ಸಾರಾಂಶ
ವಾಂಖೇಡೆಯಲ್ಲಿ ಬದ್ಧವೈರಿಗಳ ನಡುವೆ ಇಂದು ಬಿಗ್ ಫೈಟ್. ತವರಿನಲ್ಲಿ ಮುಂಬೈ ಇಂಡಿಯನ್ಸ್‌ಗೆ ಹ್ಯಾಟ್ರಿಕ್ ಜಯದ ಗುರಿ. ತವರಿನಾಚೆ ಮೊದಲ ಜಯಕ್ಕೆ ಚೆನ್ನೈ ಸೂಪರ್‌ಕಿಂಗ್ಸ್ ತವಕ. ಹೊಸ ನಾಯಕರ ಅಡಿಯಲ್ಲಿ ಸೆಣಸಲಿರುವ ಉಭಯ ತಂಡಗಳ ನಡುವೆ ಗೆಲ್ಲೋರ್‍ಯಾರು?
ಮುಂಬೈ: ಐಪಿಎಲ್‌ನ ಅತ್ಯಂತ ಯಶಸ್ವಿ ತಂಡಗಳಾದ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಭಾನುವಾರ ವಾಂಖೇಡೆ ಕ್ರೀಡಾಂಗಣದಲ್ಲಿ ಸೆಣಸಲಿವೆ. ಬದ್ಧವೈರಿಗಳ ನಡುವಿನ ಈ ಕಾದಾಟ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದ್ದು, ಉಭಯ ತಂಡಗಳು ಮತ್ತೊಂದು ಭರ್ಜರಿ ಗೆಲುವಿಗಾಗಿ ಎದುರು ನೋಡುತ್ತಿವೆ.
ಹ್ಯಾಟ್ರಿಕ್ ಸೋಲಿನ ಬಳಿಕ ತವರಿನಲ್ಲಿ ಕಳೆದೆರಡು ಪಂದ್ಯಗಳಲ್ಲಿ ಅಮೋಘ ಪ್ರದರ್ಶನ ತೋರಿ ಗೆಲುವು ಸಂಪಾದಿಸಿರುವ ಮುಂಬೈ, ಈಗ ಹ್ಯಾಟ್ರಿಕ್ ಜಯದ ಮೇಲೆ ಕಣ್ಣಿಟ್ಟಿದೆ. ಇನ್ನು ತವರಿನಲ್ಲಿ ಆಡಿದ ಮೂರೂ ಪಂದ್ಯಗಳನ್ನು ಗೆದ್ದಿರುವ ಸಿಎಸ್‌ಕೆ, ತವರಿನಾಚೆ ಆಡಿರುವ ಎರಡೂ ಪಂದ್ಯಗಳನ್ನು ಸೋತಿದೆ. ಹೀಗಾಗಿ, ಈ ಪಂದ್ಯ ಚೆನ್ನೈಗೆ ಮಹತ್ವದೆನಿಸಿದೆ.
ರೋಹಿತ್, ಇಶಾನ್, ಸೂರ್ಯಕುಮಾರ್, ಟಿಮ್ ಡೇವಿಡ್, ಹಾರ್ದಿಕ್ ಪಾಂಡ್ಯರಂತಹ ವಿಸ್ಫೋಟಕ ಬ್ಯಾಟರ್‌ಗಳ ಎದುರು ದೀಪಕ್ ಚಹರ್, ಮುಸ್ತಾಫಿಜುರ್, ಜಡೇಜಾ ಎಷ್ಟು ಪರಿಣಾಮಕಾರಿಯಾಗಬಲ್ಲರು ಎನ್ನುವುದರ ಮೇಲೆ ಫಲಿತಾಂಶ ನಿರ್ಧಾರವಾಗಲಿದೆ.
ಒಟ್ಟು ಮುಖಾಮುಖಿ: 36
ಮುಂಬೈ: 20ಚೆನ್ನೈ: 16
ಸಂಭವನೀಯ ಆಟಗಾರರ ಪಟ್ಟಿ
ಮುಂಬೈ: ಕಿಶನ್, ರೋಹಿತ್, ಸೂರ್ಯಕುಮಾರ್, ಹಾರ್ದಿಕ್(ನಾಯಕ), ತಿಲಕ್, ಡೇವಿಡ್, ನಬಿ, ಶೆಫರ್ಡ್, ಶ್ರೇಯಸ್, ಬೂಮ್ರಾ, ಕೋಟ್ಝೀ, ಮಧ್ವಾಲ್.ಚೆನ್ನೈ: ಋತುರಾಜ್ (ನಾಯಕ), ರಚಿನ್, ರಹಾನೆ, ದುಬೆ, ಮಿಚೆಲ್, ಜಡೇಜಾ, ರಿಜ್ವಿ, ಧೋನಿ, ಚಹರ್, ತುಷಾರ್, ಪತಿರನ/ತೀಕ್ಷಣ, ಮುಸ್ತಾಫಿಜುರ್.
ಪಂದ್ಯ ಆರಂಭ: ಸಂಜೆ 7.30ಕ್ಕೆ, ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ
;Resize=(128,128))
;Resize=(128,128))
;Resize=(128,128))
;Resize=(128,128))