ಮಲೇಷ್ಯಾ ಓಪನ್‌ ಬ್ಯಾಡ್ಮಿಂಟನ್‌: ಕ್ವಾರ್ಟರ್‌ ಫೈನಲ್‌ಗೆ ಸಾತ್ವಿಕ್‌-ಚಿರಾಗ್‌ ಲಗ್ಗೆ

| Published : Jan 12 2024, 01:45 AM IST

ಮಲೇಷ್ಯಾ ಓಪನ್‌ ಬ್ಯಾಡ್ಮಿಂಟನ್‌: ಕ್ವಾರ್ಟರ್‌ ಫೈನಲ್‌ಗೆ ಸಾತ್ವಿಕ್‌-ಚಿರಾಗ್‌ ಲಗ್ಗೆ
Share this Article
  • FB
  • TW
  • Linkdin
  • Email

ಸಾರಾಂಶ

ಮಲೇಷ್ಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ಆಟಗಾರರು ಸಿಂಗಲ್ಸ್‌ ವಿಭಾಗದಲ್ಲಿ ತಮ್ಮ ಅಭಿಯಾನ ಅಂತ್ಯಗೊಳಿಸಿದ್ದು, ಡಬಲ್ಸ್‌ನಲ್ಲಿ ಸಾತ್ವಿಕ್‌ ಸಾಯಿರಾಜ್‌-ಚಿರಾಗ್‌ ಶೆಟ್ಟಿ ಹಾಗೂ ಅಶ್ವಿನಿ ಪೊನ್ನಪ್ಪ-ತನೀಶಾ ಕ್ರಾಸ್ಟೋ ಜೋಡಿಗಳು ಜಯದ ಓಟ ಮುಂದುವರೆಸಿದ್ದು, ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿವೆ.
ಕೌಲಾಲಂಪುರ: ಮಲೇಷ್ಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ಸಾತ್ವಿಕ್‌ ಸಾಯಿರಾಜ್‌-ಚಿರಾಗ್‌ ಶೆಟ್ಟಿ ಹಾಗೂ ಅಶ್ವಿನಿ ಪೊನ್ನಪ್ಪ-ತನೀಶಾ ಕ್ರಾಸ್ಟೋ ಜೋಡಿಗಳು ಕ್ರಾಸ್ಟೋ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿವೆ. ಗುರುವಾರ ಪುರುಷರ ಡಬಲ್ಸ್‌ ಪ್ರಿ ಕ್ವಾರ್ಟರ್‌ನಲ್ಲಿ ವಿಶ್ವ ನಂ.2 ಜೋಡಿ ಸಾತ್ವಿಕ್‌-ಚಿರಾಗ್‌, ಫ್ರಾನ್ಸ್‌ನ ಲುಕಾಸ್‌ ಕೊರ್ವೀ-ರೋನನ್ ಲಬಾರ್‌ ಜೋಡಿ ವಿರುದ್ಧ 21-11, 21-18 ಗೇಮ್‌ಗಳಲ್ಲಿ ಗೆಲುವು ಸಾಧಿಸಿತು. ಇದೇ ವೇಳೆ ಮಹಿಳಾ ಡಬಲ್ಸ್‌ನಲ್ಲಿ ಅಶ್ವಿನಿ-ತನೀಶಾ 2 ಬಾರಿಯ ವಿಶ್ವ ಚಾಂಪಿಯನ್‌, ಮಾಜಿ ವಿಶ್ವ ನಂ.1 ಜಪಾನ್‌ನ ನಗಾಹಾರ-ಮಟ್ಸುಮೊಟೊ ಜೋಡಿ ವಿರುದ್ಧ 21-19, 13-21, 21-15 ಗೇಮ್‌ಗಳಲ್ಲಿ ರೋಚಕ ಜಯಗಳಿಸಿತು. ಆದರೆ ಸಿಂಗಲ್ಸ್‌ನಲ್ಲಿ ಭಾರತದ ಸವಾಲು ಅಂತ್ಯಗೊಂಡಿತು. ಕಿದಂಬಿ ಶ್ರೀಕಾಂತ್‌ಗೆ 2ನೇ ಸುತ್ತಿನಲ್ಲಿ ಸೋತರು.

ಜಾಗ್ರೆಬ್‌ ಓಪನ್‌ ಕುಸ್ತಿ: ಬಂಗಾರ ಗೆದ್ದ ಅಮನ್‌ಜಾಗ್ರೆಬ್‌(ಕ್ರೊವೇಷಿಯಾ): ಜಾಗ್ರೆಬ್‌ ಓಪನ್‌ ವಿಶ್ವ ರ್‍ಯಾಂಕಿಂಗ್‌ ಕುಸ್ತಿ ಪಂದ್ಯಾವಳಿಯಲ್ಲಿ ಭಾರತದ ಅಮನ್‌ ಶೆರಾವತ್‌ ಚಿನ್ನ ಜಯಿಸಿದ್ದಾರೆ. 13ನೇ ಶ್ರೇಯಾಂಕಿತ ಅಮನ್‌ ಚೀನಾದ ವಾನ್‌ಹೂ ಜೂ ವಿರುದ್ಧ 10-0 ಅಂಕಗಳಿಂದ ಫೈನಲ್‌ ಪಂದ್ಯದಲ್ಲಿ ಜಯ ತಮ್ಮದಾಗಿಸಿಕೊಂಡರು. ಜಾಗತಿಕ ಕುಸ್ತಿ ಮಂಡಳಿಯು ಭಾರತ ಕುಸ್ತಿ ಸಂಸ್ಥೆಯನ್ನು ಅಮಾನತುಗೊಳಿಸಿದ್ದರಿಂದ ಅಮನ್‌ ಭಾರತದ ಧ್ವಜದಡಿ ಸ್ಪರ್ಧಿಸದೆ, ತಟಸ್ಥರಾಗಿ ಸ್ಪರ್ಧೆಯಲ್ಲಿ ಭಾಗಿಯಾದರು.