ಸಾರಾಂಶ
ವಿಜಯ್ ಹಜಾರೆ ಏಕದಿನ ಟೂರ್ನಿಯ ಸೆಮಿಫೈನಲ್‌ನಲ್ಲಿ ಗುರುವಾರ ಕರ್ನಾಟಕಕ್ಕೆ ರಾಜಸ್ಥಾನದ ಸವಾಲು ಎದುರಾಗಲಿದೆ. 4 ಬಾರಿಯ ಚಾಂಪಿಯನ್ ಕರ್ನಾಟಕ 5ನೇ ಬಾರಿ ಫೈನಲ್ ಪ್ರವೇಶಿಸಲು ಎದುರು ನೋಡುತ್ತಿದ್ದರೆ, 2006-07ರ ಬಳಿಕ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿ ಟ್ರೋಫಿ ಗೆಲ್ಲುವ ಕನಸು ರಾಜಸ್ಥಾನದ್ದು.
ರಾಜ್‌ಕೋಟ್: ವಿಜಯ್ ಹಜಾರೆ ಏಕದಿನ ಟೂರ್ನಿಯ ಸೆಮಿಫೈನಲ್‌ನಲ್ಲಿ ಗುರುವಾರ ಕರ್ನಾಟಕಕ್ಕೆ ರಾಜಸ್ಥಾನದ ಸವಾಲು ಎದುರಾಗಲಿದೆ. 4 ಬಾರಿಯ ಚಾಂಪಿಯನ್ ಕರ್ನಾಟಕ 5ನೇ ಬಾರಿ ಫೈನಲ್ ಪ್ರವೇಶಿಸಲು ಎದುರು ನೋಡುತ್ತಿದ್ದರೆ, 2006-07ರ ಬಳಿಕ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿ ಟ್ರೋಫಿ ಗೆಲ್ಲುವ ಕನಸು ರಾಜಸ್ಥಾನದ್ದು.
ಟೂರ್ನಿಯಲ್ಲಿ ಎರಡೂ ತಂಡಗಳಿಂದ ಪರಿಣಾಮಕಾರಿ ಪ್ರದರ್ಶನ ಮೂಡಿಬಂದಿದೆ. ಗುಂಪು ಹಂತದಲ್ಲಿ ಕರ್ನಾಟಕ ಒಂದು ಪಂದ್ಯವನ್ನು ಸೋತರೂ, ನೇರವಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಲು ಯಶಸ್ವಿಯಾಗಿತ್ತು. ಕ್ವಾರ್ಟರ್‌ನಲ್ಲಿ ವಿದರ್ಭ ವಿರುದ್ಧ ಸುಲಭವಾಗಿ ಗೆದ್ದು ಸೆಮೀಸ್‌ಗೇರಿತ್ತು. ಲೀಗ್ ಹಂತದಲ್ಲಿ ಪ್ರಚಂಡ ಆಟವಾಡಿದ ದೇವದತ್ ಪಡಿಕ್ಕಲ್ ಹಾಗೂ ವೇಗಿ ವಿದ್ವತ್ ಕಾವೇರಪ್ಪ ಭಾರತ ‘ಎ’ ತಂಡದೊಂದಿಗೆ ದ.ಆಫ್ರಿಕಾಕ್ಕೆ ತೆರಳಿರುವ ಕಾರಣ, ಇವರಿಬ್ಬರ ಅನುಪಸ್ಥಿತಿಯಲ್ಲೇ ತಂಡ ಆಡಬೇಕಿದೆ. ಮತ್ತೊಂದೆಡೆ ರಾಜಸ್ಥಾನ ಗುಂಪು ಹಂತದಲ್ಲಿ ಆಡಿದ ಎಲ್ಲಾ 6 ಪಂದ್ಯಗಳಲ್ಲಿ ಜಯಭೇರಿ ಬಾರಿಸಿ, ಸೆಮೀಸ್‌ನಲ್ಲಿ ಕೇರಳವನ್ನು 200 ರನ್‌ಗಳಿಂದ ಬಗ್ಗುಬಡಿದಿತ್ತು. ದೀಪಕ್ ಹೂಡಾ, ಖಲೀಲ್ ಅಹ್ಮದ್, ಅನಿಕೇತ್ ಚೌಧರಿ, ರಾಹುಲ್ ಚಹರ್‌ರಂತಹ ಅನುಭವಿ ಆಟಗಾರರ ಬಲ ತಂಡಕ್ಕಿದ್ದು, ಕರ್ನಾಟಕಕ್ಕೆ ಕಠಿಣ ಸವಾಲು ಎದುರಾಗುವ ನಿರೀಕ್ಷೆ ಇದೆ. ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ, ನೇರ ಪ್ರಸಾರ: ಜಿಯೋ ಸಿನಿಮಾ;Resize=(128,128))
;Resize=(128,128))
;Resize=(128,128))
;Resize=(128,128))