದಿದ್ದು, ಪ್ಲೇ-ಆಫ್‌ಗೇರುವುದು ಬಹುತೇಕ ಖಚಿತ. ಒಂದಿಬ್ಬರನ್ನು ನೆಚ್ಚಿಕೊಳ್ಳದೆ ಸಂಘಟಿತವಾಗಿ ಆಡಿ ಪಂದ್ಯ ಗೆಲ್ಲುವುದು ತಂಡದ ಪ್ಲಸ್‌ ಪಾಯಿಂಟ್‌. ಏಕಾಂಗಿಯಾಗಿ ಪಂದ್ಯ ಗೆಲ್ಲಿಸಬಲ್ಲ ಸಾಮರ್ಥ್ಯವಿರುವ ಹಲವು ಆಟಗಾರರು ತಂಡದಲ್ಲಿದ್ದಾರೆ. ನಾಕೌಟ್‌ಗೂ ಮುನ್ನ ಪ್ರದರ್ಶನವನ್ನು ಮತ್ತಷ್ಟು ಉತ್ತಮಗೊಳಿಸುವುದು ತಂಡದ ಮುಂದಿರುವ ಗುರಿ.ಅತ್ತ 5 ಬಾರಿ ಚಾಂಪಿಯನ್‌ ಮುಂಬೈ 12ರಲ್ಲಿ ಕೇವಲ 4 ಪಂದ್ಯಗಳನ್ನು ಗೆದ್ದಿದ್ದು, ನಾಕೌಟ್‌ನಿಂದ ಅಧಿಕೃತವಾಗಿ ಹೊರಬಿದ್ದಿದೆ. ಕೋಲ್ಕತಾ ವಿರುದ್ಧದ ಮೊದಲ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಳ್ಳುವುದರ ಜೊತೆಗೆ ಇನ್ನುಳಿದ 2 ಪಂದ್ಯಗಳನ್ನೂ ಗೆದ್ದು ಅಂಕಪಟ್ಟಿಯಲ್ಲಿ ಮೇಲೇರುವುದು ತಂಡದ ಮುಂದಿರುವ ಗುರಿ. ಟಿ20 ವಿಶ್ವಕಪ್‌ಗೂ ಮುನ್ನ ರೋಹಿತ್‌, ಹಾರ್ದಿಕ್‌, ಸೂರ್ಯ ಲಯ ಕಂಡುಕೊಳ್ಳಬೇಕಾದ ಅಗತ್ಯವಿದೆ.

ಒಟ್ಟು ಮುಖಾಮುಖಿ: 33

ಕೋಲ್ಕತಾ: 10ಮುಂಬೈ: 23

ಸಂಭವನೀಯ ಆಟಗಾರರ ಪಟ್ಟಿ

ಕೋಲ್ಕತಾ: ಸಾಲ್ಟ್‌, ನರೈನ್‌, ರಘುವಂಶಿ, ಶ್ರೇಯಸ್‌(ನಾಯಕ), ವೆಂಕಟೇಶ್‌, ರಿಂಕು, ರಸೆಲ್‌, ರಮನ್‌ದೀಪ್‌, ಸ್ಟಾರ್ಕ್‌, ವರುಣ್‌, ಹರ್ಷಿತ್‌.ಮುಂಬೈ: ಇಶಾನ್‌, ರೋಹಿತ್‌, ನಮನ್‌, ಸೂರ್ಯ, ತಿಲಕ್‌, ಹಾರ್ದಿಕ್‌(ನಾಯಕ), ಡೇವಿಡ್‌, ಅನ್ಶುಲ್‌, ಚಾವ್ಲಾ, ಬೂಮ್ರಾ, ತುಷಾರ.

ಪಂದ್ಯ: ಸಂಜೆ 7.30ಕ್ಕೆ