ಸಾರಾಂಶ
ಪ್ಯಾರಾ ಖೇಲೋ ಇಂಡಿಯಾ ಗೇಮ್ಸ್‌ನಲ್ಲಿ ಕರ್ನಾಟಕದ ಪದಕ ಬೇಟೆ ಮುಂದುವರಿಕೆ. ಪ್ಯಾರಾ ಟೇಬಲ್ ಟೆನಿಸ್‌ನಲ್ಲಿ ಎರಡು ಕಂಚಿನ ಪದಕ ಗೆದ್ದ ರಾಜ್ಯದ ಕ್ರೀಡಾಪಟುಗಳು.
ನವದೆಹಲಿ: ಚೊಚ್ಚಲ ಆವೃತ್ತಿಯ ಪ್ಯಾರಾ ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಕರ್ನಾಟಕಕ್ಕೆ ಮತ್ತೆರಡು ಕಂಚಿನ ಪದಕಗಳು ದೊರೆತಿವೆ. ಪ್ಯಾರಾ ಟೇಬಲ್ ಟೆನಿಸ್‌ನ ಮಹಿಳೆಯರ ವೀಲ್ಹ್‌ಚೇರ್ 1-3 ವಿಭಾಗದಲ್ಲಿ ಡಾ. ಎಸ್.ಜಿ. ರಾಜಲಕ್ಷ್ಮಿ ಹಾಗೂ ಮಹಿಳೆಯರ ವೀಲ್ಹ್‌ಚೇರ್-4 ವಿಭಾಗದಲ್ಲಿ ಲಲಿತಾ ಶಂಕರ್ ಕಂಚಿನ ಪದಕ ಪಡೆದಿದ್ದಾರೆ.ಕ್ರೀಡಾಕೂಟದಲ್ಲಿ ಕರ್ನಾಟಕ 6 ಚಿನ್ನ, 8 ಬೆಳ್ಳಿ, 10 ಕಂಚಿನೊಂದಿಗೆ ಒಟ್ಟು 24 ಪದಕಗಳನ್ನು ಗೆದ್ದು ಪದಕ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ.ತಲಾ 38 ಚಿನ್ನ, ಬೆಳ್ಳಿ, 24 ಕಂಚಿನೊಂದಿಗೆ ಒಟ್ಟು 100 ಪದಕಗಳನ್ನು ಗೆದ್ದಿರುವ ಹರ್ಯಾಣ ಅಗ್ರಸ್ಥಾನ ಕಾಯ್ದುಕೊಂಡಿದ್ದು, 24 ಚಿನ್ನ ಸೇರಿ ಒಟ್ಟು 54 ಪದಕ ಗೆದ್ದಿರುವ ಉತ್ತರ ಪ್ರದೇಶ, 18 ಚಿನ್ನ ಸೇರಿ ಒಟ್ಟು 38 ಪದಕ ಗೆದ್ದಿರುವ ತಮಿಳುನಾಡು ಕ್ರಮವಾಗಿ 2 ಹಾಗೂ 3ನೇ ಸ್ಥಾನಗಳಲ್ಲಿವೆ. ಭಾನುವಾರ ಕ್ರೀಡಾಕೂಟಕ್ಕೆ ತೆರೆ ಬೀಳಲಿದೆ.