ಇಂದು ಲಖನೌ vs ಮುಂಬೈ ರೋಹಿತ್‌ ಶರ್ಮಾ, ರಿಷಭ್‌ ಪಂತ್‌ ಮೇಲೆ ಎಲ್ಲರ ಕಣ್ಣು

| N/A | Published : Apr 04 2025, 12:03 PM IST

LSG vs PBKS Highlights

ಸಾರಾಂಶ

ಈ ಬಾರಿ ಐಪಿಎಲ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿರುವ ಮುಂಬೈ ಇಂಡಿಯನ್ಸ್‌ ಹಾಗೂ ಲಖನೌ ಸೂಪರ್‌ ಜೈಂಟ್ಸ್ ತಂಡಗಳು ಶುಕ್ರವಾರ ಪರಸ್ಪರ ಮುಖಾಮುಖಿಯಾಗಲಿವೆ.

 ಲಖನೌ: ಈ ಬಾರಿ ಐಪಿಎಲ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿರುವ ಮುಂಬೈ ಇಂಡಿಯನ್ಸ್‌ ಹಾಗೂ ಲಖನೌ ಸೂಪರ್‌ ಜೈಂಟ್ಸ್ ತಂಡಗಳು ಶುಕ್ರವಾರ ಪರಸ್ಪರ ಮುಖಾಮುಖಿಯಾಗಲಿವೆ.

5 ಬಾರಿ ಚಾಂಪಿಯನ್‌ ಮುಂಬೈ ತಂಡ ಆರಂಭಿಕ 2 ಪಂದ್ಯಗಳಲ್ಲಿ ಕ್ರಮವಾಗಿ ಚೆನ್ನೈ, ಗುಜರಾತ್‌ ವಿರುದ್ಧ ಸೋತಿತ್ತು. ಆದರೆ ಕಳೆದ ಪಂದ್ಯದಲ್ಲಿ ಕೋಲ್ಕತಾ ವಿರುದ್ಧ ಗೆಲ್ಲುವ ಮೂಲಕ ಜಯದ ಹಳಿಗೆ ಮರಳಿದೆ. ಮತ್ತೊಂದೆಡೆ ಲಖನೌ ತಂಡ ಡೆಲ್ಲಿ, ಪಂಜಾಬ್‌ ವಿರುದ್ಧ ಸೋತು ಹೈದರಾಬಾದ್‌ ವಿರುದ್ಧ ಗೆದ್ದಿದೆ. ಈ ಪಂದ್ಯ 2 ತಂಡಗಳ ಜೊತೆ ಕೆಲ ಸ್ಟಾರ್‌ ಆಟಗಾರರಿಗೂ ಅತಿ ಮಹತ್ವದ್ದು ಎನಿಸಿಕೊಂಡಿದೆ. ಮುಂಬೈಗೆ 5 ಬಾರಿ ಟ್ರೋಫಿ ಗೆಲ್ಲಿಸಿಕೊಟ್ಟಿರುವ ಹಿರಿಯ ಆಟಗಾರ ರೋಹಿತ್‌ ಶರ್ಮಾ ಹಾಗೂ ಐಪಿಎಲ್‌ನ ಅತಿ ದುಬಾರಿ ಆಟಗಾರ, ಲಖನೌ ನಾಯಕ ರಿಷಭ್‌ ಪಂತ್‌ ಈ ಪಂದ್ಯದಲ್ಲಿ ಮಿಂಚಲೇಬೇಕಿದೆ. ಇಬ್ಬರೂ ರನ್‌ ಗಳಿಸಲು ಪರದಾಡುತ್ತಿದ್ದು, ಲಯಕ್ಕೆ ಮರಳಲು ಕಾಯುತ್ತಿದ್ದಾರೆ. ರಿಷಭ್‌ 3 ಪಂದ್ಯಗಳಲ್ಲಿ ಕ್ರಮವಾಗಿ 0, 15 ಹಾಗೂ 12 ರನ್‌ ಸಿಡಿಸಿದ್ದಾರೆ.

ಮುಂಬೈ ತಂಡ ಜಸ್‌ಪ್ರೀತ್‌ ಬೂಮ್ರಾ ಅನುಪಸ್ಥಿತಿಯಲ್ಲಿ ಸೊರಗಿದಂತೆ ಕಾಣುತ್ತಿದ್ದರೂ ವಿಘ್ನೇಶ್‌ ಪುತೂರ್‌, ಅಶ್ವನಿ ಕುಮಾರ್‌ ಅವರಂತಹ ಯುವ ಪ್ರತಿಭೆಗಳು ಮಿಂಚುತ್ತಿದ್ದಾರೆ. ಲಖನೌ ತಂಡ ಸ್ಫೋಟಕ ಆಟಗಾರ ನಿಕೋಲಸ್‌ ಪೂರನ್‌ರನ್ನು ಹೆಚ್ಚಾಗಿ ನೆಚ್ಚಿಕೊಂಡಿದೆ. 3 ಪಂದ್ಯಗಳಲ್ಲಿ 189 ರನ್‌ ಸಿಡಿಸಿರುವ ಅವರಿಂದ ತಂಡ ಮತ್ತೊಂದು ದೊಡ್ಡ ಇನ್ನಿಂಗ್ಸ್‌ ನಿರೀಕ್ಷಿಸುತ್ತಿದೆ.

ಮುಖಾಮುಖಿ: 06

ಮುಂಬೈ: 01

ಲಖನೌ: 05

ಸಂಭಾವ್ಯ ಆಟಗಾರರು

ಮುಂಬೈ: ರೋಹಿತ್‌, ರಿಕೆಲ್ಟನ್‌, ಸೂರ್ಯಕುಮಾರ್‌, ತಿಲಕ್‌, ಹಾರ್ದಿಕ್‌(ನಾಯಕ), ನಮನ್‌ ಧೀರ್‌, ಸ್ಯಾಂಟ್ನರ್‌, ದೀಪಕ್‌, ಬೌಲ್ಟ್‌, ಅಶ್ವಿನಿ, ವಿಘ್ನೇಶ್‌, ಮುಜೀಬ್‌.

ಲಖನೌ: ಮಾರ್ಕ್‌ರಮ್‌, ಮಾರ್ಷ್‌, ಪೂರನ್‌, ರಿಷಭ್‌(ನಾಯಕ), ಬದೋನಿ, ಮಿಲ್ಲರ್‌, ಸಮದ್‌, ಶಾರ್ದೂಲ್‌, ದಿಗ್ವೇಶ್‌, ಆಕಾಶ್‌ದೀಪ್‌, ರವಿ ಬಿಷ್ಣೋಯ್‌, ಸಿದ್ದಾರ್ಥ್‌.

ಪಂದ್ಯ: ಸಂಜೆ 7.30ಕ್ಕೆ

ಪಿಚ್‌ ರಿಪೋರ್ಟ್‌

ಲಖನೌ-ಮುಂಬೈ ಪಂದ್ಯ ಏಕನಾ ಕ್ರೀಡಾಂಗಣದ ಕಪ್ಪು ಮಣ್ಣಿನ ಪಿಚ್‌ನಲ್ಲಿ ನಡೆಯಲಿದೆ. ಹೀಗಾಗಿ ಸ್ಪಿನ್ನರ್‌ಗಳು ಹೆಚ್ಚಿನ ನೆರವು ಪಡೆಯುವ ಸಾಧ್ಯತೆಯಿದೆ. ಟಾಸ್‌ ಗೆಲ್ಲುವ ತಂಡ ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಳ್ಳಬಹುದು.