ಸಾರಾಂಶ
ಬೆಂಗಳೂರು: ಹಿರಿಯ ಆಟಗಾರ ಮನೀಶ್ ಪಾಂಡೆಗೆ ಕರ್ನಾಟಕ ತಂಡದ ಬಾಗಿಲು ಬಂದ್ ಆಗಿದೆ. ಪ್ರತಿಭಾವಂತ ಯುವ ಆಟಗಾರರಿಗೆ ಮಣೆ ಹಾಕಲು ನಿರ್ಧರಿಸಿರುವ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ), ಮನೀಶ್‌ರನ್ನು ಮುಂಬರುವ ವಿಜಯ್ ಹಜಾರೆ ಏಕದಿನ ತಂಡದಿಂದ ಹೊರಗಿಟ್ಟಿದೆ.
ರಣಜಿ ಕ್ರಿಕೆಟ್‌ಗೂ ಮನೀಶ್‌ರನ್ನು ಆಯ್ಕೆ ಮಾಡುವುದಿಲ್ಲ ಎಂದು ಕೆಎಸ್‌ಸಿಎ ಸ್ಪಷ್ಟಪಡಿಸಿದೆ.35 ವರ್ಷದ ಮನೀಶ್ ಕಳೆದ 16 ವರ್ಷಗಳಿಂದಲೂ ಕರ್ನಾಟಕ ಪರ ಆಡುತ್ತಿದ್ದಾರೆ. ಆದರೆ ಕಳೆದೆರಡು ವರ್ಷಗಳಿಂದ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗುತ್ತಿದ್ದಾರೆ. ಈ ಋತುವಿನ 5 ಪಂದ್ಯಗಳಲ್ಲಿ 1 ಅರ್ಧಶತಕ ಸೇರಿ ಕೇವಲ 137 ರನ್ ಗಳಿಸಿದ್ದಾರೆ.
ಮುಷ್ತಾಕ್ ಅಲಿ ಟಿ20ಯಲ್ಲೂ ಅವರು ವೈಫಲ್ಯ ಕಂಡಿದ್ದಾರೆ. ಈ ಬಗ್ಗೆ ಮಾತನಾಡಿರುವ ರಾಜ್ಯ ಕ್ರಿಕೆಟ್ ಸಂಸ್ಥೆ ಆಯ್ಕೆ ಸಮಿತಿ ಮುಖ್ಯಸ್ಥ ಜೆ.ಅಭಿರಾಮ್, ‘ಕರ್ನಾಟಕ ಪರ ಮನೀಶ್‌ರ ವೃತ್ತಿಬದುಕು ಅತ್ಯುತ್ತಮವಾಗಿದೆ. ಆದರೆ ಈಗ ಯುವಕರಿಗೆ ದಾರಿ ಬಿಟ್ಟುಕೊಡಬೇಕಾದ ಅಗತ್ಯವಿದೆ.
ಹೀಗಾಗಿ ರಣಜಿ 2ನೇ ಹಂತದಲ್ಲೂ ಮನೀಶ್ ರಾಜ್ಯ ತಂಡಕ್ಕೆ ಮರಳುವುದಿಲ್ಲ. ಯುವ ಪ್ರತಿಭಾವಂತ ಆಟಗಾರರಿಗೆ ಅವಕಾಶ ಮಾಡಿಕೊಡುತ್ತೇವೆ’ ಎಂದಿದ್ದಾರೆ. ‘ನಮ್ಮ ನಿರ್ಧಾರವನ್ನು ಮನೀಶ್‌ಗೂ ತಿಳಿಸಿದ್ದೇವೆ. ಅವರು ಕೋಚ್ ಆಗಿ ಅಥವಾ ಇನ್ನಾವುದೇ ಪಾತ್ರದಲ್ಲಿ ಕರ್ನಾಟಕ ಕ್ರಿಕೆಟ್‌ನೊಂದಿಗೆ ಸಂಪರ್ಕದಲ್ಲಿರಲು ನಾವು ಬಯಸುತ್ತೇವೆ’ ಎಂದು ಅಭಿರಾಂ ಹೇಳಿದ್ದಾರೆ.