ಸಾರಾಂಶ
ಇತ್ತೀಚೆಗಷ್ಟೇ ವಿಮಾನದಲ್ಲಿ ದ್ರವ ಪದಾರ್ಥ ಕುಡಿದು ಅಸ್ವಸ್ಥಗೊಂಡಿದ್ದ ಕರ್ನಾಟಕ ಕ್ರಿಕೆಟಿಗ ಮಯಾಂಕ್ ಅಗರ್‌ವಾಲ್ ಈ ಬಾರಿ ವಿಮಾನ ಪ್ರಯಾಣಕ್ಕೆ ಸ್ವಂತ ನೀರಿನ ಬಾಟಲಿ ಕೊಂಡೊಯ್ದಿದ್ದಾರೆ.
ಹುಬ್ಬಳ್ಳಿ: ಇತ್ತೀಚೆಗಷ್ಟೇ ವಿಮಾನದಲ್ಲಿ ದ್ರವ ಪದಾರ್ಥ ಕುಡಿದು ಅಸ್ವಸ್ಥಗೊಂಡಿದ್ದ ಕರ್ನಾಟಕ ಕ್ರಿಕೆಟಿಗ ಮಯಾಂಕ್ ಅಗರ್‌ವಾಲ್ ಈ ಬಾರಿ ವಿಮಾನ ಪ್ರಯಾಣಕ್ಕೆ ಸ್ವಂತ ನೀರಿನ ಬಾಟಲಿ ಕೊಂಡೊಯ್ದಿದ್ದಾರೆ. ಜೊತೆಗೆ ಬಾಟಲಿ ಜೊತೆ ಸೆಲ್ಫಿಯನ್ನೂ ತೆಗೆದು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದು, ಮತ್ತೊಮ್ಮೆ ಕಷ್ಟ ಆಗುವುದು ಬೇಡ ಎಂದು ಬರೆದುಕೊಂಡಿದ್ದಾರೆ. ತ್ರಿಪುರಾ ವಿರುದ್ಧ ಪಂದ್ಯದ ಬಳಿಕ ಸೂರತ್‌ಗೆ ತೆರಳುತ್ತಿದ್ದಾಗ ವಿಮಾನದಲ್ಲಿ ದ್ರವ ಪದಾರ್ಧ ಸೇವಿಸಿದ್ದರಿಂದ ಮಯಾಂಕ್ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದರು. ಮಾ.20ಕ್ಕೆ ಬೆಂಗಳೂರಲ್ಲಿ ರಾಷ್ಟ್ರೀಯ ಜಂಪ್ಸ್ ಕೂಟ
ಬೆಂಗಳೂರು: ರಾಷ್ಟ್ರೀಯ 3ನೇ ಜಂಪ್ಸ್ ಕೂಟವು ಬೆಂಗಳೂರಿನ ಕುಂಬಳಗೋಡುನಲ್ಲಿರುವ ಅಂಜು ಬಾಬಿ ಹೈ ಪರ್ಪಾಮೆನ್ಸ್ ಕೇಂದ್ರದಲ್ಲಿ ಮಾ.20ರಂದು ಆಯೋಜಿಸಲಾಗಿದೆ. ಭಾರತೀಯ ಅಥ್ಲೆಟಿಕ್ಸ್ ನಿಯಮಗಳ ಪ್ರಕಾರ ಉದ್ದ ಜಿಗಿತ, ಎತ್ತರ ಜಿಗಿತ, ಟ್ರಿಪಲ್ ಜಂಪ್ ಹಾಗೂ ಪೋಲ್‌ವಾಲ್ಟ್ ಸ್ಫರ್ಧೆಗಳು ಜರುಗಲಿವೆ. 1 ಸಾವಿರ ರು. ಪ್ರವೇಶ ಶುಲ್ಕ ಪಾವತಿಸಿ ಆನ್‌ಲೈನ್ ಮೂಲಕ ಮಾ.10ರೊಳಗಾಗಿ ನೋಂದಣಿ ಮಾಡಿಕೊಳ್ಳಬಹುದಾಗಿದೆ.