ಸಾರಾಂಶ
ಮುಂಬರುವ ರಣಜಿ ಟ್ರೋಫಿ ದೇಸಿ ಕ್ರಿಕೆಟ್ ಟೂರ್ನಿಗೆ ಡೆಲ್ಲಿ ತಂಡ 84 ಸಂಭಾವ್ಯ ಆಟಗಾರರ ಪಟ್ಟಿಯನ್ನು ಪ್ರಕಟಿಸಿದೆ. ಅಚ್ಚರಿ ಎಂಬಂತೆ ವಿರಾಟ್ ಕೊಹ್ಲಿ, ರಿಷಭ್ ಪಂತ್ ಹೆಸರೂ ಪಟ್ಟಿಯಲ್ಲಿದೆ. ಆದರೆ ಇವರಿಬ್ಬರೂ ಸಂಪೂರ್ಣ ಋತುವಿಗೆ ಅಲಭ್ಯರಾಗುವ ಸಾಧ್ಯತೆ ಹೆಚ್ಚು.
ನವದೆಹಲಿ: ಮುಂಬರುವ ರಣಜಿ ಟ್ರೋಫಿ ದೇಸಿ ಕ್ರಿಕೆಟ್ ಟೂರ್ನಿಗೆ ಡೆಲ್ಲಿ ತಂಡ 84 ಸಂಭಾವ್ಯ ಆಟಗಾರರ ಪಟ್ಟಿಯನ್ನು ಪ್ರಕಟಿಸಿದೆ. ಅಚ್ಚರಿ ಎಂಬಂತೆ ವಿರಾಟ್ ಕೊಹ್ಲಿ, ರಿಷಭ್ ಪಂತ್ ಹೆಸರೂ ಪಟ್ಟಿಯಲ್ಲಿದೆ. ಆದರೆ ಇವರಿಬ್ಬರೂ ಸಂಪೂರ್ಣ ಋತುವಿಗೆ ಅಲಭ್ಯರಾಗುವ ಸಾಧ್ಯತೆ ಹೆಚ್ಚು.
ಕೊಹ್ಲಿ 2012ರಲ್ಲಿ ಕೊನೆ ಬಾರಿ ರಣಜಿ ಕ್ರಿಕೆಟ್ ಆಡಿದ್ದರು. ಆ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಿರತರಾಗಿರುವ ಅವರು, ಈಗ ಮತ್ತೆ ದೇಸಿ ಕ್ರಿಕೆಟ್‌ಗೆ ಮರಳುವ ಸಾಧ್ಯತೆಯಿಲ್ಲ. ಇದೇ ವೇಳೆ ಸಂಭಾವ್ಯರ ಪಟ್ಟಿಯಲ್ಲಿ ನವ್‌ದೀಪ್ ಸೈನಿ, ಆಯುಶ್ ಬದೋನಿ, ಅನುಜ್ ರಾವತ್, ಯಶ್ ದಯಾಳ್, ಮಯಾಂಕ್ ಯಾದವ್ ಕೂಡಾ ಇದ್ದಾರೆ. ಆದರೆ ಹಿರಿಯ ವೇಗಿ ಇಶಾಂತ್ ಶರ್ಮಾಗೆ ಸ್ಥಾನ ಸಿಕ್ಕಿಲ್ಲ. ಈ ಬಾರಿ ರಣಜಿ ಟ್ರೋಫಿ ಅ.11ರಿಂದ ಆರಂಭಗೊಳ್ಳಲಿದೆ.
ಆಸೀಸ್‌ನ 14 ಪಂದ್ಯಗಳ ಗೆಲುವಿನ ಓಟಕ್ಕೆ ಬ್ರೇಕ್
ಚೆಸ್ಟರ್ ಲೆ ಸ್ಟ್ರೀಟ್(ಇಂಗ್ಲೆಂಡ್): ಏಕದಿನ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾದ ಸತತ 14 ಪಂದ್ಯಗಳ ಗೆಲುವಿನ ಓಟಕ್ಕೆ ಇಂಗ್ಲೆಂಡ್ ಬ್ರೇಕ್ ಹಾಕಿದೆ. ಮಂಗಳವಾರ ರಾತ್ರಿ ನಡೆದ 3ನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ಡಕ್ವರ್ತ್ ಲೂಯಿಸ್ ನಿಯಮದನ್ವಯ 46 ರನ್ ಜಯಗಳಿಸಿತು. ಇದರ ಹೊರತಾಗಿಯೂ 5 ಪಂದ್ಯಗಳ ಸರಣಿಯಲ್ಲಿ ಆಸೀಸ್ 2-1 ಮುನ್ನಡೆಯಲ್ಲಿದೆ.
ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 7 ವಿಕೆಟ್‌ಗೆ 304 ರನ್ ಗಳಿಸಿತು. ಗುರಿ ಬೆನ್ನತ್ತಿ ಇಂಗ್ಲೆಂಡ್ 37.4 ಓವರ್‌ಗಳಲ್ಲಿ 4 ವಿಕೆಟ್‌ಗೆ 254 ರನ್ ಗಳಿಸಿದ್ದಾಗ ಮಳೆ ಅಡ್ಡಿಪಡಿಸಿತು. ಈ ವೇಳೆ ಇಂಗ್ಲೆಂಡ್ 46 ರನ್‌ಗಳಿಂದ ಮುಂದಿದ್ದ ಕಾರಣ, ತಂಡವನ್ನು ವಿಜಯಿಯೆಂದು ಘೋಷಿಸಲಾಯಿತು.