ಸಾರಾಂಶ
ಜೇಮ್ಸ್ ಆ್ಯಂಡರ್‌ಸನ್ ಈಗ ಇಂಗ್ಲೆಂಡ್ ಕ್ರಿಕೆಟ್ ತಂಡದ ಬೌಲಿಂಗ್ ಕೋಚ್. ನಿವೃತ್ತಿ ಪಡೆದು ಕೆಲವೇ ದಿನಗಳಲ್ಲಿ ತಂಡದ ಕೋಚ್ ಆಗಿ ಕಾರ್ಯಾರಂಭ.
ನಾಟಿಂಗ್‌ಹ್ಯಾಮ್: ಕೆಲ ದಿನಗಳ ಹಿಂದಷ್ಟೇ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾದ ದಿಗ್ಗಜ ವೇಗಿ ಜೇಮ್ಸ್ ಆ್ಯಂಡರ್‌ಸನ್, ಇಂಗ್ಲೆಂಡ್ ತಂಡದ ಬೌಲಿಂಗ್ ಕೋಚ್ ಆಗಿ ಕಾರ್ಯಾರಂಭಿಸಿದ್ದಾರೆ. ಗುರುವಾರದಿಂದ ವಿಂಡೀಸ್ ವಿರುದ್ಧದ 2ನೇ ಟೆಸ್ಟ್ ಆರಂಭಗೊಳ್ಳಲಿದ್ದು, ಮಂಗಳವಾರ ಇಂಗ್ಲೆಂಡ್ ತಂಡ ಅಭ್ಯಾಸ ನಡೆಸಿತ್ತು. ಈ ವೇಳೆ ಆ್ಯಂಡರ್‌ಸನ್ ತಂಡದ ಬೌಲರ್‌ಗಳಿಗೆ ಮಾರ್ಗದರ್ಶನ ನೀಡಿದರು. ಇನ್ನು 2012ರ ಬಳಿಕ ಇದೇ ಮೊದಲ ಬಾರಿಗೆ ತವರಿನ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಜೇಮ್ಸ್ ಆ್ಯಂಡರ್‌ಸನ್ ಹಾಗೂ ಸ್ಟುವರ್ಟ್ ಬ್ರಾಡ್ ಇಬ್ಬರೂ ಇಲ್ಲದೆ ಆಡಲಿದೆ. 2007ರ ಬಳಿಕ ಇಬ್ಬರೂ ಇಲ್ಲದೇ ಆಡಲಿರುವುದು ಕೇವಲ 2ನೇ ಬಾರಿ. ಇನ್ನು 2ನೇ ಟೆಸ್ಟ್‌ಗೆ ಆ್ಯಂಡರ್‌ಸನ್ ಬದಲು ಮಾರ್ಕ್ ವುಡ್‌ಗೆ ಆಡುವ ಹನ್ನೊಂದರಲ್ಲಿ ಸ್ಥಾನ ನೀಡಲಾಗಿದೆ.