ಲಕ್ಷ್ಯಗೆ ಆಸ್ಟ್ರೇಲಿಯನ್‌ ಓಪನ್‌ ಪ್ರಶಸ್ತಿ

| Published : Nov 24 2025, 02:30 AM IST

ಸಾರಾಂಶ

ಭಾರತದ ತಾರಾ ಶಟ್ಲರ್‌ ಲಕ್ಷ್ಯಸೇನ್‌ ಕಡೆಗೂ ತಮ್ಮ ಪ್ರಶಸ್ತಿ ಬರ ನೀಗಿಸಿಕೊಂಡಿದ್ದು, ಭಾನುವಾರ ನಡೆದ ಆಸ್ಟ್ರೇಲಿಯನ್‌ ಓಪನ್‌ ಫೈನಲ್‌ನಲ್ಲಿ ಜಪಾನ್‌ನ ಯುಷಿ ತನಾಕ ಅವರನ್ನು ಮಣಿಸಿ ಪ್ರಶಸ್ತಿಗೆ ಮುತ್ತಿಟ್ಟಿದ್ದಾರೆ. ಈ ಮೂಲಕ ಈ ವರ್ಷದ ಚೊಚ್ಚಲ ಬಿಡಬ್ಲ್ಯುಎಫ್‌ ಪ್ರಶಸ್ತಿ ಜಯಿಸಿದ್ದಾರೆ.

- 2025ರಲ್ಲಿ ಮೊದಲ ಟ್ರೋಫಿ ಗೆದ್ದ ಭಾರತೀಯ ಶಟ್ಲರ್‌

ಸಿಡ್ನಿ: ಭಾರತದ ತಾರಾ ಶಟ್ಲರ್‌ ಲಕ್ಷ್ಯಸೇನ್‌ ಕಡೆಗೂ ತಮ್ಮ ಪ್ರಶಸ್ತಿ ಬರ ನೀಗಿಸಿಕೊಂಡಿದ್ದು, ಭಾನುವಾರ ನಡೆದ ಆಸ್ಟ್ರೇಲಿಯನ್‌ ಓಪನ್‌ ಫೈನಲ್‌ನಲ್ಲಿ ಜಪಾನ್‌ನ ಯುಷಿ ತನಾಕ ಅವರನ್ನು ಮಣಿಸಿ ಪ್ರಶಸ್ತಿಗೆ ಮುತ್ತಿಟ್ಟಿದ್ದಾರೆ. ಈ ಮೂಲಕ ಈ ವರ್ಷದ ಚೊಚ್ಚಲ ಬಿಡಬ್ಲ್ಯುಎಫ್‌ ಪ್ರಶಸ್ತಿ ಜಯಿಸಿದ್ದಾರೆ.

ವಿಶ್ವ ರ್‍ಯಾಂಕಿಂಗ್‌ನಲ್ಲಿ 11ನೇ ಸ್ಥಾನದಲ್ಲಿರುವ ಲಕ್ಷ್ಯ ಸೇನ್‌, ವಿಶ್ವ ನಂ.26 ತನಾಕ ವಿರುದ್ಧ 21-15, 21-11 ನೇರ ಗೇಮ್‌ಗಳಲ್ಲಿ, ಕೇವಲ 38 ನಿಮಿಷಗಳಲ್ಲಿ ಜಯಗಳಿಸಿದರು.

2021ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಗೆದ್ದಿದ್ದ ಲಕ್ಷ್ಯ ಆ ಬಳಿಕ ಕಳೆದ ವರ್ಷದ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. ಈ ವರ್ಷ ಹಾಂಕಾಂಗ್‌ ಸೂಪರ್‌ 500 ಟೂರ್ನಿಯ ಫೈನಲ್‌ನಲ್ಲಿ ಸೋತಿದ್ದ ಲಕ್ಷ್ಯ, ಈ ವರ್ಷ ಮೊದಲ ಪ್ರಶಸ್ತಿಗಾಗಿ ಹಪಹಪಿಸುತ್ತಿದ್ದರು. ಲಕ್ಷ್ಯ ಸೇನ್‌ ಇದಕ್ಕೂ ಮುನ್ನ ಕಳೆದ ವರ್ಷ ಕೆನಡಾ ಓಪನ್‌ ಗೆದ್ದಿದ್ದರು.