ಸಾರಾಂಶ
ದುಗ್ಗಳ ಸದಾನಂದ
ನಾಪೋಕ್ಲು : ಇಲ್ಲಿನ ಚೆರಿಯ ಪರಂಬುವಿನ ಜನರಲ್ ಕೆ.ಎಸ್ ತಿಮ್ಮಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕುಂಡ್ಯೋಳಂಡ ಕಪ್ ಹಾಕಿ ನಮ್ಮೆಯ ಗುರುವಾರದ ಪಂದ್ಯಗಳಲ್ಲಿ ನೆಲ್ಲಮಕ್ಕಡ, ಕುಪ್ಪಂಡ, ಅರೆಯಡ, ಕುಲ್ಲೇಟಿರ, ಅಂಜಪರವಂಡ, ಕೊಕ್ಕಂಡ ತಂಡಗಳು ಜಯಭೇರಿ ಬಾರಿಸಿದವು.
ನೆಲ್ಲಮಕ್ಕಡ ಮತ್ತು ಕರ್ತಮಾಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ನೆಲ್ಲಮಕ್ಕಡ 3- 0 ಅಂತರದಿಂದ ಕರ್ತಮಾಡ ವಿರುದ್ಧ ಭರ್ಜರಿ ಜಯ ಗಳಿಸಿತು. ಕುಪ್ಪಮಡ (ಕೈಕೇರಿ) ಬೊಪ್ಪಂಡ ವಿರುದ್ಧ 4- 0 ಅಂತರದಲ್ಲಿ ಗೆಲುವು ಸಾಧಿಸಿತು.
ಅರೆಯಡ ಕರೋಟಿರ ವಿರುದ್ಧ 5-4 ಅಂತರದಲ್ಲಿ ಟೈ ಬ್ರೇಕರ್ ನಲ್ಲಿ ಗೆಲವು ಸಾಧಿಸಿತು. ಕುಲ್ಲೇಟಿರ ಕಲಿಯಾಟಂಡ ವಿರುದ್ಧ 4-0 ಅಂತರದಲ್ಲಿ ಗೆಲವು ದಾಖಲಿಸಿತು. ಅಂಜಪರವಂಡ ಮತ್ತು ಅಪ್ಪಚೆಟ್ಟೋಳಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಅಂಜಪರವಂಡ 3-1 ಅಂತರದ ಗೆಲವು ದಾಖಲಿಸಿತು.ಕೊಕ್ಕಂಡ ಮುಕ್ಕಾಟಿರ ವಿರುದ್ಧ 2-0 ಅಂತರದಲ್ಲಿ ಜಯ ಸಾಧಿಸಿತು.
ಚೆರುಮಮದಂಡ ಬಲ್ಲಚಂಡ ವಿರುದ್ಧ ಟೈ ಬ್ರೇಕರ್ ನಲ್ಲಿ 5-4 ಅಂತರದಿಂದ ಜಯ ದಾಖಲಿಸಿದರೆ ಮಂಡೇಪಂಡ ನಾಗಂಡ ವಿರುದ್ಧ 5-0 ಅಂತರದ ಗೆಲವು ದಾಖಲಿಸಿತು. ಪೆಮ್ಮಂಡ ತಂಡಕ್ಕೆ ಪಾಂಡಂಡ ವಿರುದ್ಧ 2-0 ಅಂತರದ ಜಯ ಲಭಿಸಿತು. ಐನಂಡ ಮುರುವಂಡ ವಿರುದ್ಧ 3-1 ಅಂತರದಿಂದ ಗೆದ್ದರೆ ಕೂತಂಡ ಚಿಂದಮಾಡ ತಂಡದ ವಿರುದ್ಧ 2-0 ಅಂತರದಿಂದ ಗೆಲವು ಸಾಧಿಸಿತು.ಬಾಳೆಯಡ ಚೌರೀರ ವಿರುದ್ಧ 3-1 ರಲ್ಲಿ, ಬೊಳ್ಳಂಡ ಮೂಕಂಡ ವಿರುದ್ಧ 1-0 ರಲ್ಲಿ, ಚೀಯಕಪೂವಂಡ ಕಳ್ಳಿಚಂಡ ವಿರುದ್ಧ 3-2 ರಲ್ಲಿ ಜಯ ಸಾಧಿಸಿತು.