ಕಿರಿಯರ ಫುಟ್ಬಾಲ್‌: ಇಂದು ಕರ್ನಾಟಕ vs ಡೆಲ್ಲಿ ಫೈನಲ್‌ ಫೈಟ್‌

| Published : May 22 2024, 12:55 AM IST

ಸಾರಾಂಶ

ಕರ್ನಾಟಕ 5 ಪಂದ್ಯಗಳಲ್ಲಿ ಬರೋಬ್ಬರಿ 20 ಗೋಲು ಬಾರಿಸಿದ್ದು, ಕೇವಲ 1 ಗೋಲು ಬಿಟ್ಟುಕೊಟ್ಟಿದೆ. ಸೋಮವಾರ ಸೆಮಿಫೈನಲ್‌ನಲ್ಲಿ ಬಲಿಷ್ಠ ಮಣಿಪುರ ವಿರುದ್ಧ 1-0 ಗೋಲಿನಿಂದ ಗೆದ್ದಿತ್ತು.

ನರೈನ್‌ಪುರ(ಛತ್ತೀಸ್‌ಗಢ): ಚೊಚ್ಚಲ ಆವೃತ್ತಿಯ ಸ್ವಾಮಿ ವಿವೇಕಾನಂದ ಅಂಡರ್‌-20 ಪುರುಷರ ರಾಷ್ಟ್ರೀಯ ಫುಟ್ಬಾಲ್‌ ಚಾಂಪಿಯನ್‌ಶಿಪ್‌ನ ಫೈನಲ್‌ ಪಂದ್ಯ ಬುಧವಾರ ನಡೆಯಲಿದ್ದು, ಕರ್ನಾಟಕ ಹಾಗೂ ಡೆಲ್ಲಿ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ.32 ತಂಡಗಳು ಪಾಲ್ಗೊಂಡಿದ್ದ ಟೂರ್ನಿಯಲ್ಲಿ ರಾಜ್ಯ ತಂಡ ಸೋಮವಾರ ಸೆಮಿಫೈನಲ್‌ನಲ್ಲಿ ಬಲಿಷ್ಠ ಮಣಿಪುರ ವಿರುದ್ಧ 1-0 ಗೋಲಿನಿಂದ ಗೆದ್ದಿತ್ತು. ಅತ್ತ ಡೆಲ್ಲಿ ತಂಡ 3-2 ಗೋಲುಗಳಿಂದ ಮಿಜೋರಾಮ್‌ ವಿರುದ್ಧ ಜಯಸಿ ಫೈನಲ್‌ ಪ್ರವೇಶಿಸಿದೆ. ಕರ್ನಾಟಕ 5 ಪಂದ್ಯಗಳಲ್ಲಿ ಬರೋಬ್ಬರಿ 20 ಗೋಲು ಬಾರಿಸಿದ್ದು, ಕೇವಲ 1 ಗೋಲು ಬಿಟ್ಟುಕೊಟ್ಟಿದೆ.ಪ್ರೊ ಲೀಗ್‌ ಹಾಕಿ: ಇಂದು ಭಾರತ vs ಅರ್ಜೆಂಟೀನಾ

ಆ್ಯಂಟ್ವಪ್‌(ಬೆಲ್ಜಿಯಂ): ಪ್ರೊ ಲೀಗ್‌ ಹಾಕಿ ಟೂರ್ನಿಯ ಯುರೋಪ್‌ ಚರಣ ಬುಧವಾರದಿಂದ ಆರಂಭಗೊಳ್ಳಲಿದ್ದು, ಭಾರತ ಪುರುಷ, ಮಹಿಳಾ ತಂಡಗಳು ಅರ್ಜೆಂಟೀನಾ ವಿರುದ್ಧ ಸೆಣಸಾಡಲಿವೆ.ಮಹಿಳಾ ತಂಡವನ್ನು ಹೊಸ ನಾಯಕಿ ಸಲೀಮಾ ಟೆಟೆ ಮುನ್ನಡೆಸಲಿದ್ದಾರೆ. ಈ ಬಾರಿ ಟೂರ್ನಿಯಲ್ಲಿ ಭಾರತ ಪುರುಷರ ತಂಡ 8 ಪಂದ್ಯಗಳನ್ನಾಡಿದ್ದು, 15 ಅಂಕಗಳೊಂದಿಗೆ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಮಹಿಳಾ ತಂಡ 8 ಪಂದ್ಯಗಳಲ್ಲಿ 8 ಅಂಕಗಳನ್ನು ಸಂಪಾದಿಸಿದ್ದು, ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ.