ಕೊಡವ ಹಾಕಿ: ಮಾದಂಡ ವಿರುದ್ಧ ಚೇಂದಿರಕ್ಕೆ ಭರ್ಜರಿ ಗೆಲುವು

| Published : Apr 18 2024, 02:30 AM IST / Updated: Apr 18 2024, 04:19 AM IST

ಕೊಡವ ಹಾಕಿ: ಮಾದಂಡ ವಿರುದ್ಧ ಚೇಂದಿರಕ್ಕೆ ಭರ್ಜರಿ ಗೆಲುವು
Share this Article
  • FB
  • TW
  • Linkdin
  • Email

ಸಾರಾಂಶ

ಚೆರಿಯಪರಂಬುವಿನ ಜನರಲ್ ಕೆ.ಎಸ್. ತಿಮ್ಮಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕುಂಡ್ಯೋಳಂಡ ಕಪ್ ಹಾಕಿ. ಸಣ್ಣುವಂಡ, ಕನ್ನಂಡ, ಚೇಂದಿರ, ಮಾತ್ರಂಡ ಸಹಿತ ಹಲವು ತಂಡಗಳ ಗೆಲುವು

ದುಗ್ಗಳ ಸದಾನಂದ

 ನಾಪೋಕ್ಲು: ಇಲ್ಲಿನ ಚೆರಿಯಪರಂಬುವಿನ ಜನರಲ್ ಕೆ.ಎಸ್. ತಿಮ್ಮಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕುಂಡ್ಯೋಳಂಡ ಕಪ್ ಹಾಕಿ ನಮ್ಮೆಯಲ್ಲಿ ಬುಧವಾರದ ಪಂದ್ಯಗಳಲ್ಲಿ ಸಣ್ಣುವಂಡ, ಕನ್ನಂಡ, ಚೇಂದಿರ, ಮಾತ್ರಂಡ, ಕೊಳ್ಳಿರ, ನಂಬುಡ ಮಾಡ, ಕಡೇಮಾಡ ತಂಡಗಳು ಜಯಭೇರಿ ಬಾರಿಸಿದವು.

ಚೇನಂಡ ಮತ್ತು ಮಾದಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಚೇಂದಿರ 4-0 ಅಂತರದಿಂದ ಮಾದಂಡ ವಿರುದ್ಧ ಭರ್ಜರಿ ಜಯ ಗಳಿಸಿತು. ಚೇತನ್, ವಿನು ಹಾಗೂ ಪುನೀತ್ ಗಳಿಸಿದ ಗೋಲುಗಳ ನೆರವಿನಿಂದ ಚೇಂದಿರ ತಂಡಕ್ಕೆ ಭರ್ಜರಿ ಜಯ ಲಭಿಸಿತು. 

ಸಣ್ಣುವಂಡ ಐಚಂಡ ವಿರುದ್ಧ 3- 0 ಅಂತರದಲ್ಲಿ, ಕನ್ನಂಡ ಕುಟ್ಟಂಡ ವಿರುದ್ಧ 2-1 ಅಂತರದಲ್ಲಿ ಗೆಲುವು ದಾಖಲಿಸಿತು. ಸೋಮಯಂಡ ಮತ್ತು ಮಾತ್ರಂಡ ತಂಡಗಳ ನಡುವೆ ಸಮ ಬಲದ ಹೋರಾಟ ನಡೆಯಿತು. 

ಬಳಿಕ ಟೈ ಬ್ರೇಕರ್ ನಲ್ಲಿ ಮಾತ್ರಂಡ 7-5 ಅಂತರದಿಂದ ಸೋಮಯಂಡ ವಿರುದ್ಧ ಜಯ ಸಾಧಿಸಿತು.ಮುಂಡಚಾಡಿರ ಕೊಳ್ಳಿರ ವಿರುದ್ಧ 1-0 ಅಂತರದಿಂದ ಜಯ ದಾಖಲಿಸಿದರೆ, ನಂಬುಡಮಾಡ ತೀತಿಮಾಡ ವಿರುದ್ಧ 3-1 ಅಂತರದ ಗೆಲವು ದಾಖಲಿಸಿತು. ಕಡೇಮಾಡ ತಂಡಕ್ಕೆ ಪಳಂಗಂಡ ವಿರುದ್ಧ 2-0 ಅಂತರದ ಜಯ ಲಭಿಸಿತು. ನಾಪಂಡ ತಂಡ ಮನೆಯಪಂಡ ವಿರುದ್ಧ 3-0 ಅಂತರದಿಂದ ಗೆದ್ದರೆ ಮೇರಿಯಂಡ ಬಾರಿಯಂಡ ತಂಡದ ವಿರುದ್ಧ 4-1ರ ಅಂತರದಿಂದ ಗೆಲುವು ಸಾಧಿಸಿತು.