ಲಖನೌ ಸತತ 2 ಸೋಲನುಭವಿಸಿದೆ. ಹೀಗಾಗಿ ತವರಿನ ಕ್ರೀಡಾಂಗಣದಲ್ಲಿ ಹ್ಯಾಟ್ರಿಕ್ ಸೋಲು ತಪ್ಪಿಸುವ ಒತ್ತಡದಲ್ಲಿದೆ. ವೇಗಿ ಮಯಾಂಕ್ ಯಾದವ್ ಈ ಪಂದ್ಯದಲ್ಲಿ ಆಡುವ ನಿರೀಕ್ಷೆಯಲ್ಲಿದ್ದಾರೆ.
ಲಖನೌ: 17ನೇ ಆವೃತ್ತಿ ಐಪಿಎಲ್‌ನಲ್ಲಿ ಶುಕ್ರವಾರ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್‌ಗೆ ಲಖನೌ ಸೂಪರ್ ಜೈಂಟ್ಸ್ ಸವಾಲು ಎದುರಾಗಲಿದ್ದು, ಗೆಲುವಿನ ಓಟ ಮುಂದುವರಿಸುವ ನಿರೀಕ್ಷೆಯಲ್ಲಿದೆ. ಸತತ 2 ಸೋಲು ಕಂಡಿರುವ ಲಖನೌ ತವರಿನ ಅಂಕಗಳದಲ್ಲಿ ಗೆಲ್ಲುವ ಮೂಲಕ ಜಯದ ಹಳಿಗೆ ಮರಳುಕ ಕಾತರದಲ್ಲಿದೆ.
ಈ ಬಾರಿ ಚೆನ್ನೈ 6ರಲ್ಲಿ 4 ಪಂದ್ಯ ಗೆದ್ದಿದ್ದರೆ, ಲಖನೌ 3 ಗೆಲುವು ದಾಖಲಿಸಿವೆ. ಚೆನ್ನೈ ತಂಡದಲ್ಲಿ ಉತ್ತಮ ಗುಣಮಟ್ಟದ ಬೌಲರ್‌ಗಳಿದ್ದು, ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಲಖನೌ ಬ್ಯಾಟರ್‌ಗಳಿಗೆ ಭಾರಿ ಸವಾಲು ಎದುರಾಗಬಹುದು. ಜಡೇಜಾ ಜೊತೆ ಹೆಚ್ಚುವರಿ ಸ್ಪಿನ್ನರ್ ಆಗಿ ತೀಕ್ಷಣ ಅವರನ್ನು ಕಣಕ್ಕಿಳಿಸುವ ಸಾಧ್ಯತೆಯೂ ಇದೆ. ಪ್ರಮುಖ ಬ್ಯಾಟರ್ ಶಿವಂ ದುಬೆ ಮೇಲೆ ತಂಡ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದೆ.
ಮತ್ತೊಂದೆಡೆ ಲಖನೌ ಅಸ್ಥಿರ ಆಟವಾಡುತ್ತಿದ್ದು, ಹ್ಯಾಟ್ರಿಕ್ ಸೋಲು ತಪ್ಪಿಸಲು ಎದುರು ನೋಡುತ್ತಿದೆ. ಕಳೆದೆರಡು ಪಂದ್ಯಗಳಿಗೆ ಗೈರಾಗಿದ್ದ ಪ್ರಚಂಡ ವೇಗಿ ಮಯಾಂಕ್ ಯಾದವ್ ಈ ಪಂದ್ಯದಲ್ಲಿ ಆಡುವ ಸಾಧ್ಯತೆಯಿದೆ. ಬ್ಯಾಟಿಂಗ್ ವಿಭಾಗದಲ್ಲಿ ಪೂರನ್ ಮಾತ್ರ ಮಿಂಚುತ್ತಿದ್ದು, ನಾಯಕ ಕೆ.ಎಲ್.ರಾಹುಲ್ ಸ್ಟ್ರೈಕ್‌ರೇಟ್ ಹೆಚ್ಚಿಸುವತ್ತ ಗಮನಹರಿಸಬೇಕಿದೆ.ಒಟ್ಟು ಮುಖಾಮುಖಿ: 03ಚೆನ್ನೈ: 01ಲಖನೌ: 01ಫಲಿತಾಂಶವಿಲ್ಲ: 01
ಸಂಭವನೀಯ ಆಟಗಾರರ ಪಟ್ಟಿ
ಚೆನ್ನೈ: ಋತುರಾಜ್(ನಾಯಕ), ರಚಿನ್, ರಹಾನೆ, ಡ್ಯಾರಿಲ್, ದುಬೆ, ಜಡೇಜಾ, ರಿಜ್ವಿ, ಧೋನಿ, ಶಾರ್ದೂಲ್, ದೇಶಪಾಂಡೆ, ಮುಸ್ತಾಫಿಜುರ್.
ಲಖನೌ: ಡಿ ಕಾಕ್, ರಾಹುಲ್(ನಾಯಕ), ಹೂಡಾ, ಬದೋನಿ, ಸ್ಟೋಯ್ನಿಸ್, ಪೂರನ್, ಕೃನಾಲ್, ಬಿಷ್ಣೋಯ್, ಮೊಹ್ಸಿನ್, ಶಾಮರ್, ಯಶ್.
ಪಂದ್ಯ: ಸಂಜೆ 7.30ಕ್ಕೆ