ಸಾರಾಂಶ
ಪ್ಯಾರಾ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ಸುಹಾಸ್ ಯತಿರಾಜ್ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಜೊತೆಗೆ ಪ್ರಮೋದ್ ಭಗತ್ ಮತ್ತು ಕೃಷ್ಣ ನಾಗರ್ ಕೂಡಾ ಬಂಗಾರದ ಸಾಧನೆ ಮಾಡಿದ್ದಾರೆ.
ಪಟ್ಟಾಯಾ(ಥಾಯ್ಲೆಂಡ್): ಪ್ಯಾರಾ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ಸುಹಾಸ್ ಯತಿರಾಜ್ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಜೊತೆಗೆ ಪ್ರಮೋದ್ ಭಗತ್ ಮತ್ತು ಕೃಷ್ಣ ನಾಗರ್ ಕೂಡಾ ಬಂಗಾರದ ಸಾಧನೆ ಮಾಡಿದ್ದಾರೆ.ವಿಶ್ವ ನಂ.3 ಸುಹಾಸ್ ಅವರು ಪುರುಷರ ಸಿಂಗಲ್ಸ್ ಎಸ್‌ಎಲ್4 ವಿಭಾಗದ ಫೈನಲ್‌ನಲ್ಲಿ ಇಂಡೋನೆಷ್ಯಾದ ಫ್ರೆಡಿ ಸೆಟಿವಾನ್ ವಿರುದ್ಧ 21-18, 21-18 ಅಂತರದಲ್ಲಿ ಗೆದ್ದರು. ಪ್ಯಾರಾಲಿಂಪಿಕ್ಸ್ ಬೆಳ್ಳಿ ವಿಜೇತ ಸುಹಾಸ್ 2007 ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿದ್ದು, ಸದ್ಯ ಉತ್ತರ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಎಸ್‌ಎಲ್3 ವಿಭಾಗದ ಫೈನಲ್‌ನಲ್ಲಿ ಭಗತ್ ಇಂಗ್ಲೆಂಡ್‌ನ ಡೇನಿಯಲ್ ಬಾಥೆಲ್ ವಿರುದ್ಧ 14-21, 21-15, 21-14ರಲ್ಲಿ ಗೆದ್ದರೆ, ಎಸ್‌ಎಚ್6 ವಿಭಾಗದ ಫೈನಲ್‌ನಲ್ಲಿ ನಾಗರ್ ಚೀನಾದ ಲಿನ್ ನೈಲಿ ಅವರನ್ನು 22-20 22-20ರಲ್ಲಿ ಸೋಲಿಸಿದರು.