ರಾತ್ರಿ ಮಹಿಳಾ ಹಾಸ್ಟೆಲ್‌ಗೆ ನುಗ್ಗಿ ಸಿಕ್ಕಿ ಬಿದ್ದ ಚಾಂಪಿಯನ್‌ ವೇಟ್‌ಲಿಫ್ಟರ್‌ ಶೆಹುಲಿ!

| Published : Mar 17 2024, 01:46 AM IST

ರಾತ್ರಿ ಮಹಿಳಾ ಹಾಸ್ಟೆಲ್‌ಗೆ ನುಗ್ಗಿ ಸಿಕ್ಕಿ ಬಿದ್ದ ಚಾಂಪಿಯನ್‌ ವೇಟ್‌ಲಿಫ್ಟರ್‌ ಶೆಹುಲಿ!
Share this Article
  • FB
  • TW
  • Linkdin
  • Email

ಸಾರಾಂಶ

ಎನ್‌ಐಎಸ್‌ ತರಬೇತಿ ಕೇಂದ್ರದಲ್ಲಿ 22ರ ಅಚಿಂತಾ ಮಹಿಳಾ ಹಾಸ್ಟೆಲ್‌ಗೆ ತೆರಳಿದ್ದಾರೆ. ಇದನ್ನು ಗಮನಿಸಿದ ಭದ್ರತಾ ಸಿಬ್ಬಂದಿ ಅಚಿಂತಾರನ್ನು ಹಿಡಿದು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಪಟಿಯಾಲಾ(ಪಂಜಾಬ್‌): ಪ್ಯಾರಿಸ್‌ ಒಲಿಂಪಿಕ್ಸ್‌ ಪೂರ್ವಸಿದ್ಧತಾ ಶಿಬಿರದಲ್ಲಿ ರಾತ್ರಿ ವೇಳೆ ಮಹಿಳಾ ಹಾಸ್ಟೆಲ್‌ಗೆ ತೆರಳುತ್ತಿದ್ದಾಗ ಕಾಮನ್‌ವೆಲ್ತ್ ಗೇಮ್ಸ್‌ ಚಿನ್ನದ ಪದಕ ವಿಜೇತ ವೇಟ್‌ಲಿಫ್ಟರ್‌ ಅಚಿಂತಾ ಶೆಹುಲಿ ಸಿಕ್ಕಿಬಿದ್ದಿದ್ದು, ಅವರನ್ನು ಶಿಬಿರದಿಂದ ಹೊರ ಹಾಕಲಾಗಿದೆ. ಗುರುವಾರ ರಾತ್ರಿ ಇಲ್ಲಿನ ಎನ್‌ಐಎಸ್‌ ತರಬೇತಿ ಕೇಂದ್ರದಲ್ಲಿ 22ರ ಅಚಿಂತಾ ಮಹಿಳಾ ಹಾಸ್ಟೆಲ್‌ಗೆ ತೆರಳಿದ್ದಾರೆ. ಇದನ್ನು ಗಮನಿಸಿದ ಭದ್ರತಾ ಸಿಬ್ಬಂದಿ ಅಚಿಂತಾರನ್ನು ಹಿಡಿದು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಶಿಬಿರದಿಂದ ಹೊರಬಿದ್ದಿದ್ದರಿಂದ ಅಚಿಂತಾರ ಒಲಿಂಪಿಕ್ಸ್‌ ಕನಸು ಕೂಡಾ ಬಹುತೇಕ ಭಗ್ನಗೊಂಡಿದೆ. ಅವರು ಥಾಯ್ಲೆಂಡ್‌ನಲ್ಲಿ ನಡೆಯಲಿರುವ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇಲ್ಲ ಎಂದು ವರದಿಯಾಗಿದೆ.

ಆರ್ಲಿಯನ್ಸ್‌ ಬ್ಯಾಡ್ಮಿಂಟನ್‌: ಪ್ರತೀಕ್‌-ಕೃಷ್ಣಗೆ ಸೋಲು

ಆರ್ಲಿಯನ್ಸ್‌(ಫ್ರಾನ್ಸ್): ಭಾರತದ ತಾರಾ ಬ್ಯಾಡ್ಮಿಂಟನ್‌ ಜೋಡಿ ಸಾಯಿ ಪ್ರತೀಕ್-ಕೃಷ್ಣ ಪ್ರಸಾದ್‌ ಗರಗ ಆರ್ಲಿಯಾನ್ಸ್‌ ಮಾಸ್ಟರ್ಸ್‌ ಸೂಪರ್‌ 300 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್‌ನಲ್ಲಿ ಸೋಲನುಭವಿಸಿದ್ದಾರೆ. ಇದರೊಂದಿಗೆ ಟೂರ್ನಿಯಲ್ಲಿ ಭಾರತದ ಅಭಿಯಾನ ಕೊನೆಗೊಂಡಿದೆ. ಶುಕ್ರವಾರ ರಾತ್ರಿ ನಡೆದ ಪುರುಷರ ಡಬಲ್ಸ್‌ ಅಂತಿಮ 8ರ ಸುತ್ತಿನಲ್ಲಿ ವಿಶ್ವ ನಂ.70 ಪ್ರತೀಕ್‌-ಕೃಷ್ಣ ಜೋಡಿ ಡೆನ್ಮಾರ್ಕ್‌ನ ಆ್ಯಂಡ್ರೀಸ್‌ ಸೊಂಡೆರ್‌ಗಾರ್ಡ್‌-ಜೆಸ್ಪೆರ್ ಟೊಫ್ಟ್‌ ವಿರುದ್ಧ 17-21, 16-21ರಲ್ಲಿ ಸೋಲನುಭವಿಸಿತು. ಇದಕ್ಕೂ ಮುನ್ನ ಮಹಿಳಾ ಸಿಂಗಲ್ಸ್‌ನಲ್ಲಿ ಮಾಳವಿಕಾ ಬನ್ಸೋದ್‌, ತಾನ್ಯಾ ಹೇಮಂತ್‌, ಇಮಾದ್‌ ಫಾರೂಕಿ ಸಮಿಯಾ, ಪುರುಷರ ಸಿಂಗಲ್ಸ್‌ನಲ್ಲಿ ಕಿರಣ್‌ ಜಾರ್ಜ್‌, ಮಿಥುನ್ ಮಂಜುನಾಥ್‌, ಶಂಕರ್‌ ಮುತ್ತುಸ್ವಾಮಿ ಸೋತು ಹೊರಬಿದ್ದಿದ್ದರು.