ಕೌಶಿಕ್‌ ಮ್ಯಾಜಿಕ್‌: ರಣಜಿಯಲ್ಲಿ ಕರ್ನಾಟಕ ಮೇಲುಗೈ

| Published : Jan 13 2024, 01:38 AM IST

ಕೌಶಿಕ್‌ ಮ್ಯಾಜಿಕ್‌: ರಣಜಿಯಲ್ಲಿ ಕರ್ನಾಟಕ ಮೇಲುಗೈ
Share this Article
  • FB
  • TW
  • Linkdin
  • Email

ಸಾರಾಂಶ

ರಣಜಿ ಟ್ರೋಫಿ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ರಾಜ್ಯ ವೇಗಿಗಳ ಮಾರಕ ದಾಳಿಯಿಂದ ಮೊದಲ ದಿನವೇ ಗುಜರಾತ್‌ 264ಕ್ಕೆ ಆಲೌಟ್‌ ಆಗಿದೆ. 45ಕ್ಕೆ 4 ವಿಕೆಟ್‌ ಕಳೆದುಕೊಂಡ ಬಳಿಕ ಹೋರಾಟ ನಡೆಸಿದ ಗುಜರಾತ್‌, ಕೊನೆಯಲ್ಲಿ ದಿಢೀರ್‌ ಕುಸಿತ ಕಂಡಿತು. ರಾಜ್ಯದ ಪರ 4 ವಿಕೆಟ್‌ ಕೌಶಿಕ್‌ ಕಿತ್ತರು.
ರಣಜಿ ಟ್ರೋಫಿ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ರಾಜ್ಯ ವೇಗಿಗಳ ಮಾರಕ ದಾಳಿಯಿಂದ ಮೊದಲ ದಿನವೇ ಗುಜರಾತ್‌ 264ಕ್ಕೆ ಆಲೌಟ್‌ ಆಗಿದೆ. 45ಕ್ಕೆ 4 ವಿಕೆಟ್‌ ಕಳೆದುಕೊಂಡ ಬಳಿಕ ಹೋರಾಟ ನಡೆಸಿದ ಗುಜರಾತ್‌, ಕೊನೆಯಲ್ಲಿ ದಿಢೀರ್‌ ಕುಸಿತ ಕಂಡಿತು. ರಾಜ್ಯದ ಪರ 4 ವಿಕೆಟ್‌ ಕೌಶಿಕ್‌ ಕಿತ್ತರು.

ಅಹಮದಾಬಾದ್‌: ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಕರ್ನಾಟಕದ ವೇಗಿಗಳು ಮತ್ತೊಮ್ಮೆ ಅಬ್ಬರದ ಪ್ರದರ್ಶನದೊಂದಿಗೆ ಎದುರಾಳಿಗಳ ನಿದ್ದೆಗೆಡಿಸಿದ್ದಾರೆ. ವಾಸುಕಿ ಕೌಶಿಕ್‌, ಪ್ರಸಿದ್ಧ್‌ ಕೃಷ್ಣ ಹಾಗೂ ವೈಶಾಕ್‌ ಅವರನ್ನೊಳಗೊಂಡ ವೇಗದ ಬೌಲಿಂಗ್‌ ಪಡೆಯ ಮಾರಕ ದಾಳಿಯಿಂದಾಗಿ ಕರ್ನಾಟಕ ವಿರುದ್ಧ ಮೊದಲ ದಿನವೇ ಗುಜರಾತ್‌ 264 ರನ್‌ಗೆ ಆಲೌಟಾಗಿದೆ.ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ದುಕೊಂಡ ಕರ್ನಾಟಕ ನಾಯಕ ಮಯಾಂಕ್‌ ಅಗರ್‌ವಾಲ್‌ ಯೋಜನೆ ಆರಂಭದಲ್ಲೇ ಕೈಹಿಡಿಯಿತು. ರಾಜ್ಯದ ಮೊನಚು ದಾಳಿ ಮುಂದೆ ತತ್ತರಿಸಿದ ಗುಜರಾತ್‌ 45 ರನ್‌ ಗಳಿಸುವಷ್ಟರಲ್ಲೇ ಪ್ರಮುಖ ನಾಲ್ವರನ್ನು ಕಳೆದುಕೊಂಡಿತು. ಪ್ರಿಯಾಂಕ್‌ ಪಾಂಚಲ್‌ 24, ಹೆಟ್‌ ಪಟೇಲ್‌ 4, ಹಿಂಗ್ರಾಜಿಯಾ 4 ರನ್‌ ಗಳಿಸಿದರೆ, ಸನ್‌ಪ್ರೀತ್‌ ಬಗ್ಗ ಶೂನ್ಯ ಸುತ್ತಿದರು. ಆದರೆ ಬಳಿಕ ಗುಜರಾತ್ ಪುಟಿದೆದ್ದಿತು.5ನೇ ವಿಕೆಟ್‌ಗೆ ಜೊತೆಯಾದ ಕ್ಷಿತಿಜ್‌ ಪಟೇಲ್‌ ಹಾಗೂ ಉಮಾಂಗ್‌ ಹೋರಾಟದ ಮೂಲಕ ತಂಡಕ್ಕೆ ಆಸರೆಯಾದರು. ಈ ಜೋಡಿ 276 ಎಸೆತಗಳಲ್ಲಿ 157 ರನ್‌ ಸೇರಿಸಿ ಚೇತರಿಕೆ ನೀಡಿದರು. ಆದರೆ 95 ರನ್‌ ಗಳಿಸಿದ್ದ ಕ್ಷಿತಿಜ್‌ರನ್ನು ವೈಶಾಕ್‌ ಪೆವಿಲಿಯನ್‌ಗೆ ಅಟ್ಟುವ ಮೂಲಕ ಮತ್ತೆ ಪಂದ್ಯದ ಮೇಲೆ ರಾಜ್ಯ ತಂಡ ಹಿಡಿತ ಸಾಧಿಸಿತು.ದಿಢೀರ್‌ ಕುಸಿತ: 4 ವಿಕೆಟ್‌ಗೆ 202 ಗಳಿಸಿದ್ದ ಗುಜರಾತ್‌ ಬಳಿಕ ದಿಢೀರ್‌ ಕುಸಿತಕ್ಕೊಳಗಾಯಿತು. ಸ್ಪಿನ್ನರ್‌ ರೋಹಿತ್‌ ಕುಮಾರ್‌ ಉಮಾಂಗ್‌(72)ರನ್ನು ಔಟ್‌ ಮಾಡಿದರು. ನಾಯಕ ಚಿಂತನ್ ಗಾಜ ಔಟಾಗದೆ 45 ರನ್‌ ಗಳಿಸಿದರು. ವಾಸುಕಿ ಕೌಶಿಕ್‌ 49ಕ್ಕೆ 4 ವಿಕೆಟ್‌ ಕಿತ್ತರೆ, ಪ್ರಸಿದ್ಧ್‌ ಕೃಷ್ಣ, ವಿಜಯ್‌ಕುಮಾರ್ ವೈಶಾಕ್‌ ಹಾಗೂ ಸ್ಪಿನ್ನರ್‌ ರೋಹಿತ್‌ ಕುಮಾರ್‌ ತಲಾ 2 ವಿಕೆಟ್‌ ಕಿತ್ತರು.

ಸ್ಕೋರ್‌: ಗುಜರಾತ್‌ ಮೊದಲ ಇನ್ನಿಂಗ್ಸ್‌ 88 ಓವರಲ್ಲಿ 264/10 (ಕ್ಷಿತಿಜ್‌ 95, ಉಮಾಂಗ್‌ 72, ಕೌಶಿಕ್‌ 4-49)-ಸುಜಯ್‌ ಪಾದಾರ್ಪಣೆಗುಜರಾತ್‌ ವಿರುದ್ಧ ಪಂದ್ಯದಲ್ಲಿ ಸುಜಯ್‌ ಸತೇರಿ ಅವರು ರಾಜ್ಯ ತಂಡಕ್ಕೆ ಪಾದಾರ್ಪಣೆ ಮಾಡಿದರು. ಅವರು ಕರ್ನಾಟಕದ ಪರ ರಣಜಿ ಆಡುತ್ತಿರುವ 304ನೇ ಆಟಗಾರ ಹಾಗೂ 34ನೇ ವಿಕೆಟ್‌ ಕೀಪರ್‌. ಕಳೆದ ಪಂದ್ಯದಲ್ಲಿ ಆಡಿದ್ದ ಶ್ರೀನಿವಾಸ್‌ ಶರತ್‌ ಈ ಪಂದ್ಯದಿಂದ ಹೊರಬಿದ್ದರು. ಅವರ ಜಾಗಕ್ಕೆ ಸುಜಯ್‌ ಆಯ್ಕೆಯಾದರು.