ಸಾರಾಂಶ
ಬಿಲಾಸ್‌ಪುರ್: 19ನೇ ರಾಷ್ಟ್ರೀಯ ಕಿರಿಯರ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ 2ನೇ ದಿನವಾದ ಭಾನುವಾರ ಕರ್ನಾಟಕಕ್ಕೆ ಎರಡು ಪದಕ ದೊರೆಯಿತು. ಬಾಲಕಿಯರ 1000 ಮೀ. ಓಟದ ಸ್ಪರ್ಧೆಯಲ್ಲಿ ಪ್ರಣತಿ 2 ನಿಮಿಷ 51.67 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಬೆಳ್ಳಿ ಪದಕ ಪಡೆದರು. ಇನ್ನು, ಬಾಲಕಿಯರ ಹೈಜಂಪ್‌ನಲ್ಲಿ 1.62 ಮೀ. ಎತ್ತರಕ್ಕೆ ಜಿಗಿದ ಗೌತಮಿ ಕಂಚಿನ ಪದಕ ತಮ್ಮದಾಗಿಸಿಕೊಂಡರು. ಸೋಮವಾರ ಚಾಂಪಿಯನ್‌ಶಿಪ್‌ನ ಕೊನೆಯ ದಿನವಾಗಿದ್ದು, ಕರ್ನಾಟಕ ಮತ್ತಷ್ಟು ಪದಕಗಳನ್ನು ಗೆಲ್ಲುವ ನಿರೀಕ್ಷೆಯಲ್ಲಿದೆ. ಗ್ರ್ಯಾನ್ ಪ್ರಿ ಬಾಕ್ಸಿಂಗ್: ಭಾರತದ ಲವ್ಲೀನಾ ಬೊರ್ಗೊಹೈನ್ ಬೆಳ್ಳಿಗೆ ತೃಪ್ತಿ
ನವದೆಹಲಿ: ಚೆಕ್ ರಣರಾಜ್ಯದಲ್ಲಿ ನಡೆದ ಗ್ರ್ಯಾನ್ ಪ್ರಿ ಉಸ್ತಿ ನಾಡ್ ಲಾಬೆಮ್ ಬಾಕ್ಸಿಂಗ್ ಕೂಟದಲ್ಲಿ ಟೋಕಿಯೋ ಒಲಿಂಪಿಕ್ಸ್ ಪದಕ ವಿಜೇತೆ, ಭಾರತದ ತಾರಾ ಬಾಕ್ಸರ್ ಲವ್ಲೀನಾ ಬೊರ್ಗೊಹೈನ್ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿದ್ದಾರೆ. ಮಹಿಳೆಯರ 75 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಲವ್ಲೀನಾ, ಹಾಲಿ ಏಷ್ಯನ್ ಗೇಮ್ಸ್ ಚಾಂಪಿಯನ್ ಚೀನಾದ ಲಿ ಕಿಯಾನ್ ವಿರುದ್ಧ 2-3ರಲ್ಲಿ ಸೋಲುಂಡರು. ಲವ್ಲೀನಾ, ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.