ಕಬಡ್ಡಿಗೆ ಒಲಿಂಪಿಕ್ಸ್ ಅರ್ಹತೆ ಸಿಗಬೇಕು: ಪುಣೇರಿ ಪಲ್ಟನ್ ಕೋಚ್, ಕನ್ನಡಿಗ ಬಿ.ಸಿ.ರಮೇಶ್‌

| Published : Oct 21 2024, 12:33 AM IST / Updated: Oct 21 2024, 04:26 AM IST

ಸಾರಾಂಶ

ಪ್ರೊ ಕಬಡ್ಡಿ ಸಾಕಷ್ಟು ಬೆಳೆದಿದೆ. ಯುವ ಪ್ರತಿಭೆಗಳನ್ನು ಬೆಳೆಸಿದೆ. ಗ್ರಾಮೀಣ ಆಟರಾರರನ್ನು ಬೆಳೆಸುವಲ್ಲಿ ಪ್ರೊ ಕಬಡ್ದಿ ಮಹತ್ವದ ಪಾತ್ರ ವಹಿಸಿದೆ ಎಂದು ತಿಳಿಸಿದರು.

 ಹೈದರಾಬಾದ್ : ಕಬಡ್ಡಿಗೆ ಒಲಿಂಪಿಕ್ಸ್‌ ಅರ್ಹತೆ ಸಿಗಬೇಕು ಎಂಬುದು ನಮ್ಮ ಬಯಕೆ. ಅದಕ್ಕಾಗಿ ಪ್ರಯತ್ನ ಮುಂದುವರಿದಿದೆ ಎಂದು ಕಳೆದ ಬಾರಿ ಪ್ರೊ ಕಬಡ್ಡಿ ವಿಜೇತ ಪುಣೇರಿ ಪಲ್ಟನ್ ತಂಡದ ಮುಖ್ಯ ಕೋಚ್, ಕನ್ನಡಿಗ ಬಿ.ಸಿ.ರಮೇಶ್ ಹೇಳಿದ್ದಾರೆ.

ಉದ್ಘಾಟನಾ ಪಂದ್ಯಕ್ಕೂ ಮುನ್ನ ಪತ್ರಿಕೆ‌ ಜೊತೆ ಮಾತನಾಡಿದ ಅವರು, ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವುದು ನಮ್ಮ‌ ಪ್ರಮುಖ ಗುರಿ. ಅರ್ಹತೆ ಸಿಗಬೇಕಿದ್ದರೆ ಕನಿಷ್ಠ 50 ದೇಶಗಳಾದರೂ ಆಡಬೇಕು. ಈಗ ಪಾಶ್ಚಿಮಾತ್ಯ ಹಾಗೂ ಯುರೋಪ್ ದೇಶಗಳೂ ಕಬಡ್ಡಿ ಆಡುತ್ತಿದೆ.‌ ಇನ್ನಷ್ಟು ದೇಶಗಳು ಕಬಡ್ಡಿ ಆಡಬೇಕು. ಯಾಕೆಂದರೆ ಕಬಡ್ಡಿ ಸೆಕ್ಸಿ ಹಾಗೂ ಥ್ರಿಲ್ಲಿಂಗ್ ಗೇಮ್. ಸರ್ಕಾರಗಳೂ ಇದಕ್ಕೆ ಬೆಂಬಲ ನೀಡಬೇಕು. ಹೀಗಾದರೆ ಖಂಡಿತಾ ಕಬಡ್ಡಿಗೆ ಒಲಿಂಪಿಕ್ಸ್ ಅರ್ಹತೆ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಹಿಳಾ ಪ್ರೊ ಕಬಡ್ಡಿ ಟೂರ್ನಿ ಆಯೋಜನೆ ಬಗ್ಗೆ ಪ್ರತಿಕ್ರಿಯಿಸಿದ ರಮೇಶ್, ದೇಶದಲ್ಲಿ ಪ್ರತಿಭಾವಂತ ಕಬಡ್ಡಿ ಆಟಗಾರ್ತಿಯರಿದ್ದಾರೆ. ಅವರಿಗೆ ಸೂಕ್ತ ವೇದಿಕೆ ಸಿಗುತ್ತಿಲ್ಲ.‌ ಮಹಿಳಾ ಪ್ರೊ ಕಬಡ್ಡಿ ಆಯೋಜಿಸಿದರೆ ಅದೊಂದು‌ ಮಹತ್ವದ ಮೈಲುಗಲ್ಲು ಆಗಲಿದೆ ಎಂದರು.

ಪ್ರೊ ಕಬಡ್ಡಿ ಸಾಕಷ್ಟು ಬೆಳೆದಿದೆ. ಯುವ ಪ್ರತಿಭೆಗಳನ್ನು ಬೆಳೆಸಿದೆ. ಗ್ರಾಮೀಣ ಆಟಗಾರರರನ್ನು ಬೆಳೆಸುವಲ್ಲಿ ಪ್ರೊ ಕಬಡ್ದಿ ಮಹತ್ವದ ಪಾತ್ರ ವಹಿಸಿದೆ ಎಂದು ತಿಳಿಸಿದರು.ತಮ್ಮ ತಂಡ ಸತತ 2ನೇ ಬಾರಿ ‍ಚಾಂಪಿಯನ್ ಆಗುವ ವಿಶ್ವಾಸ ವ್ಯಕ್ತಪಡಿಸಿದ ಅವರು, ತಂಡ ಬಲಿಷ್ಠವಾಗಿದೆ.‌ ಕಳೆದ ಬಾರಿ‌‌ ಇದ್ದ ತಂಡದಲ್ಲಿ ಮೊಹಮದ್‌ರೆಜಾ ಶಾದ್ಲೂ ಮಾತ್ರ ಈ ಬಾರಿ ಇಲ್ಲ. ಆದರೆ ಅವರ ಸ್ಥಾನವನ್ನು ತುಂಬಬಲ್ಲ ಆಟಗಾರರು ನಮ್ಮಲ್ಲಿದ್ದಾರೆ ಎಂದರು.