ಸಾರಾಂಶ
ಧಾರಾವಿ ಸ್ಲಂಗೆ ಹೋಗಿಬಂದ ಬಳಿಕ ಲಖನೌ ಸೂಪರ್ ಜೈಂಟ್ಸ್‌ನ ಕೋಚ್ ಜಸ್ಟಿನ್ ಲ್ಯಾಂಗರ್ ಹೇಳಿದ್ದೇನು? ಲ್ಯಾಂಗರ್ ತಮ್ಮ ಬ್ಲಾಗ್‌ನಲ್ಲಿ ಏನು ಬರೆದುಕೊಂಡಿದ್ದಾರೆ?
ಪರ್ತ್: ಲಖನೌ ಸೂಪರ್‌ಜೈಂಟ್ಸ್‌ನ ಪ್ರಧಾನ ಕೋಚ್ ಜಸ್ಟಿನ್ ಲ್ಯಾಂಗರ್, ಐಪಿಎಲ್ ವೇಳೆ ತಾವು ತಂಡದ ಮಸಾಜ್ ಥೆರಾಪಿಸ್ಟ್ ರಾಜೇಶ್ ಚಂದ್ರಶೇಖರ್‌ರ ಮನೆಗೆ ಭೇಟಿ ನೀಡಿದಾಗ ಆದ ಅನುಭವವನ್ನು ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ. ‘ಮುಂಬೈನ ಧಾರಾವಿ ಸ್ಲಂನಲ್ಲಿರುವ ರಾಜೇಶ್‌ರ ಮನೆಗೆ ಹೋದಾಗ ಜೀವನದಲ್ಲಿ ನಮಗೆ ಸಿಕ್ಕಿರುವ ಸೌಲಭ್ಯಗಳು ಎಂತದ್ದು ಎನ್ನುವುದರ ಬಗ್ಗೆ ನನಗೆ ಅನುಭವವಾಯಿತು. ಜನ ದೈನಂದಿನ ಜೀವನ ನಡೆಸಲು ಏನೆಲ್ಲಾ ಮಾಡುತ್ತಾರೆ ಎನ್ನುವುದನ್ನು ತಿಳಿದುಕೊಂಡೆ. ರಾಜೇಶ್‌ರ ಕುಟುಂಬ ತಮ್ಮ ಬಳಿ ಏನೂ ಇಲ್ಲ ಎಂದುಕೊಂಡಿದೆ, ಆದರೆ ಜೀವನದಲ್ಲಿ ಖುಷಿಯಾಗಿರಲು ಏನೆಲ್ಲಾ ಬೇಕೋ ಅದೆಲ್ಲವೂ ಅವರಲ್ಲಿ ಇದೆ’ ಎಂದು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಬರೆದುಕೊಂಡಿದ್ದಾರೆ.