ರಾಷ್ಟ್ರೀಯ ಅಥ್ಲೆಟಿಕ್ಸ್‌: ಕರ್ನಾಟಕದ ಸ್ನೇಹಾ, ಮಹಿಳಾ ರಿಲೇ ತಂಡ ಬಂಗಾರದ ಸಾಧನೆ

| Published : Jun 29 2024, 12:42 AM IST / Updated: Jun 29 2024, 04:29 AM IST

ರಾಷ್ಟ್ರೀಯ ಅಥ್ಲೆಟಿಕ್ಸ್‌: ಕರ್ನಾಟಕದ ಸ್ನೇಹಾ, ಮಹಿಳಾ ರಿಲೇ ತಂಡ ಬಂಗಾರದ ಸಾಧನೆ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕ ಶುಕ್ರವಾರ 2 ಚಿನ್ನ ಸೇರಿದಂತೆ ಒಟ್ಟು 4 ಪದಕಗಳನ್ನು ಗೆದ್ದುಕೊಂಡಿದೆ. ಕೊನೆ 2 ದಿನ ಕರ್ನಾಟಕದ ಅಥ್ಲೀಟ್‌ಗಳು ಮತ್ತಷ್ಟು ಪದಕಗಳನ್ನು ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.

ಪಂಚಕುಲಾ(ಹರ್ಯಾಣ): 63ನೇ ರಾಷ್ಟ್ರೀಯ ಅಂತರ್‌-ರಾಜ್ಯ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನ 2ನೇ ದಿನ ಕರ್ನಾಟಕ ಪದಕ ಖಾತೆ ತೆರೆದಿದೆ. 2 ಚಿನ್ನ ಸೇರಿದಂತೆ ಒಟ್ಟು 4 ಪದಕಗಳನ್ನು ಕರ್ನಾಟಕ ಗೆದ್ದುಕೊಂಡಿದೆ.

 ಶುಕ್ರವಾರ ನಡೆದ ಮಹಿಳೆಯರ 100 ಮೀ. ಓಟದ ಸ್ಪರ್ಧೆಯಲ್ಲಿ ಸ್ನೇಹಾ ಎಸ್‌.ಎಸ್‌. 11.62 ಸೆಕೆಂಡ್‌ಗಳಲ್ಲಿ ಕ್ರಮಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ತಮಿಳುನಾಡಿನ ಗಿರಿಧರಾಣಿ(11.77 ಸೆಕೆಂಡ್‌) ಬೆಳ್ಳಿ, ತೆಲಂಗಾಣದ ನಿತ್ಯಾ(11.79 ಸೆಕೆಂಡ್‌) ಕಂಚು ಜಯಿಸಿದರು. ////////////

 12.11 ಸೆಕೆಂಡ್‌ಗಳಲ್ಲಿ ಕ್ರಮಿಸಿದ ರಾಜ್ಯದ ಧಾನೇಶ್ವರಿ 7ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.ಮಹಿಳೆಯರ 4*100 ಮೀ. ರಿಲೇ ಸ್ಪರ್ಧೆಯಲ್ಲಿ ಸ್ನೇಹಾ, ಕಾವೇರಿ ಪಾಟೀಲ್‌, ಸಿಮಿ ಹಾಗೂ ಧಾನೇಶ್ವರಿ ಅವರನ್ನೊಳಗೊಂಡ ತಂಡ 45.38 ಸೆಕೆಂಡ್‌ಗಳಲ್ಲಿ ಕ್ರಮಿಸಿ ಕೂಟ ದಾಖಲೆಯೊಂದಿಗೆ ಚಿನ್ನದ ಪದಕ ತನ್ನದಾಗಿಸಿಕೊಂಡಿತು. ಮಹಿಳೆಯರ ಜಾವೆಲಿನ್‌ ಎಸೆತದಲ್ಲಿ ರಮ್ಯಶ್ರೀ ಜೈನ್‌ 53.14 ಮೀಟರ್‌ ದೂರ ದಾಖಲಿಸಿ ಬೆಳ್ಳಿ ಪದಕ ಗೆದ್ದರು. 

ಕರಿಶ್ಮಾ ಸನಿಲ್‌ 50.63 ಮೀಟರ್‌ ದೂರಕ್ಕೆ ಜಾವೆಲಿನ್‌ ಎಸೆದು 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.ಮಹಿಳೆಯರ ಟ್ರಿಪಲ್‌ ಜಂಪ್‌ನಲ್ಲಿ ಪವಿತ್ರಾ 13.20 ಮೀಟರ್‌ ದೂರಕ್ಕೆ ಜಿಗಿದು ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಗುರುವಾರ ಕೂಟ ಆರಂಭಗೊಂಡಿದ್ದು, ಜೂ.30ರಂದು ಕೊನೆಗೊಳ್ಳಲಿದೆ. ಕೊನೆ 2 ದಿನ ಕರ್ನಾಟಕದ ಅಥ್ಲೀಟ್‌ಗಳು ಮತ್ತಷ್ಟು ಪದಕಗಳನ್ನು ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.