ಜಾವೆಲಿನ್‌ನಲ್ಲಿ ಕರ್ನಾಟಕದ ಕರಿಶ್ಮಾ ಸನಿಲ್‌, ರಮ್ಯಶ್ರೀಗೆ ಬೆಳ್ಳಿ

| Published : Mar 23 2024, 01:03 AM IST

ಜಾವೆಲಿನ್‌ನಲ್ಲಿ ಕರ್ನಾಟಕದ ಕರಿಶ್ಮಾ ಸನಿಲ್‌, ರಮ್ಯಶ್ರೀಗೆ ಬೆಳ್ಳಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯಕ್ಕೆ ಕೂಟದಲ್ಲಿ 2 ಪದಕ ಒಲಿಯಿತು. ಎರಡು ಕೂಡಾ ಜಾವೆಲಿನ್‌ ಎಸೆತದಲ್ಲೇ ಬಂತು. ಮಹಿಳೆಯರ ಜಾವೆಲಿನ್‌ ಥ್ರೋನಲ್ಲಿ ರಾಜ್ಯದ ಕರೀಶ್ಮಾ ಸನಿಲ್‌, ಅಂಡರ್‌-20 ಜಾವೆಲಿನ್‌ ಥ್ರೋನಲ್ಲಿ ರಮ್ಯಶ್ರೀ ಜೈನ್‌ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.

ಪಟಿಯಾಲಾ: ಇಲ್ಲಿ ನಡೆದ 3ನೇ ಆವೃತ್ತಿಯ ರಾಷ್ಟ್ರೀಯ ಓಪನ್‌ ಥ್ರೋ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ಇಬ್ಬರು ಜಾವೆಲಿನ್‌ ಎಸೆತದಲ್ಲಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಮಹಿಳೆಯರ ಜಾವೆಲಿನ್‌ ಥ್ರೋನಲ್ಲಿ ರಾಜ್ಯದ ಕರೀಶ್ಮಾ ಸನಿಲ್‌ ಅವರು 51.02 ಮೀ. ದೂರ ದಾಖಲಿಸಿ 2ನೇ ಸ್ಥಾನಿಯಾದರು. ಮಹಿಳೆಯರ ಅಂಡರ್‌-20 ಜಾವೆಲಿನ್‌ ಥ್ರೋನಲ್ಲಿ ರಮ್ಯಶ್ರೀ ಜೈನ್‌ 46.37 ಮೀ. ದೂರದೊಂದಿಗೆ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.ಕಬಡ್ಡಿ: ರಾಜ್ಯಕ್ಕೆ ಸತತ 2ನೇ ಜಯ

ಅಹ್ಮದ್‌ನಗರ(ಮಹಾರಾಷ್ಟ್ರ): ಇಲ್ಲಿ ನಡೆಯುತ್ತಿರುವ 70ನೇ ರಾಷ್ಟ್ರೀಯ ಪುರುಷರ ಕಬಡ್ಡಿ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ಸತತ 2ನೇ ಗೆಲುವು ದಾಖಲಿಸಿದೆ. ಗುರುವಾರ ‘ಎಫ್‌’ ಗುಂಪಿನ ಮೊದಲ ಪಂದ್ಯದಲ್ಲಿ ರಾಜ್ಯ ತಂಡಕ್ಕೆ ಚತ್ತೀಸ್‌ಗಢ ವಿರುದ್ಧ 54-33 ಅಂಕಗಳ ಭರ್ಜರಿ ಗೆಲುವು ಲಭಿಸಿತು. ಶುಕ್ರವಾರ ನಡೆದ 2ನೇ ಪಂದ್ಯದಲ್ಲಿ ಕರ್ನಾಟಕ ತಂಡ ತೆಲಂಗಾಣವನ್ನು 49-32 ಅಂಕಗಳಿಂದ ಸೋಲಿಸಿತು.ಐಪಿಎಲ್‌: ರಾಜ್ಯದ ಶರತ್‌ ಗುಜರಾತ್‌ ತಂಡ ಸೇರ್ಪಡೆ

ನವದೆಹಲಿ: ಕರ್ನಾಟಕದ ವಿಕೆಟ್‌ ಕೀಪರ್ ಬ್ಯಾಟರ್ ಬಿ.ಆರ್‌.ಶರತ್‌ ಅವರನ್ನು 17ನೇ ಆವೃತ್ತಿ ಐಪಿಎಲ್‌ಗೂ ಮುನ್ನ ಗುಜರಾತ್‌ ಟೈಟಾನ್ಸ್‌ ತಂಡಕ್ಕೆ ಸೇರ್ಪಡೆಗೊಳಿಸಿದೆ. ಹರಾಜಿನಲ್ಲಿ ಗುಜರಾತ್‌ ತಂಡ ಜಾರ್ಖಂಡ್‌ನ ಯುವ ಆಟಗಾರ ರಾಬಿನ್ ಮಿನ್ಜ್‌ ಅವರನ್ನು ₹3.6 ಕೋಟಿ ನೀಡಿ ಖರೀದಿಸಿತ್ತು. ಆದರೆ ರಾಬಿನ್‌ ಇತ್ತೀಚೆಗಷ್ಟೇ ಬೈಕ್‌ ಅಪಘಾತಕ್ಕೀಡಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಶರತ್‌ರನ್ನು ₹20 ಲಕ್ಷ ನೀಡಿ ತಂಡಕ್ಕೆ ಸೇರ್ಪಡೆಗೊಳಿಸಿದೆ. ಇದೇ ವೇಳೆ ರಾಜಸ್ತಾನ ರಾಯಲ್ಸ್‌ ತಂಡ ಆಸ್ಟ್ರೇಲಿಯಾದ ಸ್ಪಿನ್ನರ್‌ ಆ್ಯಡಂ ಜಂಪಾ ಬದಲು ಮಹಾರಾಷ್ಟ್ರದ ತನುಶ್ ಕೋಟ್ಯಾನ್‌ರನ್ನು ₹20 ಲಕ್ಷ ನೀಡಿ ಖರೀದಿಸಿದೆ.