ಲಾಸ್‌ ಏಂಜಲೀಸ್‌ನಲ್ಲಿ ನಡೆದ ನೈಸರ್ಗಿಕ ಬಾಡಿ ಬಿಲ್ಡಿಂಗ್‌ ವಿಶ್ವಕಪ್‌: 4 ಪದಕ ಗೆದ್ದ ಕನ್ನಡಿಗ ಶೋಧನ್‌ ರೈ!

| Published : Nov 19 2024, 12:50 AM IST / Updated: Nov 19 2024, 04:05 AM IST

ಲಾಸ್‌ ಏಂಜಲೀಸ್‌ನಲ್ಲಿ ನಡೆದ ನೈಸರ್ಗಿಕ ಬಾಡಿ ಬಿಲ್ಡಿಂಗ್‌ ವಿಶ್ವಕಪ್‌: 4 ಪದಕ ಗೆದ್ದ ಕನ್ನಡಿಗ ಶೋಧನ್‌ ರೈ!
Share this Article
  • FB
  • TW
  • Linkdin
  • Email

ಸಾರಾಂಶ

ಅಮೆರಿಕದ ಲಾಸ್‌ ಏಂಜಲೀಸ್‌ನಲ್ಲಿ ನಡೆದ ನೈಸರ್ಗಿಕ ಬಾಡಿ ಬಿಲ್ಡಿಂಗ್‌. ಲಾಸ್‌ ವೇಗಾಸ್‌ನಲ್ಲಿ ನಡೆದ ನ್ಯಾಚುರಲ್‌ ಒಲಿಂಪಿಯಾ. ಪದಕಗಳನ್ನು ಬಾಚಿಕೊಂಡ ಶೋಧನ್‌ ರೈ.

 ಬೆಂಗಳೂರು : ಇತ್ತೀಚೆಗೆ ಅಮೆರಿಕದ ಲಾಸ್‌ ಏಂಜಲೀಸ್‌ನಲ್ಲಿ ನಡೆದ ನೈಸರ್ಗಿಕ ಬಾಡಿ ಬಿಲ್ಡಿಂಗ್‌ ವಿಶ್ವಕಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಕನ್ನಡಿಗ ಶೋಧನ್‌ ರೈ ಒಂದು ಚಿನ್ನ ಸೇರಿ 4 ಪದಕಗಳನ್ನು ಗೆದ್ದಿದ್ದಾರೆ. 20 ದೇಶಗಳ 300ಕ್ಕೂ ಹೆಚ್ಚು ಬಾಡಿ ಬಿಲ್ಡರ್‌ಗಳು ಈ ವಿಶ್ವಕಪ್‌ನಲ್ಲಿ ಪಾಲ್ಗೊಂಡಿದ್ದರು. ವಿವಿಧ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದವು. ಬಾಡಿಬಿಲ್ಡಿಂಗ್‌ ಅಥ್ಲೆಟಿಕ್‌ ವಿಭಾಗದಲ್ಲಿ ಶೋಧನ್‌ ಸಮಗ್ರ ಚಾಂಪಿಯನ್‌ ಆಗುವ ಜೊತೆಗೆ ಚಿನ್ನದ ಪದಕ ಗೆದ್ದರು. 35+ ಹಾಗೂ 40+ ವರ್ಷ ವಿಭಾಗದಲ್ಲಿ ತಲಾ ಒಂದು ಬೆಳ್ಳಿ, ಒಟ್ಟಾರೆ ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸಿದರು.

ಇನ್ನು, ಅಮೆರಿಕದ ಲಾಸ್‌ ವೇಗಾಸ್‌ನಲ್ಲಿ ನಡೆದ ನ್ಯಾಚುರಲ್‌ ಒಲಿಂಪಿಯಾ ಸ್ಪರ್ಧೆಯಲ್ಲೂ ಶೋಧನ್‌ ಪಾಲ್ಗೊಂಡು ಕಂಚಿನ ಪದಕ ಗೆದ್ದರು. ಈ ಸ್ಪರ್ಧೆಯಲ್ಲಿ 38 ದೇಶಗಳ 500ಕ್ಕೂ ಹೆಚ್ಚು ಬಾಡಿ ಬಿಲ್ಡರ್‌ಗಳು ಪಾಲ್ಗೊಂಡಿದದರು.

ಈ ಎರಡೂ ಕೂಟದಲ್ಲಿ ಪಾಲ್ಗೊಂಡಿದ್ದ ಭಾರತದ ಏಕೈಕ ಪುರುಷ ಬಾಡಿ ಬಿಲ್ಡರ್‌ ಎನ್ನುವ ಹಿರಿಮೆಗೆ ಶೋಧನ್‌ ಪಾತ್ರರಾದರು. ವಿಶ್ವಕಪ್‌ನ ಮಹಿಳಾ ವಿಭಾಗದಲ್ಲಿ ಭಾರತದ ಶೆಲ್ಲಿ ಅರೋರಾ ಭಾಗವಹಿಸಿದ್ದರು. ಒಲಿಂಪಿಯಾದಲ್ಲಿ ಸ್ಪರ್ಧಿಸಿದ್ದ ಭಾರತದ ಏಕೈಕ ಸ್ಪರ್ಧಿ ಎನ್ನುವ ಖ್ಯಾತಿಯನ್ನು ಶೋಧನ್‌ ಗಳಿಸಿದರು.