ಗ್ರಾಮೀಣ ಬಾಸ್ಕೆಟ್‌ಬಾಲ್‌ ಲೀಗ್‌: ಮಂಗಳೂರು ಚಾಂಪಿಯನ್‌

| Published : Mar 31 2024, 02:02 AM IST / Updated: Mar 31 2024, 04:51 AM IST

ಗ್ರಾಮೀಣ ಬಾಸ್ಕೆಟ್‌ಬಾಲ್‌ ಲೀಗ್‌: ಮಂಗಳೂರು ಚಾಂಪಿಯನ್‌
Share this Article
  • FB
  • TW
  • Linkdin
  • Email

ಸಾರಾಂಶ

ಫೈನಲ್‌ನಲ್ಲಿ ಮಂಗಳೂರು ತಂಡ ರೈಸಿಂಗ್‌ ಸ್ಟಾರ್‌ ಬಿಸಿ ಮೈಸೂರು ವಿರುದ್ಧ 81-65ರಲ್ಲಿ ಜಯಗಳಿಸಿತು. ಚಾಂಪಿಯನ್‌ ತಂಡಕ್ಕೆ ₹50000 ನಗದು ಲಭಿಸಿತು.

ಬೆಂಗಳೂರು: ಕರ್ನಾಟಕ ರಾಜ್ಯ ಬಾಸ್ಕೆಟ್‌ಬಾಲ್‌ ಸಂಸ್ಥೆ ಆಯೋಜಿಸಿದ ರಾಜ್ಯ ಮಟ್ಟದ ಗ್ರಾಮೀಣ ಬಾಸ್ಕೆಟ್‌ಬಾಲ್‌ ಟೂರ್ನಿಯಲ್ಲಿ ಮಂಗಳೂರು ಬಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಫೈನಲ್‌ನಲ್ಲಿ ಮಂಗಳೂರು ತಂಡ ರೈಸಿಂಗ್‌ ಸ್ಟಾರ್‌ ಬಿಸಿ ಮೈಸೂರು ವಿರುದ್ಧ 81-65ರಲ್ಲಿ ಜಯಗಳಿಸಿತು. ಆರ್ಯನ್‌ ಬಿಸಿ 3ನೇ, ಹೊಯ್ಸಳ ಬಿಸಿ 4ನೇ ಸ್ಥಾನ ಪಡೆದುಕೊಂಡವು. ಚಾಂಪಿಯನ್‌ ತಂಡ ₹50000 ನಗದು, ರನ್ನರ್‌ಅಪ್‌ ತಂಡ ₹30000 ನಗದು ಬಹುಮಾನ ಪಡೆಯಿತು. ವಿಜೇತರಿಗೆ ಫಿಬಾ ಏಷ್ಯಾ ಅಧ್ಯಕ್ಷ ಡಾ.ಕೆ.ಗೋವಿಂದರಾಜು ಸೇರಿದಂತೆ ಗಣ್ಯರು ಟ್ರೋಫಿ ಹಸ್ತಾಂತರಿಸಿದರು.

ಏಪ್ರಿಲ್‌ ಅಂತ್ಯಕ್ಕೆ ಭಾರತ ವಿಶ್ವಕಪ್‌ ತಂಡ ಪ್ರಕಟ? 

ನವದೆಹಲಿ: ಜೂನ್‌ನಲ್ಲಿ ವೆಸ್ಟ್‌ಇಂಡೀಸ್‌, ಅಮೆರಿಕದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‌ಗೆ 15 ಜನರ ಭಾರತ ತಂಡವನ್ನು ಏಪ್ರಿಲ್‌ ಕೊನೆ ವಾರದಲ್ಲಿ ಪ್ರಕಟಿಸುವ ಸಾಧ್ಯತೆ ಇದೆ ಎಂದು ಬಿಸಿಸಿಐ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.ಏಪ್ರಿಲ್‌ ಅಂತ್ಯಕ್ಕೆ ಐಪಿಎಲ್‌ ಮೊದಲಾರ್ಧ ಮುಕ್ತಾಯಗೊಳ್ಳಲಿದೆ. ಐಪಿಎಲ್‌ನ ಪ್ರದರ್ಶನ ನೋಡಿ ಆಯ್ಕೆ ಸಮಿತಿಯು ತಂಡ ಆಯ್ಕೆ ಮಾಡಿಕೊಳ್ಳಲಿದೆ. ತಂಡ ಪ್ರಕಟಿಸಲು ಐಸಿಸಿ ಮೇ 1ರ ವರೆಗೆ ಕಾಲಾವಕಾಶ ನೀಡಿದ್ದು, ಮೇ 25ರ ವರೆಗೂ ಸದಸ್ಯರ ಬದಲಾವಣೆಗೆ ಅವಕಾಶವಿದೆ.

ಐಪಿಎಲ್‌ನಲ್ಲಿ ಉಪಾಂತ್ಯಕ್ಕೆ ತಲುಪದ ತಂಡಗಳಲ್ಲಿರುವ ಹಾಗೂ ವಿಶ್ವಕಪ್‌ ಟೂರ್ನಿಗೆ ಆಯ್ಕೆಯಾಗಿರುವ ಆಟಗಾರರ ಮೊದಲ ತಂಡ ಮೇ 19ರ ನಂತರ ಅಂದರೆ ಐಪಿಎಲ್‌ನ ಲೀಗ್‌ ಪಂದ್ಯಗಳು ಮುಕ್ತಾಯವಾದ ತಕ್ಷಣವೇ ನ್ಯೂಯಾರ್ಕ್‌ಗೆ ತೆರಳಲಿದ್ದಾರೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ವರದಿಯಾಗಿದೆ.