ಸಾರಾಂಶ
ಬೆಂಗಳೂರು: ಇಲ್ಲಿ ನಡೆಯುತ್ತಿರುವ 13ನೇ ರಾಷ್ಟ್ರೀಯ ಕಿರಿಯರ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ಉಲ್ಲಾಸ್ ಗೌಡ ಅಂಡರ್-17 ಬಾಲಕರ ಶಾಟ್‌ಪುಟ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.
ಮಂಗಳವಾರ ಅವರು 4.40 ಮೀ. ದೂರ ದಾಖಲಿಸಿ ಅಗ್ರಸ್ಥಾನಿಯಾದರು. 100 ಮೀ. ಓಟದ ಟಿ12 ವಿಭಾಗದಲ್ಲಿ ವಿಕಾಸ್ ಗೌಡ, ಟಿ13 ವಿಭಾಗದಲ್ಲಿ ಗೌತಮ್, ಶಾಟ್‌ಪುಟ್ ಪಿ46, ಪಿ47 ವಿಭಾಗದಲ್ಲಿ ಶ್ರೀ ಹರಿ, ಮಹಿಳೆಯರ 100 ಮೀ. ಟಿ13 ವಿಭಾಗದಲ್ಲಿ ಆಸಿಯಾ ಬೇಗಂ, ಅಂಡರ್-19 ವಿಭಾಗದ ಮಹಿಳೆಯರ 100 ಮೀ. ಓಟದಲ್ಲಿ ಶಾಹಿಸ್ತಾ ಬೇಗಂ ಬೆಳ್ಳಿ ಪದಕ ಗೆದ್ದರು.
ಶಾಟ್‌ಪುಟ್‌ನಲ್ಲಿ ನಂದಿತಾ ಹಾಗೂ ಭಾರತಿ ಕ್ರಮವಾಗಿ ಬೆಳ್ಳಿ, ಕಂಚು ಪಡೆದರು. 1500 ಮೀ. ಓಟದಲ್ಲಿ ಸಿದ್ದರಾಮಯ್ಯ, ಮಹಿಳೆಯರ 100 ಮೀ. ಓಟದಲ್ಲಿ ಸೌಮ್ಯಾ ನಾಗಪ್ಪ ಕಂಚು, ಶಾಟ್‌ಪುಟ್‌ನಲ್ಲಿ ಗ್ರೀಷ್ಮಾ, ಅಂಡರ್-19 ವಿಭಾಗದ 100 ಮೀ. ಓಟದಲ್ಲಿ ಪ್ರಕಾಶ್ ಕಂಚು ಗೆದ್ದರು.
ವಿಶ್ವ ಕಿರಿಯರ ಸ್ಕ್ವ್ಯಾಶ್: ಭಾರತದ ಶೌರ್ಯಗೆ ಕಂಚು
ನವದೆಹಲಿ: ಅಮೆರಿಕದ ಹ್ಯೂಸ್ಟನ್‌ನಲ್ಲಿ ನಡೆದ ವಿಶ್ವ ಕಿರಿಯರ ಸ್ಕ್ವ್ಯಾಶ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಶೌರ್ಯ ಬಾವಾ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. 18 ವರ್ಷದ ಶೌರ್ಯ ಬಾವಾ ಬುಧವಾರ ಬಾಲಕರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಈಜಿಫ್ಟ್‌ನ ಮೊಹಮದ್ ಝಕರಿಯಾ ವಿರುದ್ಧ 0-3 ಅಂತರದಲ್ಲಿ ಪರಾಭವಗೊಂಡರು. 2014ರಲ್ಲಿ ಕುಶಾ ಕುಮಾರ್ ಬಳಿಕ ಸೆಮೀಸ್‌ಗೇರಿದ ಕೇವಲ 2ನೇ ಭಾರತೀಯ ಎನ್ನುವ ಹಿರಿಮೆಗೆ ಶೌರ್ಯ ಪಾತ್ರರಾಗಿದ್ದರು. ಆದರೆ ಸೆಮೀಸ್‌ನಲ್ಲಿ ಸೋಲುವ ಮೂಲಕ ಚಿನ್ನದ ಪದಕ ತಪ್ಪಿಸಿಕೊಂಡರು.