ಮಲೇಷ್ಯಾ ಓಪನ್: ಸೆಮಿಸ್‌ಗೆ ಸಾತ್ವಿಕ್‌-ಚಿರಾಗ್‌ ಪ್ರವೇಶ

| Published : Jan 13 2024, 01:31 AM IST

ಮಲೇಷ್ಯಾ ಓಪನ್: ಸೆಮಿಸ್‌ಗೆ ಸಾತ್ವಿಕ್‌-ಚಿರಾಗ್‌ ಪ್ರವೇಶ
Share this Article
  • FB
  • TW
  • Linkdin
  • Email

ಸಾರಾಂಶ

ಮಲೇಷ್ಯಾ ಓಪನ್‌ ಸೂಪರ್‌ 1000 ಬ್ಯಾಡ್ಮಿಂಟನ್‌ ಟೂರ್ನಿಯ ಪುರುಷ ಡಬಲ್ಸ್‌ನಲ್ಲಿ ಭಾರತದ ಸಾತ್ವಿಕ್‌ ಸಾಯಿರಾಜ್‌ ಹಾಗೂ ಚಿರಾಗ್‌ ಶೆಟ್ಟಿ ಸೆಮಿಫೈನಲ್‌ಗೇರಿದ್ದಾರೆ. ಮಹಿಳಾ ಡಬಲ್ಸ್‌ ಕ್ವಾರ್ಟರ್‌ನಲ್ಲಿ ಸೋತ ಅಶ್ವಿನಿ ಪೊನ್ನಪ್ಪ-ತನೀಶಾ ಅಭಿಯಾನ ಕೊನೆಗೊಳಿಸಿದ್ದಾರೆ.

ಕೌಲಾ ಲಂಪುರ: ಭಾರತದ ತಾರಾ ಪುರುಷ ಡಬಲ್ಸ್‌ ಜೋಡಿ ಸಾತ್ವಿಕ್‌ ಸಾಯಿರಾಜ್‌ ಹಾಗೂ ಚಿರಾಗ್‌ ಶೆಟ್ಟಿ ಇಲ್ಲಿ ನಡೆಯುತ್ತಿರುವ ಮಲೇಷ್ಯಾ ಓಪನ್‌ ಸೂಪರ್‌ 1000 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಆದರೆ ಭಾರೀ ನಿರೀಕ್ಷೆ ಮೂಡಿಸಿದ್ದ ಅಶ್ವಿನಿ ಪೊನ್ನಪ್ಪ-ತನೀಶಾ ಕ್ರಾಸ್ಟೋ ಅಭಿಯಾನ ಕೊನೆಗೊಳಿಸಿದ್ದಾರೆ.ಶುಕ್ರವಾರ ನಡೆದ ಪುರುಷರ ಡಬಲ್ಸ್‌ ಕ್ವಾರ್ಟರ್‌ನಲ್ಲಿ ವಿಶ್ವ ನಂ.2 ಸಾತ್ವಿಕ್‌-ಚಿರಾಗ್‌, ಚೀನಾದ ರೆನ್‌ ಕ್ಷಿಯಾಂಗ್‌ ಯು ಹಾಗೂ ಹೆ ಜಿ ಟಿಂಗ್‌ ವಿರುದ್ಧ 21-11, 21-18ರಲ್ಲಿ ಗೆಲುವು ಸಾಧಿಸಿದರು. ವಿಶ್ವ ರ್‍ಯಾಂಕಿಂಗ್‌ನಲ್ಲಿ 32ನೇ ಸ್ಥಾನದಲ್ಲಿರುವ ಚೀನಾ ಜೋಡಿ ವಿರುದ್ಧ ಭಾರತೀಯರಿಗೆ 35 ನಿಮಿಷಗಳಲ್ಲೇ ಸುಲಭ ಜಯ ಲಭಿಸಿತು.

ಶನಿವಾರ ಸೆಮಿಫೈನಲ್‌ನಲ್ಲಿ ಸಾತ್ವಿಕ್‌-ಚಿರಾಗ್‌ಗೆ ದ.ಕೊರಿಯಾದ ಕಾಂಗ್‌ ಮಿನ್‌ ಹ್ಯುಕ್‌-ಸಿಯೊ ಸ್ಯುಯೆಂಗ್‌ ಜೋಡಿ ಸವಾಲು ಎದುರಾಗಲಿದೆ.

ಅಶ್ವಿನಿ-ತನೀಶಾ ಔಟ್

ಮಹಿಳಾ ಡಬಲ್ಸ್‌ ಕ್ವಾರ್ಟರ್‌ನಲ್ಲಿ ಅಶ್ವಿನಿ-ತನೀಶಾಗೆ ಜಪಾನ್‌ನ ರಿನ್‌ ಇವಾನಗ-ಕೀ ನಕಾನಿಶಿ ವಿರುದ್ಧ 15-21, 13-21ರಲ್ಲಿ ಆಘಾತಕಾರಿ ಸೋಲು ಎದುರಾಯಿತು. ಇದು ಜಪಾನ್‌ ಜೋಡಿ ವಿರುದ್ಧ ಅಶ್ವಿನಿ-ತನೀಶಾಗೆ 2ನೇ ಸೋಲು. ಕಳೆದ ತಿಂಗಲು ಸೆಯ್ಯದ್‌ ಮೋದಿ ಟೂರ್ನಿ ಫೈನಲ್‌ನಲ್ಲೂ ಸೋತಿದ್ದರು.