ಖೋ ಖೋ: ತಮಿಳುನಾಡಿಗೆ ಪ್ರಯಾಣ
KannadaprabhaNewsNetwork | Published : Oct 06 2023, 01:14 AM IST
ಖೋ ಖೋ: ತಮಿಳುನಾಡಿಗೆ ಪ್ರಯಾಣ
ಸಾರಾಂಶ
ಖೋ ಖೋ: ತಮಿಳುನಾಡಿಗೆ ಪ್ರಯಾಣ, ರಾಜ್ಯ ತಂಡದಲ್ಲಿ ಮಂಡ್ಯ ಜಿಲ್ಲೆಯಿಂದ ಐವರು ಬಾಲಕಿಯರು
- ಸಬ್ ಜೂನಿಯರ್ ಕರ್ನಾಟಕ ತಂಡದಿಂದ ಪ್ರಯಾಣ - ರಾಜ್ಯ ತಂಡದಲ್ಲಿ ಮಂಡ್ಯ ಜಿಲ್ಲೆಯಿಂದ ಐವರು ಬಾಲಕಿಯರು ಕನ್ನಡಪ್ರಭ ವಾರ್ತೆ ಪಾಂಡವಪುರ ತಮಿಳುನಾಡಿನ ಹೊಸೂರಿನಲ್ಲಿ ಅ.6 ರಿಂದ 8ರ ವರೆಗೆ ನಡೆಯಲಿರುವ ಬಾಲಕಿಯರ ರಾಷ್ಟ್ರ ಮಟ್ಟದ ಖೇಲೋ ಇಂಡಿಯಾ ಖೋಖೋ ಪಂದ್ಯಾವಳಿಗೆ ಕರ್ನಾಟಕ ರಾಜ್ಯ ಸಬ್ ಜೂನಿಯರ್ ತಂಡದ 15 ಮಂದಿ ಆಟಗಾರರು ಗುರುವಾರ ಪ್ರಯಾಣ ಬೆಳೆಸಿದರು. ತಾಲೂಕಿನ ಕ್ಯಾತನಹಳ್ಳಿ ಕ್ರೀಡಾ ಸಂಸ್ಥೆಯ ಆವರಣದಲ್ಲಿ ಕ್ರೀಡಾ ಸಂಸ್ಥೆ ಮುಖ್ಯಸ್ಥರು ಹಾಗೂ ಪದಾಧಿಕಾರಿಗಳು ಕರ್ನಾಟಕ ತಂಡವನ್ನು ಅಭಿನಂಧಿಸಿ ತಮಿಳುನಾಡಿಗೆ ಬೀಳ್ಕೊಟ್ಟರು. ರಾಜ್ಯ ತಂಡದಲ್ಲಿ ಜಿಲ್ಲೆಯ ಐವರು ಬಾಲಕಿಯರು ಸ್ಥಾನ ಪಡೆದಿದ್ದು, ಮದ್ದೂರು ತಾಲೂಕಿನ ಕೊಕ್ಕರೆ ಬೆಳ್ಳೂರು ಶಾಲೆ ನಂದಿನಿ, ಶ್ರೀರಂಗಪಟ್ಟಣ ತಾಲೂಕಿನ ಅಲ್ಲಾಪಟ್ಟಣ ಗ್ರಾಮದ ನ್ಯೂ ಆಕ್ಸ್ ಫರ್ಡ್ ಶಾಲೆ ವಿದ್ಯಾರ್ಥಿನಿ ಲೇಖನ.ಎಸ್, ಪಾಂಡವಪುರ ತಾಲೂಕು ಕ್ಯಾತನಹಳ್ಳಿ ಗ್ರಾಮದ ಶಾಲೆ ಶ್ರಾವಂತಿ, ಕೆ.ಪಿ.ಪೂರ್ವಿಕ, ಕೆ.ತ್ರಿಶಿಕ ಸ್ಥಾನ ಪಡೆದಿದ್ದಾರೆ. ಕರ್ನಾಟಕ ತಂಡವನ್ನು ಅಭಿನಂದಿಸಿ ಮಾತನಾಡಿದ ಜಿಲ್ಲಾ ಖೋಖೋ ಅಕಾಡಮಿ ಕಾರ್ಯದರ್ಶಿ ಕೆ.ಪಿ.ರವಿಕಾಮಾರ್, ಕ್ಯಾತನಹಳ್ಳಿ ಗ್ರಾಮದ ಮಣ್ಣಿನಲ್ಲಿ ಕ್ರೀಡೆಯ ಮೆರಗು ಅಡಗಿದೆ. ಈ ಮಣ್ಣಿನಲ್ಲಿ ತರಬೇತಿ ಪಡೆದಿರುವ ಹಲವು ಕ್ರೀಡಾಪಟುಗಳು ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ಪತಾಕೆ ಹಾರಿಸಿದ್ದಾರೆ. ಇಲ್ಲಿ ತರಬೇತಿ ಮುಗಿಸಿ ತಮಿಳುನಾಡಿನಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸುತ್ತಿರುವ ತಾವೆಲ್ಲರೂ, ಸಂಘಟನಾತ್ಮಕವಾಗಿ ಆಡುವ ಮೂಲಕ ತಂಡದ ಗೆಲುವಿಗೆ ಕಾರಣಕರ್ತರಾಗಬೇಕೆಂದು ಹುರಿದುಂಬಿಸಿದರು. ತರಬೇತುದಾರ ಮನೋಹರ್ ಮಾತನಾಡಿ, ಒಂದು ವಾರದ ತರಬೇತಿಯಲ್ಲಿ ತಮ್ಮೆಲ್ಲರ ಆಟ ಗಮನಾರ್ಹವಾಗಿದೆ. ಏಕಾಗೃತೆಯೊಂದಿಗೆ ಗೆಲುವನ್ನು ತಮ್ಮದಾಗಿಸಿಕೊಳ್ಳಬೇಕು. ಪಂದ್ಯದ ವೇಳೆ ಕೋಚ್‌ಗಳು ನೀಡುವ ಸಲಹೆ - ಸೂಚನೆ ಗಮನಿಸಿ ಎದುರಾಳಿ ತಂಡದ ವಿರುದ್ಧ ರಚನಾತ್ಮಕ ಆಟವಾಡುವಂತೆ ಸೂಚನೆ ನೀಡಿದರು. ಕಾರ್ಯಕ್ರಮದಲ್ಲಿ ಕ್ರೀಡಾ ಸಂಸ್ಥೆ ಮುಖ್ಯಸ್ಥರು ಹಾಗೂ ಪ್ರೋತ್ಸಾಕರಾದ ಕೆ.ಟಿ.ಗೋವಿಂದೇಗೌಡ, ಕೆ.ಪಿ.ಶಿವರಾಜ್, ಕುಮಾರಸ್ವಾಮಿ ಉಪಸ್ಥಿತರಿದ್ದರು. ತಮಿಳುನಾಡಿಗೆ ತೆರಳಿದ ರಾಜ್ಯದ ತಂಡದೊಂದಿಗೆ ಕೋಚ್ ಆಗಿ ಮಾನ್ಯ, ಸಹಾಯಕ ಕೋಚ್ ಆಗಿ ಆದಿತ್ಯ ಮತ್ತು ವ್ಯವಸ್ಥಾಪಕರಾಗಿ ಭೂಮಿಕ ತೆರಳಿದರು. 5ಕೆಎಂಎನ್ ಡಿ11 ರಾಷ್ಟ್ರ ಮಟ್ಟದ ಖೇಲೋ ಇಂಡಿಯಾ ಖೋಖೋ ಪಂದ್ಯಾವಳಿಗೆ ಕರ್ನಾಟಕ ರಾಜ್ಯ ಸಬ್ ಜೂನಿಯರ್ ತಂಡದ 15 ಮಂದಿ ಆಟಗಾರರು.