ಇಂಗ್ಲೆಂಡ್‌ನ ಲಂಕಶೈರ್‌, ಸಸೆಕ್ಸ್‌ ವಿರುದ್ಧ ಆಡಲಿರುವ ಕರ್ನಾಟಕ

| Published : Mar 13 2024, 02:03 AM IST

ಸಾರಾಂಶ

ಕರ್ನಾಟಕ ಹಿರಿಯರ ತಂಡದ ವಿರುದ್ಧ ಲಂಕಶೈರ್‌ 3 ದಿನಗಳ ಪಂದ್ಯದಲ್ಲಿ ಮುಖಾಮುಖಿಯಾಗಲಿದ್ದು, ಸಸೆಕ್ಸ್‌ ತಂಡ 2 ದಿನಗಳ ಪಂದ್ಯವನ್ನಾಡಲಿದೆ. ಈಗಾಗಲೇ ಇಂಗ್ಲೆಂಡ್‌ನಿಂದ ಎರಡೂ ತಂಡಗಳು ಬೆಂಗಳೂರಿಗೆ ಆಗಮಿಸಿವೆ.

ಬೆಂಗಳೂರು: ಇಂಗ್ಲೆಂಡ್‌ನ 2 ಕೌಂಟಿ ತಂಡಗಳಾದ ಲಂಕಶೈರ್‌ ಹಾಗೂ ಸಸೆಕ್ಸ್‌ ವಿರುದ್ಧ ಕರ್ನಾಟಕ ತಂಡ ಅಭ್ಯಾಸ ಪಂದ್ಯಗಳನ್ನಾಡಲಿದೆ.ಅಂಡರ್‌-19, ಅಂಡರ್‌-23 ಹಾಗೂ ಹಿರಿಯರ ತಂಡದ ಆಟಗಾರರನ್ನೊಳಗೊಂಡ ರಾಜ್ಯ ತಂಡದ ವಿರುದ್ಧ ಸಸೆಕ್ಸ್‌ ಮಾ.14, 15ಕ್ಕೆ ಆಲೂರು ಕ್ರೀಡಾಂಗಣದಲ್ಲಿ 2 ದಿನಗಳ ಪಂದ್ಯದಲ್ಲಿ ಪಾಲ್ಗೊಳ್ಳಲಿವೆ. ಇನ್ನು ಕರ್ನಾಟಕ ಹಿರಿಯರ ತಂಡದ ವಿರುದ್ಧ ಲಂಕಶೈರ್‌ ಮಾ.19ರಿಂದ 3 ದಿನಗಳ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ. ಈಗಾಗಲೇ ಇಂಗ್ಲೆಂಡ್‌ನಿಂದ ಎರಡೂ ತಂಡಗಳು ಬೆಂಗಳೂರಿಗೆ ಆಗಮಿಸಿದ್ದು, ಮಾ.21ರ ವರೆಗೆ 10 ದಿನಗಳ ಕಾಲ ಅಭ್ಯಾಸ ನಡೆಸಲಿವೆ. ಲಂಕಶೈರ್‌ ಹಾಗೂ ಸಸೆಕ್ಸ್‌ ತಂಡಗಳು ಆರ್‌ಸಿಬಿ ವಿರುದ್ಧವೂ ಅಭ್ಯಾಸ ಪಂದ್ಯ ಆಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಎರಡೂ ತಂಡಗಳು ಆರ್‌ಸಿಬಿ ಜೊತೆ ಮಾತುಕತೆ ನಡೆಸಿವೆ. ಒಂದು ವೇಳೆ ಪಂದ್ಯ ನಿಗದಿಯಾದರೆ ಆಲೂರು ಅಥವಾ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ಆಯೋಜನೆಗೊಳ್ಳುವ ಸಾಧ್ಯತೆಯಿದೆ.