ಬ್ಲೂಮ್‌ಫಂಟೀನ್(ದ.ಆಫ್ರಿಕಾ): ಸತತ 2 ಗೆಲುವುಗಳೊಂದಿಗೆ ಈಗಾಗಲೇ ಸೂಪರ್-6 ಪ್ರವೇಶಿಸಿರುವ ದಾಖಲೆಯ 5 ಬಾರಿ ಚಾಂಪಿಯನ್ ಭಾರತ ತಂಡ, ಭಾನುವಾರ ಗುಂಪು ಹಂತದ ಕೊನೆ ಪಂದ್ಯದಲ್ಲಿ ಅಮೆರಿಕ ವಿರುದ್ಧ ಸೆಣಸಾಡಲಿದೆ.‘ಎ’ ಗುಂಪಿನಲ್ಲಿರುವ ಉದಯ್ ಸಹರಾನ್ ನಾಯಕತ್ವದ ಭಾರತ ಆರಂಭಿಕ 2 ಪಂದ್ಯಗಳಲ್ಲಿ ಕ್ರಮವಾಗಿ ಮಾಜಿ ಚಾಂಪಿಯನ್ ಬಾಂಗ್ಲಾದೇಶ ಹಾಗೂ ಐರ್ಲೆಂಡ್ ವಿರುದ್ಧ ಗೆಲುವು ಸಾಧಿಸಿದೆ. 4 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿರುವ ಭಾರತ, ಹ್ಯಾಟ್ರಿಕ್ ಗೆಲುವಿನೊಂದಿಗೆ ಮುಂದಿನ ಸುತ್ತಿಗೇರಲು ಕಾಯುತ್ತಿದೆ. ಅತ್ತ ಅಮೆರಿಕ ಆಡಿರುವ 2 ಪಂದ್ಯಗಳಲ್ಲೂ ಸೋಲನುಭವಿಸಿದ್ದು, ಅಂಕಪಟ್ಟಿಯಲ್ಲಿ ಕೊನೆ ಸ್ಥಾನದಲ್ಲಿದೆ. ಸೂಪರ್-6 ಹಂತ ಪ್ರವೇಶಿಸಬೇಕಿದ್ದರೆ ಈ ಪಂದ್ಯದಲ್ಲಿ ದೊಡ್ಡ ಅಂತರದಲ್ಲಿ ಗೆಲ್ಲುವ ಅಗತ್ಯವಿದೆ. ಪ್ರತಿ ಗುಂಪಿನಿಂದ ಅಗ್ರ-3 ತಂಡಗಳು ಸೂಪರ್-6 ಪ್ರವೇಶಿಸಲಿವೆ.ಭಾನುವಾರ ಗುಂಪು ಹಂತ ಕೊನೆಗೊಳ್ಳಲಿದ್ದು, ಮಂಗಳವಾದಿಂದ ಸೂಪರ್-6 ಹಂತದ ಪಂದ್ಯಗಳು ನಡೆಯಲಿದೆ.ಪಂದ್ಯ: ಮಧ್ಯಾಹ್ನ 1.30ಕ್ಕೆ
ಕಿರಿಯರ ವಿಶ್ವಕಪ್: ಇಂದು ಭಾರತ vs ಅಮೆರಿಕ ಫೈಟ್
ಆರಂಭಿಕ 2 ಪಂದ್ಯಗಳಲ್ಲಿ ಕ್ರಮವಾಗಿ ಮಾಜಿ ಚಾಂಪಿಯನ್ ಬಾಂಗ್ಲಾದೇಶ ಹಾಗೂ ಐರ್ಲೆಂಡ್ ವಿರುದ್ಧ ಗೆಲುವು ಸಾಧಿಸಿದ್ದ ಭಾರತ, ಭಾನುವಾರ ಗುಂಪು ಹಂತದ ಕೊನೆ ಪಂದ್ಯದಲ್ಲಿ ಅಮೆರಿಕ ವಿರುದ್ಧ ಸೆಣಸಾಡಲಿದೆ.
Latest Videos
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.