ಸಾರಾಂಶ
ಮುಂಬೈ: 5 ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ 18 ರನ್‌ಗಳಿಂದ ಗೆಲ್ಲುವುದರೊಂದಿಗೆ 17ನೇ ಆವೃತ್ತಿ ಐಪಿಎಲ್‌ಗೆ ಲಖನೌ ಸೂಪರ್ ಜೈಂಟ್ಸ್ ವಿದಾಯ ಹೇಳಿದೆ.
ಈ ಗೆಲುವಿನೊಂದಿಗೆ ಲಖನೌ 14 ಪಂದ್ಯಗಳಲ್ಲಿ 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 00ನೇ ಸ್ಥಾನಿಯಾದರೆ, ಮುಂಬೈ 10ನೇ ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ ಕೊನೆ ಸ್ಥಾನದಲ್ಲೇ ಬಾಕಿಯಾಯಿತು.
ಮೊದಲು ಬ್ಯಾಟ್ ಮಾಡಿದ ಲಖನೌ 6 ವಿಕೆಟ್‌ಗೆ 214 ರನ್ ಕಲೆಹಾಕಿತು. ನಿಕೋಲಸ್ ಪೂರನ್ 29 ಎಸೆತಗಳಲ್ಲಿ 75 ರನ್ ಚಚ್ಚಿದರೆ, ಕೆ.ಎಲ್.ರಾಹುಲ್ 55 ರನ್ ಸಿಡಿಸಿದರು. ಚಾವ್ಲಾ 3 ವಿಕೆಟ್ ಕಬಳಿಸಿದರು. ಬೃಹತ್ ಗುರಿ ಬೆನ್ನತ್ತಿದ ಮುಂಬೈ 6 ವಿಕೆಟ್‌ಗೆ 196 ರನ್ ಗಳಿಸಿ ಸೋಲೊಪ್ಪಿಕೊಂಡಿತು. ರೋಹಿತ್ ಶರ್ಮಾ 38 ಎಸೆತಗಳಲ್ಲಿ 68 ರನ್ ಸಿಡಿಸಿದರು.
ಭಾರತ-ಬಾಂಗ್ಲಾ ಅಭ್ಯಾಸ ಪಂದ್ಯ ಜೂನ್ 1ಕ್ಕೆ ನಿಗದಿ
ದುಬೈ: ಟಿ20 ವಿಶ್ವಕಪ್‌ಗೂ ಮುನ್ನ ಭಾರತ ತಂಡ ಏಕೈಕ ಅಭ್ಯಾಸ ಪಂದ್ಯದಲ್ಲಿ ಪಾಲ್ಗೊಳ್ಳಲಿದೆ. ಜೂ.1ರಂದು ಟೀಂ ಇಂಡಿಯಾ, ಬಾಂಗ್ಲಾದೇಶ ವಿರುದ್ಧ ಸೆಣಸಾಡಲಿದೆ. ಪಂದ್ಯದ ಸ್ಥಳ, ಸಮಯ ಇನ್ನಷ್ಟೇ ನಿಗದಿಯಾಗಬೇಕಿದೆ. ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ 20 ತಂಡಗಳ ಪೈಕಿ 17 ತಂಡಗಳು ಮೇ 27ರಿಂದ ಜೂ.1ರ ವರೆಗೆ ಅಭ್ಯಾಸ ಪಂದ್ಯಗಳನ್ನಾಡಲಿವೆ. ಇಂಗ್ಲೆಂಡ್, ಪಾಕಿಸ್ತಾನ, ನ್ಯೂಜಿಲೆಂಡ್ ತಂಡಗಳು ಯಾವುದೇ ಅಭ್ಯಾಸ ಪಂದ್ಯಗಳನ್ನಾಡುವುದಿಲ್ಲ. ಭಾರತ ತಂಡ ಟೂರ್ನಿಯ ಮೊದಲ ಪಂದ್ಯದಲ್ಲಿ ಜೂ.5ಕ್ಕೆ ಐರ್ಲೆಂಡ್ ವಿರುದ್ಧ ಸೆಣಸಲಿದೆ.
;Resize=(128,128))