ಸಾರಾಂಶ
ಹೊಬಾರ್ಟ್: ಎಲ್ಲಾ ಮೂರು ಮಾದರಿ ಕ್ರಿಕೆಟ್‌ನ ತಮ್ಮ 100ನೇ ಪಂದ್ಯದಲ್ಲೂ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಳ್ಳುವ ಮೂಲಕ ಆಸ್ಟ್ರೇಲಿಯಾದ ತಾರಾ ಬ್ಯಾಟರ್ ಡೇವಿಡ್ ವಾರ್ನರ್ ವಿಶೇಷ ಸಾಧನೆ ಮಾಡಿದ್ದಾರೆ.
ಶುಕ್ರವಾರ ನಡೆದ ವೆಸ್ಟ್‌ಇಂಡೀಸ್ ವಿರುದ್ಧದ ಮೊದಲ ಟಿ20 ವಾರ್ನರ್‌ರ 100ನೇ ಟಿ20 ಪಂದ್ಯ. 70 ರನ್ ಸಿಡಿಸಿ ಅವರು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಇದಕ್ಕೂ ಮುನ್ನ 2017ರಲ್ಲಿ ಬೆಂಗಳೂರಿನಲ್ಲಿ ಭಾರತ ವಿರುದ್ಧ 100ನೇ ಏಕದಿನ, 2022ರಲ್ಲಿ ಮೆಲ್ಬರ್ನ್‌ನಲ್ಲಿ ದ.ಆಫ್ರಿಕಾ ವಿರುದ್ಧ 100ನೇ ಟೆಸ್ಟ್ ಮೈಲಿಗಲ್ಲು ಸಾಧಿಸಿದ್ದರು.
ಆ ಎರಡೂ ಪಂದ್ಯದಲ್ಲೂ ವಾರ್ನರ್‌ಗೆ ಪಂದ್ಯಶ್ರೇಷ್ಠ ಲಭಿಸಿತ್ತು. ವಾರ್ನರ್ 3 ಮಾದರಿಯಲ್ಲಿ ಕನಿಷ್ಠ 100 ಪಂದ್ಯಗಳನ್ನಾಡಿದ ವಿಶ್ವದ 3ನೇ ಕ್ರಿಕೆಟಿಗ.
ವಿರಾಟ್ ಕೊಹ್ಲಿ, ನ್ಯೂಜಿಲೆಂಡ್‌ನ ರಾಸ್ ಟೇಲರ್ ಇತರ ಸಾಧಕರು.--ವಾರ್ನರ್ 112 ಟೆಸ್ಟ್, 161 ಏಕದಿನ ಪಂದ್ಯಗಳನ್ನು ಆಡಿದ್ದಾರೆ.
ನ್ಯೂಜಿಲೆಂಡ್‌ನ ರಾಸ್ ಟೇಲರ್ 112 ಟೆಸ್ಟ್, 236 ಏಕದಿನ, 102 ಟಿ20 ಪಂದ್ಯಗಳನ್ನಾಡಿದ್ದು, ಭಾರತದ ವಿರಾಟ್ ಕೊಹ್ಲಿ 113 ಟೆಸ್ಟ್, 292 ಏಕದಿನ, 117 ಟಿ20 ಆಡಿದ್ದಾರೆ.
;Resize=(690,390))
)
)
;Resize=(128,128))
;Resize=(128,128))
;Resize=(128,128))