ಸಾರಾಂಶ
‘ಲಕ್ಷ್ಯನ್ ಅಕಾಡೆಮಿ ಭಾರತದ ಕ್ರೀಡೆಯ ದಿಕ್ಕನ್ನು ಬದಲಿಸಲಿದೆ. ಇಂತಹ ಅಕಾಡೆಮಿಗಳು ಪ್ರತಿ ರಾಜ್ಯದಲ್ಲೂ ಅಗತ್ಯವಿದೆ‘ ಎಂದು ಅನುರಾಗ್ ಠಾಕೂರ್ ಹೇಳಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದಲ್ಲಿ ತಲೆ ಎತ್ತಿರುವ, ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ಲಕ್ಷ್ಯನ್ ಕ್ರೀಡಾ ಅಕಾಡೆಮಿಯನ್ನು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಶನಿವಾರ ಲೋಕಾರ್ಪಣೆಗೊಳಿಸಿದರು.ಸರ್ಜಾಪುರ ಸಮೀಪ 2 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಅಕಾಡೆಮಿಯಲ್ಲಿ ಟೇಬಲ್ ಟೆನಿಸ್, ಚೆಸ್, ಬಾಸ್ಕೆಟ್‌ಬಾಲ್, ಈಜು, ಬ್ಯಾಡ್ಮಿಂಟನ್, ಶೂಟಿಂಗ್, ಸ್ಕ್ಯಾಶ್ ಸೇರಿದಂತೆ ವಿಶ್ವದರ್ಜೆಯ 10ರಷ್ಟು ಕ್ರೀಡಾ ತರಬೇತಿ ಕೇಂದ್ರಗಳಿವೆ. ಜೊತೆಗೆ ಜಿಮ್, ಪುನಶ್ಚೇತನ, ಯೋಗ, ಫಿಸಿಯೋಥೆರಪಿ ಸೆಂಟರ್‌ಗಳಿವೆ. ಅಕಾಡೆಮಿಯ ಪ್ರತಿ ಕೇಂದ್ರಕ್ಕೂ ಭೇಟಿ ನೀಡಿದ ಅನುರಾಗ್, ಅತ್ಯಾಧುನಿಕ ಸೌಲಭ್ಯಗಳ ಬಗ್ಗೆ ಮೆಚ್ಚುಗೆ ಸೂಚಿಸಿದರು. ಅಲ್ಲದೆ ಕೆಲ ಕಾಲ ಕೋಚ್‌ಗಳ ಜೊತೆ ಶೂಟಿಂಗ್, ಫುಟ್ಬಾಲ್, ಬ್ಯಾಡ್ಮಿಂಟನ್, ಬಾಸ್ಕೆಟ್‌ಬಾಲ್ ಆಡಿದರು. ‘ಲಕ್ಷ್ಯನ್ ಅಕಾಡೆಮಿ ಭಾರತದ ಕ್ರೀಡೆಯ ದಿಕ್ಕನ್ನು ಬದಲಿಸಲಿದೆ. ಇಂತಹ ಅಕಾಡೆಮಿಗಳು ಪ್ರತಿ ರಾಜ್ಯದಲ್ಲೂ ಅಗತ್ಯವಿದೆ‘ ಎಂದು ಹೇಳಿದರು.ಈ ವೇಳೆ ಭಾರತದ ದಿಗ್ಗಜ ಹಾಕಿ ಪಟುಗಳಾದ ಧನರಾಜ್ ಪಿಳ್ಳೈ, ಅರ್ಜುನ್ ಹಾಲಪ್ಪ, ಅಕಾಡೆಮಿ ಸಂಸ್ಥಾಪಕರಾದ ಲಕನ್ನಾ ಯಶಿಕಾ, ಜೀವನ್ ಮಹದೇವನ್ ಸೇರಿದಂತೆ ಪ್ರಮುಖರು ಹಾಜರಿದ್ದರು.