ಚೊಚ್ಚಲ ಆವೃತ್ತಿಯ ಎಲೆಕ್ಟ್ರಿಕ್‌ ಬೋಟ್‌ ರೇಸ್‌ನಲ್ಲಿ ಕ್ರಿಕೆಟಿಗ ಕಿಂಗ್‌ ಕೊಹ್ಲಿ ತಂಡ ಕಣಕ್ಕೆ!

| N/A | Published : Feb 20 2025, 12:45 AM IST / Updated: Feb 20 2025, 04:16 AM IST

ಚೊಚ್ಚಲ ಆವೃತ್ತಿಯ ಎಲೆಕ್ಟ್ರಿಕ್‌ ಬೋಟ್‌ ರೇಸ್‌ನಲ್ಲಿ ಕ್ರಿಕೆಟಿಗ ಕಿಂಗ್‌ ಕೊಹ್ಲಿ ತಂಡ ಕಣಕ್ಕೆ!
Share this Article
  • FB
  • TW
  • Linkdin
  • Email

ಸಾರಾಂಶ

ಟೀಂ ಬ್ಲೂ ರೈಸಿಂಗ್‌ಗೆ ಕ್ರಿಕೆಟಿಗ ವಿರಾಟ್‌ ಮಾಲಿಕತ್ವ. ಚೊಚ್ಚಲ ಆವೃತ್ತಿಯ ವಿಶ್ವ ಎಲೆಕ್ಟ್ರಿಕ್‌ ಪವರ್‌ಬೋಟಿಂಗ್‌ ಚಾಂಪಿಯನ್‌ಶಿಪ್‌

ಮುಂಬೈ: ಭಾರತದ ತಾರಾ ಕ್ರಿಕೆಟಿಗ ವಿರಾಟ್‌ ಕೊಹ್ಲಿ ಚೊಚ್ಚಲ ಆವೃತ್ತಿಯ ವಿಶ್ವ ಎಲೆಕ್ಟ್ರಿಕ್‌ ಪವರ್‌ಬೋಟಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ತಂಡವನ್ನು ಖರೀದಿಸಿದ್ದಾರೆ. ಕೊಹ್ಲಿ ಮಾಲಿಕತ್ವದ ಟೀಂ ಬ್ಲೂ ರೈಸಿಂಗ್‌ ತಂಡ ಯುಐಎಂ ಇ1 ಪವರ್‌ಬೋಟಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಕಣಕ್ಕಿಳಿಯಲಿದೆ. 

ಈಗಾಗಲೇ 2025ರ ಋತುವಿನ ಸ್ಪರ್ಧೆಗಳು ಆರಂಭಗೊಂಡಿದ್ದು, ಜೆದ್ದಾ, ಮಯಾಮಿ, ಮಾಂಟೆ ಕಾರ್ಲೋ, ದೋಹಾದಲ್ಲಿ ರೇಸ್‌ಗಳು ನಡೆಯಲಿವೆ. ಜೆದ್ದಾ ಚರಣ ಮುಕ್ತಾಯಗೊಂಡಿದ್ದು, ನವೆಂಬರ್‌ನಲ್ಲಿ ಮಯಾಮಿ ಚರಣದ ಮೂಲಕ ರೇಸ್‌ ಕೊನೆಗೊಳ್ಳಲಿವೆ.ಕೊಹ್ಲಿ ಹೊರತುಪಡಿಸಿ ಬಾಸ್ಕೆಟ್‌ಬಾಲ್‌ ದಿಗ್ಗಜ ಲೆಬ್ರಾನ್‌ ಜೇಮ್ಸ್‌, ಟೆನಿಸ್‌ ದಂತಕತೆ ರಾಫೆಲ್‌ ನಡಾಲ್‌ರ ತಂಡಗಳು ಕೂಡಾ ಸ್ಪರ್ಧಿಸಲಿವೆ. 

ಹಾಲಿವುಡ್‌ ನಟ ವಿಲ್‌ ಸ್ಮಿತ್‌ ಕೂಡಾ ತಂಡ ಖರೀದಿ ಮಾಡಿದ್ದಾರೆ. ಸೌದಿ ಪಬ್ಲಿಕ್‌ ಇನ್ವೆಸ್ಟ್‌ಮೆಂಟ್‌ ಫಂಡ್‌ ಈ ರೇಸ್‌ ಆಯೋಜಿಸುತ್ತಿದ್ದು, ಪ್ರತಿ ತಂಡದ ಬೋಟ್‌ನಲ್ಲಿ ಇಬ್ಬರು ಪೈಲಟ್‌ಗಳು ಇರಲಿದ್ದಾರೆ. 

ಏ.27ಕ್ಕೆ 17ನೇ ಆವೃತ್ತಿಯ ಬೆಂಗಳೂರು ಮ್ಯಾರಥಾನ್

ಬೆಂಗಳೂರು: 17ನೇ ಆವೃತ್ತಿಯ ಟಿಸಿಎಸ್ ವರ್ಲ್ಡ್ 10ಕೆ ಬೆಂಗಳೂರು ಮ್ಯಾರಥಾನ್‌ ಏ.27ರಂದು ನಡೆಯಲಿದೆ. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮ್ಯಾರಥಾನ್‌ ದಿನಾಂಕವನ್ನು ಆಯೋಜಕರು ಘೋಷಿಸಿದರು. ಕಬ್ಬನ್ ರಸ್ತೆಯಿಂದ(ಆರ್‌ಎಸ್ಎಒಐ ಗೇಟ್ ನಂ.5ರ ಎದುರು) ರೇಸ್‌ಗೆ ಚಾಲನೆ ಲಭಿಸಲಿದ್ದು, ಕಬ್ಬನ್ ರಸ್ತೆಯ ಫೀಲ್ಡ್ ಮಾರ್ಷಲ್ ಮಾಣೆಕ್ ಷಾ ಪರೇಡ್ ಮೈದಾನದ ಹೊರಭಾಗದಲ್ಲಿ ರೇಸ್‌ ಕೊನೆಗೊಳ್ಳಲಿವೆ. ಓಪನ್ 10ಕೆ, ಮಜಾ ರನ್(5.1 ಕಿ.ಮೀ), ಸೀನಿಯರ್ ಸಿಟಿಜನ್ಸ್ ರನ್ ಮತ್ತು ಚಾಂಪಿಯನ್ಸ್ ವಿತ್ ಡಿಸೆಬಿಲಿಟಿ(4.2 ಕಿ.ಮೀ) ರೇಸ್‌ಗಳು ನಡೆಯಲಿವೆ. ಎಲ್ಲಾ ವಿಭಾಗಗಳಿಗೆಫೆ.20ರಂದು ನೋಂದಣಿ ಆರಂಭಗೊಳ್ಳಲಿದ್ದು, ಮಾ.28ಕ್ಕೆ ಕೊನೆಗೊಳ್ಳಲಿದೆ.