ರಣಜಿ ಟ್ರೋಫಿಗೆ ರೆಡಿಯಾಗ್ತಿದೆ ಕರ್ನಾಟಕ ಟೀಂ: ಈ ಸಲ ಮೈಸೂರು, ಹುಬ್ಬಳ್ಳಿಯಲ್ಲೂ ಪಂದ್ಯ

| Published : Dec 18 2023, 02:00 AM IST

ಸಾರಾಂಶ

2023-24ರ ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಗೆ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ)ಯಿಂದ 32 ಆಟಗಾರರ ಸಂಭವನೀಯ ಆಟಗಾರರ ಪಟ್ಟಿ ಪ್ರಕಟ. ಕೆಲ ಹೊಸ ಮುಖಗಳಿಗೆ ಮಣೆ. ಮುಂದಿನ ವಾರ 15 ಸದಸ್ಯರ ಅಂತಿಮ ತಂಡ ಪ್ರಕಟಗೊಳ್ಳುವ ನಿರೀಕ್ಷೆ.

ಕನ್ನಡಪ್ರಭ ವಾರ್ತೆ ಬೆಂಗಳೂರು2023-24ರ ರಣಜಿ ಟ್ರೋಫಿಗೆ ಕರ್ನಾಟಕ ಸಂಭವನೀಯ ಆಟಗಾರರ ಪಟ್ಟಿ ಪ್ರಕಟಗೊಂಡಿದೆ. ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಪ್ರಕಟಿಸಿರುವ 32 ಆಟಗಾರರ ಪಟ್ಟಿಯಲ್ಲಿ ಕೆಲ ಹೊಸ ಮುಖಗಳಿಗೆ ಸ್ಥಾನ ಸಿಕ್ಕಿದೆ. ಜ.5ರಿಂದ ರಣಜಿ ಪಂದ್ಯಾವಳಿ ಆರಂಭಗೊಳ್ಳಲಿದ್ದು, ಎಲೈಟ್‌ ‘ಸಿ’ ಗುಂಪಿನಲ್ಲಿರುವ ಕರ್ನಾಟಕ ತಂಡ ತನ್ನ ಮೊದಲ ಪಂದ್ಯದಲ್ಲಿ ಪಂಜಾಬ್‌ ತಂಡವನ್ನು ಎದುರಿಸಲಿದೆ. ಆ ಪಂದ್ಯ ಬೆಂಗಳೂರಲ್ಲಿ ನಡೆಯಲಿದೆ.ಜ.12ರಿಂದ 2ನೇ ಪಂದ್ಯವನ್ನು ಗುಜರಾತ್‌ ವಿರುದ್ಧ ಅಹಮದಾಬಾದ್‌ನಲ್ಲಿ ಆಡಲಿರುವ ಕರ್ನಾಟಕ, ಜ.19ರಿಂದ ಗೋವಾ ವಿರುದ್ಧ ಮೈಸೂರಲ್ಲಿ ಸೆಣಸಲಿದೆ. ಜ.26ರಿಂದ ತ್ರಿಪುರಾ ವಿರುದ್ಧ ಅಗರ್ತಾಲಾದಲ್ಲಿ ಆಡಲಿರುವ ರಾಜ್ಯ ತಂಡ, ಫೆ.2ರಿಂದ ಸೂರತ್‌ನಲ್ಲಿ ರೈಲ್ವೇಸ್‌ ಸವಾಲು ಎದುರಿಸಲಿದೆ. ಫೆ.9ರಿಂದ ತಮಿಳುನಾಡು ವಿರುದ್ಧ ಚೆನ್ನೈನಲ್ಲಿ ಸೆಣಸಲಿರುವ ಕರ್ನಾಟಕ, ಗುಂಪು ಹಂತದ ಕೊನೆಯ ಪಂದ್ಯವನ್ನು ಫೆ.16ರಿಂದ ಚಂಡೀಗಢ ವಿರುದ್ಧ ಹುಬ್ಬಳ್ಳಿಯಲ್ಲಿ ಆಡಲಿದೆ. ಸಂಭವನೀಯ ಆಟಗಾರರ ಪಟ್ಟಿ: ಕೆ.ಎಲ್‌. ರಾಹುಲ್‌, ಮಯಾಂಕ್‌ ಅಗರ್‌ವಾಲ್‌, ಪ್ರಸಿದ್ಧ್‌ ಕೃಷ್ಣ, ದೇವದತ್‌ ಪಡಿಕ್ಕಲ್‌, ಮನೀಶ್‌ ಪಾಂಡೆ, ಕೆ.ಗೌತಮ್‌, ರವಿಕುಮಾರ್‌ ಸಮರ್ಥ್‌, ವಿದ್ವತ್‌ ಕಾವೇರಪ್ಪ, ನಿಕಿನ್‌ ಜೋಸ್‌, ವಾಸುಕಿ ಕೌಶಿಕ್‌, ವೈಶಾಖ್‌ ವಿಜಯ್‌ಕುಮಾರ್‌, ಶರತ್‌ ಶ್ರೀನಿವಾಸ್‌ (ವಿಕೆಟ್‌ ಕೀಪರ್‌), ಜಗದೀಶ ಸುಚಿತ್‌, ಶುಭಾಂಗ್‌ ಹೆಗ್ಡೆ, ಎಂ. ವೆಂಕಟೇಶ್‌, ಮನೋಜ್‌ ಭಾಂಡ್ಗೆ, ಶರತ್‌ ಬಿ.ಆರ್‌.(ವಿಕೆಟ್‌ ಕೀಪರ್‌), ಹಾರ್ದಿಕ್‌ ರಾಜ್‌, ಡಿ. ನಿಶ್ಚಲ್‌, ಕಿಶನ್‌ ಬೆಡಾರೆ, ವಿಶಾಲ್‌ ಓನಟ್‌, ರೋಹಿತ್‌ ಕುಮಾರ್‌, ಯಶೋವರ್ಧನ್‌ ಪರನ್‌ತಪ್‌, ಕೃತಿಕ್‌ ಕೃಷ್ಣ(ವಿಕೆಟ್‌ ಕೀಪರ್‌), ಆರ್‌. ಸ್ಮರಣ್‌, ಅಭಿಲಾಷ್‌ ಶೆಟ್ಟಿ, ಶಶಿಕುಮಾರ್‌ ಕೆ. ಮೊಹ್ಸಿನ್‌ ಖಾನ್‌, ಅನೀಶ್‌ ಕೆ.ವಿ., ಅನೀಶ್ವರ್‌ ಗೌತಮ್‌ , ಅಭಿನವ್‌ ಮನೋಹರ್‌, ಸುಜಯ್‌ ಎಸ್‌(ವಿಕೆಟ್‌ ಕೀಪರ್‌).