ಸಾರಾಂಶ
ಟೆಸ್ಟ್ ಕ್ರಿಕೆಟ್‌ನಲ್ಲಿ 500 ವಿಕೆಟ್ ಪೂರೈಸಿದ ಆಸ್ಟ್ರೇಲಿಯಾದ ನೇಥನ್ ಲಯನ್. ಈ ಸಾಧನೆ ಮಾಡಿದ ವಿಶ್ವದ 8ನೇ ಬೌಲರ್. ಪಾಕಿಸ್ತಾನದ ಫಹೀಂ ಅಶ್ರಫ್ 500ನೇ ಬಲಿ.
- ಟೆಸ್ಟ್‌ನಲ್ಲಿ ಈ ಸಾಧನೆ ಮಾಡಿದ 8ನೇ ಬೌಲರ್ ಲಯನ್- 500 ವಿಕೆಟ್ ಕ್ಲಬ್ ಸೇರಿದ ಆಸ್ಟ್ರೇಲಿಯಾದ 3ನೇ ಬೌಲರ್- 500 ವಿಕೆಟ್ ಪೂರೈಸಿದ ವಿಶ್ವದ ಕೇವಲ 4ನೇ ಸ್ಪಿನ್ನರ್‌ಪರ್ತ್: ಟೆಸ್ಟ್ ಕ್ರಿಕೆಟ್‌ನಲ್ಲಿ 500 ವಿಕೆಟ್ ಕಬಳಿಸಿದ ಬೌಲರ್‌ಗಳ ಸಾಲಿಗೆ ಆಸ್ಟ್ರೇಲಿಯಾದ ತಾರಾ ಸ್ಪಿನ್ನರ್ ನೇಥನ್ ಲಯನ್ ಸೇರ್ಪಡೆಗೊಂಡಿದ್ದಾರೆ. ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್‌ನ 2ನೇ ಇನ್ನಿಂಗ್ಸ್‌ನಲ್ಲಿ ಫಹೀಂ ಅಶ್ರಫ್‌ರ ವಿಕೆಟ್ ಪಡೆದು ಲಯನ್ ಈ ಮೈಲಿಗಲ್ಲು ತಲುಪಿದರು. ಟೆಸ್ಟ್‌ನಲ್ಲಿ ಈ ಸಾಧನೆ ಒಟ್ಟಾರೆ 8ನೇ ಬೌಲರ್ ಎನ್ನುವ ಖ್ಯಾತಿಗೆ ಲಯನ್ ಪಾತ್ರರಾಗಿದ್ದಾರೆ.ಟೆಸ್ಟ್‌ನಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಬೌಲರ್‌ಗಳು ಇವರು :
ಮುತ್ತಯ್ಯ ಮುರಳೀಧರನ್ (ಶ್ರೀಲಂಕಾ । 133 ಪಂದ್ಯ, 800 ವಿಕೆಟ್),ಶೇನ್ ವಾರ್ನ್ (ಆಸ್ಟ್ರೇಲಿಯಾ । 145 ಪಂದ್ಯ । 708 ವಿಕೆಟ್ ), ಜೇಮ್ಸ್ ಆ್ಯಂಡರ್‌ಸನ್ (ಇಂಗ್ಲೆಂಡ್ । 183 ಪಂದ್ಯ । 690 ವಿಕೆಟ್), ಅನಿಲ್ ಕುಂಬ್ಳೆ (ಭಾರತ । 132 ಪಂದ್ಯ । 619 ವಿಕೆಟ್), ಸ್ಟುವರ್ಟ್ ಬ್ರಾಡ್ (ಇಂಗ್ಲೆಂಡ್ । 167 ಪಂದ್ಯ । 604 ವಿಕೆಟ್), ಗ್ಲೆನ್ ಮೆಗ್ರಾಥ್ (ಆಸ್ಟ್ರೇಲಿಯಾ । 124 ಪಂದ್ಯ । 563 ವಿಕೆಟ್), ಕರ್ಟ್ನಿ ವಾಲ್ಶ್ (ವೆಸ್ಟ್‌ಇಂಡೀಸ್ । 132 ಪಂದ್ಯ । 519 ವಿಕೆಟ್), ನೇಥನ್ ಲಯನ್ (ಆಸ್ಟ್ರೇಲಿಯಾ । 123 ಪಂದ್ಯ । 501 ವಿಕೆಟ್)