ಸಾರಾಂಶ
ಮಂಡ್ಯ: ಐಟಿಎಫ್ ಮಂಡ್ಯ ಓಪನ್ ಅಂತಾರಾಷ್ಟ್ರೀಯ ಟೆನಿಸ್ ಟೂರ್ನಿಯಲ್ಲಿ ಮನೀಶ್ ಗಣೇಶ್ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಮಂಗಳವಾರ ಅವರು ಪುರುಷರ ಸಿಂಗಲ್ಸ್‌ನಲ್ಲಿ ನೀರಜ್ ಕುಮಾರ್ ಯಶ್ಪಾಲ್ ಅವರನ್ನು 6-1, 6-1 ಸೆಟ್‌ಗಳಲ್ಲಿ ಸೋಲಿಸಿ ಮುಂದಿನ ಸುತ್ತಿಗೆ ಲಗ್ಗೆ ಇಟ್ಟರು.
ಆದರೆ ಕರ್ನಾಟಕದ ಆದಿಲ್ ಆದಿಲ್ ಕಲ್ಯಾಣಪುರ ಮೊದಲ ಸುತ್ತಲ್ಲೇ ಸೋತು ಅಭಿಯಾನ ಕೊನೆಗೊಳಿಸಿದರು. ಅವರು ಸಿದ್ಧಾರ್ಥ್ ವಿಶ್ವಕರ್ಮ ವಿರುದ್ಧ 3-6, 1-6 ಸೋಲನುಭವಿಸಿದರು.ಡಬಲ್ಸ್‌ನಲ್ಲಿ ಕರ್ನಾಟಕದ ಪ್ರಜ್ವಲ್ ದೇವ್ ಅವರೊಂದಿಗೆ ಕಣಕ್ಕಿಳಿದಿದ್ದ ನಿತಿನ್ ಕುಮಾರ್ ಸಿನ್ಹಾ ಹೊಟ್ಟೆ ನೋವಿನ ಕಾರಣದಿಂದಾಗಿ ಕಣದಿಂದ ನಿವೃತ್ತಿಯಾದರು.
ಪರೀಕ್ಷಿತ್ ಸೊಮಾನಿ-ಸುರೇಶ್ ಕುಮಾರ್, ಸಾಯಿ ಕಾರ್ತಿಕ್ ರೆಡ್ಡಿ- ವಿಷ್ಣುವರ್ಧನ್ ಜೋಡಿ ಜಯ ಸಾಧಿಸಿ ಮುಂದಿನ ಸುತ್ತಿಗೇರಿವೆ. ಆದರೆ ಮನೀಶ್ ಗಣೇಶ್- ರಿಷಿ ರೆಡ್ಡಿ, ರಿಷಬ್ ಅಗರವಾಲ್-ಆದಿಲ್ ಕಲ್ಯಾಣಪುರ, ಪ್ರೀತಮ್ ಗಣೇಶ್-ಚಂದನ್ ಶಿವರಾಜ್, ಯಶ್ ಚೌರಾಸಿಯಾ-ಜಗ್ಮೀತ್ ಸಿಂಗ್ ಜೋಡಿಗಳು ಪರಾಭವಗೊಂಡವು.