ಸಾರಾಂಶ
ಹೈದರಾಬಾದ್: ಟಿ20 ವಿಶ್ವಕಪ್ ವಿಜೇತ ಭಾರತ ತಂಡದಲ್ಲಿದ್ದ ವೇಗಿ ಮೊಹಮದ್ ಸಿರಾಜ್ ಶುಕ್ರವಾರ ತಮ್ಮ ತವರು ಹೈದರಾಬಾದ್‌ಗೆ ಆಗಮಿಸಿದ್ದು, ಈ ವೇಳೆ ಅವರಿಗೆ ಅಭಿಮಾನಿಗಳು ಅದ್ಧೂರಿ ಸ್ವಾಗತ ಕೋರಿದರು. ಸಂಜೆ ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಿರಾಜ್, ಮೆಹದಿಪಟ್ನಂನಿಂದ ಈದ್ಗಾ ಮೈದಾನದ ವರೆಗೆ ತೆರೆದ ಕಾರಿನಲ್ಲಿ ಮೆರವಣಿಗೆಯಲ್ಲಿ ಸಾಗಿದರು.
ಈ ವೇಳೆ ಅಪಾರ ಪ್ರಮಾಣದಲ್ಲಿ ಅಭಿಮಾನಿಗಳು ಪಾಲ್ಗೊಂಡರು.ಮಹಾರಾಷ್ಟ್ರ ವಿಧಾನಸಭೆಯಲ್ಲಿ ರೋಹಿತ್, ಸೂರ್‍ಯಗೆ ಸನ್ಮಾನಮುಂಬೈ: ಟಿ20 ವಿಶ್ವಕಪ್ ವಿಜೇತ ಭಾರತ ತಂಡದ ನಾಲ್ವರು ಆಟಗಾರರಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರು ಶುಕ್ರವಾರ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಸನ್ಮಾನ ಮಾಡಿದರು.
ಮುಂಬೈ ಆಟಗಾರರಾದ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಯಶಸ್ವಿ ಜೈಸ್ವಾಲ್ ಹಾಗೂ ಶಿವಂ ದುಬೆಯನ್ನು ವಿಧಾನಸಭೆಗೆ ಆಹ್ಮಾನಿಸಿದ ಮುಖ್ಯಮಂತ್ರಿ ಶಿಂಧೆ, ಆಟಗಾರರಿಗೆ ಶಾಲು ಹೊದಿಸಿ, ಹೂಗುಚ್ಚ, ಗಣೇಶ ಮೂರ್ತಿ ನೀಡಿ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭ ಉಪಮುಖ್ಯಮಂತ್ರಿಗಳಾದ ಅಜಿತ್ ಪವಾರ್, ದೇವೇಂದ್ರ ಪಡ್ನವೀಸ್ ಕೂಡಾ ಉಪಸ್ಥಿತರಿದ್ದರು.
₹11 ಕೋಟಿ ಬಹುಮಾನ
ಮುಂಬೈನ ಆಟಗಾರರಾದ ರೋಹಿತ್, ದುಬೆ, ಸೂರ್ಯ, ಜೈಸ್ವಾಲ್‌ಗೆ ಮುಖ್ಯಮಂತ್ರಿ ಶಿಂಧೆ ಅವರು ವಿಧಾನಸಭೆಯಲ್ಲಿ 11 ಕೋಟಿ ರು. ನಗದು ಬಹುಮಾನ ಘೋಷಿಸಿದರು. ಇದೇ ವೇಳೆ ವಿಶ್ವಕಪ್ ಗೆಲುವಿಗೆ ಭಾರತದ ಸಹಾಯಕ ಕೋಚ್‌ಗಳಾದ ಪರಾಸ್ ಮಾಂಬ್ರೆ, ಅರುಣ್ ಕನಡೆ ಕೊಡುಗೆಯನ್ನೂ ಶಿಂಧೆ ಸ್ಮರಿಸಿದರು.