ಸಾರಾಂಶ
- ಚೊಚ್ಚಲ ಆವೃತ್ತಿಯ ಪ್ಯಾರಾ ಖೇಲೋ ಇಂಡಿಯಾಗೆ ತೆರೆ - 7 ಚಿನ್ನ, 10 ಬೆಳ್ಳಿ, 13 ಕಂಚಿನ ಪದಕ ಗೆದ್ದ ಕರ್ನಾಟಕ - 114 ಪದಕಗಳನ್ನು ಗೆದ್ದ ಹರ್ಯಾಣಗೆ ಚಾಂಪಿಯನ್ ಪಟ್ಟ ಕನ್ನಡಪ್ರಭ ವಾರ್ತೆ ಬೆಂಗಳೂರುಉದ್ಘಾಟನಾ ಆವೃತ್ತಿಯ ಪ್ಯಾರಾ ಖೇಲೋ ಇಂಡಿಯಾ ಕ್ರೀಡಾಕೂಟಕ್ಕೆ ತೆರೆ ಬಿದ್ದಿದ್ದು, ಕರ್ನಾಟಕ ಒಟ್ಟು 30 ಪದಕಗಳೊಂದಿಗೆ ಅಭಿಯಾನ ಕೊನೆಗೊಳಿಸಿದೆ. ಕೂಟದ ಕೊನೆಯ ದಿನವಾದ ಭಾನುವಾರ ಟೇಬಲ್ ಟೆನಿಸ್‌ನಲ್ಲಿ ರಾಜ್ಯಕ್ಕೆ 1 ಚಿನ್ನ, 2 ಬೆಳ್ಳಿ, 3 ಕಂಚಿನ ಪದಕಗಳು ದೊರೆತವು.ಮಹಿಳೆಯರ ಕ್ಲಾಸ್-8ರ ವಿಭಾಗದಲ್ಲಿ ಸವಿತಾ ಅಜ್ಜನಕಟ್ಟಿ ಚಿನ್ನದ ಪದಕ ಗೆದ್ದರು. ಫೈನಲ್‌ನಲ್ಲಿ ಅವರು ಗುಜರಾತ್‌ನ ಸರಳ ಸೋಲಂಕಿ ವಿರುದ್ಧ 11-5, 11-3, 11-7 ಸೆಟ್‌ಗಳಲ್ಲಿ ಗೆದ್ದರು. ಪುರುಷರ ಕ್ಲಾಸ್-7 ವಿಭಾಗದಲ್ಲಿ ಸಂಜೀವ್ ಹಮ್ಮಣ್ಣನವರ್, ಕ್ಲಾಸ್-8 ವಿಭಾಗದಲ್ಲಿ ಶಶಿಧರ್ ಕುಲ್ಕರ್ಣಿ ಬೆಳ್ಳಿಗೆ ತೃಪ್ತಿಪಟ್ಟರೆ, ಮಹಿಳೆಯರ ಕ್ಲಾಸ್-7ನಲ್ಲಿ ಮಯಾವ್ವ, ಪುರುಷರ ಕ್ಲಾಸ್-7ನಲ್ಲಿ ಸಂಜೀವ್ ಕುಮಾರ್ ಹಜೇರಿ, ಕ್ಲಾಸ್-8 ವಿಭಾಗದಲ್ಲಿ ಅಜಯ್ ಜಿ.ವಿ. ಕಂಚಿನ ಪದಕ ಪಡೆದರು.ಕರ್ನಾಟಕ ಕೂಟದಲ್ಲಿ ಒಟ್ಟಾರೆ 7 ಚಿನ್ನ, 10 ಬೆಳ್ಳಿ ಹಾಗೂ 13 ಕಂಚಿನ ಪದಕ ಪಡೆದು, ಪದಕ ಪಟ್ಟಿಯಲ್ಲಿ 9ನೇ ಸ್ಥಾನ ಗಳಿಸಿತು. 40 ಚಿನ್ನ, 39 ಬೆಳ್ಳಿ, 35 ಕಂಚಿನೊಂದಿಗೆ ಒಟ್ಟು 114 ಪದಕ ಗೆದ್ದ ಹರ್ಯಾಣ ಸಮಗ್ರ ಚಾಂಪಿಯನ್ ಎನಿಸಿತು.