ಕೆಕೆಆರ್‌ಗೆ ಮತ್ತೆ ಐಪಿಎಲ್‌ ಕಿರೀಟ: 2012-2024ರ ಗೆಲುವಿನ ನಡುವೆ ಇದೆ ಸಾಮ್ಯತೆ

| Published : May 27 2024, 01:01 AM IST / Updated: May 27 2024, 04:28 AM IST

ಸಾರಾಂಶ

ಕೋಲ್ಕತಾ ಐಪಿಎಲ್‌ನಲ್ಲಿ ದಶಕಗಳ ಬಳಿಕ ಪ್ರಶಸ್ತಿ ಬರ ನೀಗಿಸಿತು. ತಂಡ ಕೊನೆ ಬಾರಿ 2014ರಲ್ಲಿ ಚಾಂಪಿಯನ್‌ ಆಗಿತ್ತು. 10 ವರ್ಷ ನಂತರ ಮತ್ತೆ ಟ್ರೋಫಿ ಎತ್ತಿ ಹಿಡಿದಿದೆ.

ಚೆನ್ನೈ: ಕೆಕೆಆರ್‌ನ 2012ರ ಹಾಗೂ 2024ರ ಟ್ರೋಫಿ ಗೆಲುವಿನ ನಡುವೆ ಹಲವು ಸಾಮ್ಯತೆಗಳಿವೆ. 2012ರಲ್ಲಿ ಕೆಕೆಆರ್‌ ಮುಂಬೈ ವಿರುದ್ಧ ಮುಂಬೈನಲ್ಲಿ ಕೊನೆ ಬಾರಿಗೆ ಗೆದ್ದಿತ್ತು. ಫೈನಲ್‌ ಚೆನ್ನೈನಲ್ಲಿ ನಡೆದಿತ್ತು. ಅದು ಕೆಕೆಆರ್‌ನ ನಾಯಕನಾಗಿ ಗಂಭೀರ್‌ಗೆ 2ನೇ ವರ್ಷ. 2024ರಲ್ಲಿ ಕೆಕೆಆರ್‌ ಮುಂಬೈನಲ್ಲಿ ಮುಂಬೈ ತಂಡವನ್ನು ಸೋಲಿಸಿತು. ಫೈನಲ್‌ ಚೆನ್ನೈನಲ್ಲೇ ನಡೆಯಿತು. ಕೆಕೆಆರ್‌ ನಾಯಕನಾಗಿ ಶ್ರೇಯಸ್‌ ಅಯ್ಯರ್‌ಗಿದು 2ನೇ ವರ್ಷ.

ಐಪಿಎಲ್‌ ಫೈನಲ್‌ನಲ್ಲಿ ಅತಿ ಕನಿಷ್ಠ ಸ್ಕೋರ್‌

ಕೋಲ್ಕತಾ ವಿರುದ್ಧ ಸನ್‌ರೈಸರ್ಸ್‌ ಗಳಿಸಿದ 113 ಐಪಿಎಲ್‌ ಫೈನಲ್‌ನಲ್ಲೇ ಅತಿ ಕನಿಷ್ಠ ಸ್ಕೋರ್‌. 2013ರಲ್ಲಿ ಮುಂಬೈ ವಿರುದ್ಧ ಚೆನ್ನೈ 2ನೇ ಇನ್ನಿಂಗ್ಸ್‌ನಲ್ಲಿ 125 ರನ್‌ ಕಲೆಹಾಕಿದ್ದು ಈ ವರೆಗಿನ ಕಡಿಮೆ ಮೊತ್ತವಾಗಿತ್ತು. 

ನಂ.1 ಸ್ಥಾನಿಯಾಗಿ ಕಪ್‌ ಗೆದ್ದ 4ನೇ ತಂಡ ಕೆಕೆಆರ್‌

ಲೀಗ್‌ ಹಂತದ ಮುಕ್ತಾಯಕ್ಕೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿ, ಬಳಿಕ ಚಾಂಪಿಯನ್‌ ಎನಿಸಿಕೊಂಡ 4ನೇ ತಂಡ ಕೆಕೆಆರ್‌. 2008ರಲ್ಲಿ ರಾಜಸ್ಥಾನ, 2017, 2019, 2022ರಲ್ಲಿ ಮುಂಬೈ, 2022ರಲ್ಲಿ ಗುಜರಾತ್‌ ಕೂಡಾ ಈ ಸಾಧನೆ ಮಾಡಿತ್ತು.

ದಶಕದ ಕಪ್‌ ಬರ ನೀಗಿಸಿದ ಕೋಲ್ಕತಾ

ಕೋಲ್ಕತಾ ಐಪಿಎಲ್‌ನಲ್ಲಿ ದಶಕಗಳ ಬಳಿಕ ಪ್ರಶಸ್ತಿ ಬರ ನೀಗಿಸಿತು. ತಂಡ ಕೊನೆ ಬಾರಿ 2014ರಲ್ಲಿ ಚಾಂಪಿಯನ್‌ ಆಗಿತ್ತು. 10 ವರ್ಷ ನಂತರ ಮತ್ತೆ ಟ್ರೋಫಿ ಎತ್ತಿ ಹಿಡಿದಿದೆ.

ಸನ್‌ರೈಸರ್ಸ್‌ಗೆ 2ನೇ ಬಾರಿ ಟ್ರೋಫಿ ಮಿಸ್‌

ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ಐಪಿಎಲ್‌ನಲ್ಲಿ 2ನೇ ಬಾರಿ ಫೈನಲ್‌ನಲ್ಲಿ ಸೋತು ಪ್ರಶಸ್ತಿ ತಪ್ಪಿಸಿಕೊಂಡಿತು. 2016ರಲ್ಲಿ ಆರ್‌ಸಿಬಿಯನ್ನು ಮಣಿಸಿ ಚಾಂಪಿಯನ್‌ ಆಗಿದ್ದ ಸನ್‌ರೈಸರ್ಸ್‌, ಬಳಿಕ 2018ರಲ್ಲಿ ಚೆನ್ನೈ ವಿರುದ್ಧ ಫೈನಲ್‌ನಲ್ಲಿ ಸೋಲನುಭವಿಸಿತ್ತು.

ಚೆನ್ನೈನಲ್ಲಿ 2ನೇ ಟ್ರೋಫಿ ಗೆದ್ದ ಕೋಲ್ಕತಾ ತಂಡ

ಕೆಕೆಆರ್‌ ತಂಡ ಚೆನ್ನೈ ಕ್ರೀಡಾಂಗಣದಲ್ಲೇ ತನ್ನ 2ನೇ ಟ್ರೋಫಿ ಎತ್ತಿ ಹಿಡಿಯಿತು. 2012ರಲ್ಲಿ ಚೆನ್ನೈನಲ್ಲಿ ನಡೆದ ಫೈನಲ್‌ನಲ್ಲಿ ಸಿಎಸ್‌ಕೆ ತಂಡವನ್ನು ಮಣಿಸಿ ಕೆಕೆಆರ್‌ ಪ್ರಶಸ್ತಿ ತನ್ನದಾಗಿಸಿಕೊಂಡಿತ್ತು.

ಚೇಸಿಂಗ್‌ನಲ್ಲಿ ಎಲ್ಲಾ ಪಂದ್ಯ ಗೆದ್ದ ಕೆಕೆಆರ್‌

ಕೋಲ್ಕತಾ ಈ ಬಾರಿ ಐಪಿಎಲ್‌ನಲ್ಲಿ ಚೇಸಿಂಗ್‌ ಸಿಕ್ಕ ಎಲ್ಲಾ ಪಂದ್ಯಗಳಲ್ಲೂ ಗೆದ್ದಿರುವುದು ವಿಶೇಷ. ಫೈನಲ್‌ ಸೇರಿ ಒಟ್ಟು 7 ಪಂದ್ಯಗಳಲ್ಲಿ ಕೆಕೆಆರ್‌ಗೆ ಚೇಸಿಂಗ್‌ ಸಿಕ್ಕಿತ್ತು. 7 ಪಂದ್ಯದಲ್ಲೂ ಜಯಗಳಿಸಿದೆ. ಈ ಮೊದಲು ಆವೃತ್ತಿಯೊಂದರಲ್ಲಿ ಚೇಸಿಂಗ್‌ ಸಿಕ್ಕ ಎಲ್ಲಾ ಪಂದ್ಯಗಳಲ್ಲೂ ಗೆದ್ದಿದ್ದು ಚೆನ್ನೈ(2021) ಮಾತ್ರ. ಧೋನಿ ಪಡೆ ಚೇಸಿಂಗ್‌ ವೇಳೆ ಎಲ್ಲಾ 6 ಪಂದ್ಯ ಗೆದ್ದಿತ್ತು.

ಚೆನ್ನೈ, ಮುಂಬೈ ಸಾಲಿಗೆ ಸೇರ್ಪಡೆಯಾದ ಕೆಕೆಆರ್‌

ಐಪಿಎಲ್‌ನಲ್ಲಿ 3 ಅಥವಾ ಅದಕ್ಕಿಂತ ಹೆಚ್ಚು ಬಾರಿ ಟ್ರೋಫಿ ಗೆದ್ದ 3ನೇ ತಂಡ ಎಂಬ ಖ್ಯಾತಿಗೆ ಕೆಕೆಆರ್ ಪಾತ್ರವಾಯಿತು. ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ಮುಂಬೈ ಇಂಡಿಯನ್ಸ್‌ ತಲಾ 5 ಬಾರಿ ಪ್ರಶಸ್ತಿ ಗೆದ್ದಿವೆ. ಬೇರೆ ಯಾವ ತಂಡಗಳು ಕೂಡಾ 1ಕ್ಕಿಂತ ಹೆಚ್ಚು ಬಾರಿ ಚಾಂಪಿಯನ್‌ ಆಗಿಲ್ಲ

₹20 ಕೋಟಿ: ಚಾಂಪಿಯನ್‌ ಕೆಕೆಆರ್‌ 20 ಕೋಟಿ ರು. ನಗದು ಬಹುಮಾನ ಪಡೆಯಿತು.

₹13 ಕೋಟಿ: ರನ್ನರ್‌-ಅಪ್‌ ಸನ್‌ರೈಸರ್ಸ್‌ 13 ಕೋಟಿ ರು. ನಗದು ಬಹುಮಾನ ಪಡೆಯಿತು.

08ನೇ ಬಾರಿ: ಐಪಿಎಲ್‌ ಫೈನಲ್‌ನಲ್ಲಿ ಚೇಸ್‌ ಮಾಡಿದ ತಂಡ ಗೆದ್ದಿರುವುದು ಇದು 8ನೇ ಬಾರಿ. ಮೊದಲು ಬ್ಯಾಟ್‌ ಮಾಡಿದ ತಂಡ 9 ಬಾರಿ ಕಪ್‌ ಗೆದ್ದಿದೆ.